For Quick Alerts
  ALLOW NOTIFICATIONS  
  For Daily Alerts

  ರಣ್ವೀರ್ ಸಿಂಗ್ '83' ಚಿತ್ರಕ್ಕೆ ಕಿಚ್ಚ ಸುದೀಪ್ ಸಾಥ್!

  |

  ನಟ ಕಿಚ್ಚ ಸುದೀಪ್​ ಅವರು ಸಿನಿಮಾದ ಜೊತೆಗೆ ಕ್ರಿಕೆಟ್‌ನಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ.​ ಕ್ರಿಕೆಟ್ ಅಂತ ಬಂದರೆ ಕಿಚ್ಚ ಮೈದಾನಕ್ಕೆ ಇಳಿದು ಬ್ಯಾಟ್​ ಬೀಸುತ್ತಾರೆ. ಈಗ ಕಿಚ್ಚನ ಕ್ರಿಕೆಟ್ ಕಹಾನಿ ಬಗ್ಗೆ ಮಾತನಾಡಲು ಕಾರಣ ಬಾಲಿವುಡ್‌ನ '83' ಸಿನಿಮಾ.

  ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ '83' ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಹಲವು ಕಾತರರಾಗಿದ್ದಾರೆ. ಮೊದಲ ಲಾಕ್​ಡೌನ್‌ಗೂ ಮುನ್ನವೇ ಈ ಸಿನಿಮಾ ರಿಲೀಸ್​ಗೆ ಸಿದ್ಧವಾಗಿತ್ತು. ಆದರೆ ಲಾಕ್​ಡೌನ್​ ಜಾರಿಯಾದ ಬಳಿಕ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು. ರಣವೀರ್​ ಸಿಂಗ್​ ನಟನೆಯ ಈ ಚಿತ್ರ ಈಗ ಡಿ.24ರಂದು ತೆರೆ ಕಾಣಲಿದೆ.

  ಅಷ್ಟಕ್ಕೂ ಈ ಚಿತ್ರಕ್ಕೂ ಸುದೀಪ್ ಅವರಿಗೂ ಏನು ಕನೆಕ್ಷನ್ ಅಂತೀರಾ. ಕನೆಕ್ಷನ್ ಇದೆ. ಈ ಚಿತ್ರದಲ್ಲಿ ಕಿಚ್ಚ ಸುದಿಪ್ ಅಭಿನಯಿಸಿಲ್ಲ. ಆದರೆ ಈಗ ಈ ಚಿತ್ರ ತಂಡವನ್ನು ಸುದೀಪ್ ಸೇರಿ ಕೊಂಡಿದ್ದಾರೆ.

  '83' ಕನ್ನಡ ಅವತರಣಿಕೆ ಅರ್ಪಿಸಲಿರುವ ಸುದೀಪ್!

  '83' ಕನ್ನಡ ಅವತರಣಿಕೆ ಅರ್ಪಿಸಲಿರುವ ಸುದೀಪ್!

  ಕನ್ನಡದಲ್ಲಿ '83' ಸಿನಿಮಾವನ್ನು ಸುದೀಪ್​ ಅರ್ಪಿಸುತ್ತಿದ್ದಾರೆ. ಮೂಲತಃ ಹಿಂದಿಯಲ್ಲಿ ಮೂಡಿಬಂದಿರುವ ಈ ಸಿನಿಮಾ ಇತರೆ ಭಾಷೆಗಳಿಗೆ ಡಬ್​ ಆಗಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳಿನಲ್ಲಿ '83' ರಿಲೀಸ್​ ಆಗಲಿದೆ. ಕನ್ನಡ ಅವತರಣಿಕೆಯನ್ನು ಸುದೀಪ್​ ಬಿಡುಗಡೆ ಮಾಡುತ್ತಿದ್ದಾರೆ. ಆ ಕಾರಣದಿಂದ ಈ ಚಿತ್ರ ಭಾರಿ ನಿರೀಕ್ಷೆ ಮೂಡಿಸಿದೆ.

  ಇಡೀ ಭಾರತೀಯ ಚಿತ್ರ ರಂಗವೇ ಎದುರು ನೋಡುತ್ತಿರುವ ಸಿನಿಮಾಗಳಲ್ಲಿ ಬಹು ಭಾಷಾ ಫ್ಯಾನ್ ಇಂಡಿಯ ಸಿನಿಮಾ '83' ಕೂಡ ಒಂದು. ಭಾರತ ಏಕ ದಿನದ ವಿಶ್ವ ಕಪ್ ಕ್ರಿಕೆಟ್ ತನ್ನ ಮಡಿಲಿಗೆ ಸೇರಿಸಿಕೊಂಡ ವರ್ಷ ಕುರಿತಾದ ಸಿನಿಮಾ ಇದು. ಈ ಚಿತ್ರ ಇದೆ ಡಿಸೆಂಬರ್ ತಿಂಗಳ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಿಡುಗಡೆ ಆಗಲು ಸಜ್ಜಾಗಿದೆ.

  ಕ್ರಿಕೆಟ್ ಸಮವಸ್ತ್ರದಲ್ಲಿಯೂ ಇಷ್ಟ ಆಗುತ್ತಾರೆ ಕಿಚ್ಚ!

  ಕ್ರಿಕೆಟ್ ಸಮವಸ್ತ್ರದಲ್ಲಿಯೂ ಇಷ್ಟ ಆಗುತ್ತಾರೆ ಕಿಚ್ಚ!

  '83' ಕನ್ನಡದಲ್ಲಿ ಡಬ್ ಮಾಡಲಾದ ಚಿತ್ರವನ್ನು ಕ್ರಿಕೆಟ್ ಪ್ರೇಮಿ, ನಟ, ನಿರ್ದೇಶಕ, ನಿರ್ಮಾಪಕ ಕಿಚ್ಚ ಸುದೀಪ್ ಅವರು ತೆರೆಗೆ ಅರ್ಪಿಸುತ್ತಿದ್ದಾರೆ. ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಇಂದರೊಂದಿಗೆ ಕಿಚ್ಚ ಸುದೀಪ್ ರಿಲಯನ್ಸ್ ಎಂಟರ್ಟೈನ್ಮೇಂಟ್ ಜೊತೆ ಸೇರಿ ಬಹು ನಿರೀಕ್ಷಿತ ಸಿನಿಮಾ '83' ತೆರೆಗೆ ಅರ್ಪಣೆ ಮಾಡುತ್ತಿದ್ದಾರೆ.

  ಕಳೆದ ಎರಡೂವರೆ ದಶಕಗಳಲ್ಲಿ ಕಿಚ್ಚ ಸುದೀಪ್ ಕೇವಲ ಒಬ್ಬ ಸಿನಿಮಾ ನಟನಾಗಿ ಮಾತ್ರ ಗುರುತಿಸಿಕೊಂಡಿಲ್ಲ. ಬದಲಿಗೆ ಕಿಚ್ಚ ಕ್ರಿಕೆಟ್ ಯುನಿಫಾರ್ಮ್‌ನಲ್ಲೀ ಎಲ್ಲರಿಗೂ ಇಷ್ಟ ಆಗಿದ್ದಾರೆ. ಕಿಚ್ಚ ಪ್ರತಿಭೆಯ ಬಗ್ಗೆ ಎಲ್ಲರಿಗೂ ಗೊತ್ತು. ಅವರು ಭಾರತೀಯ ಚಿತ್ರರಂಗದ ಅತ್ಯುತ್ತಮ ನಟ, ಬರಹಗಾರ, ನಿರ್ಮಾಪಕ, ನಿರ್ದೇಶಕ, ಸಿ ಸಿ ಎಲ್ ಮೂಲಕ ತಮ್ಮ ನೆಚ್ಚಿನ ಕ್ರೀಡೆ ಕ್ರಿಕೆಟ್ ಪ್ರೇಮವನ್ನೂ ಜೀವಂತವಾಗಿರಿಸಿದ್ದಾರೆ.

  1983ರ ಏಕದಿನ ವಿಶ್ವ ಕಪ್ ಕಹಾನಿ ಈ '83' !

  1983ರ ಏಕದಿನ ವಿಶ್ವ ಕಪ್ ಕಹಾನಿ ಈ '83' !

  "ಕನ್ನಡದಲ್ಲಿ ತೆರೆ ಕಾಣುತ್ತಿರುವ ಬಾಲಿವುಡ್‌ನ '83' ಸಿನಿಮಾವನ್ನು, ನಾನು ಅರ್ಪಿಸಲು ಸಂತೋಷ ಇದೆ". ಎನ್ನುವ ಕಿಚ್ಚ ಸುದೀಪ್ " ಕ್ರಿಕೆಟ್ ಚರಿತ್ರೆ ಪುಟಗಳಲ್ಲಿ ಸೇರಿರುವ ಬಹುದೊಡ್ಡ ಇತಿಹಾಸ ಇದು. 1983 ಭಾರತ, ವೆಸ್ಟ್ ಇಂಡೀಸ್ ವಿರುದ್ದ ಗೆದ್ದ ಏಕದಿನದ ವಿಶ್ವ ಕಪ್ ವಿಷಯ ಕುರಿತಾದ ಚಿತ್ರ ಇದು" ಎಂದಿದ್ದಾರೆ. ಜೊತೆಗೆ ಕ್ರಿಕೆಟ್ ಎನ್ನುವುದು ಭಾರತಿಯರಿಗೆ ಒಂದು ಧರ್ಮವೇ ಆಗಿ ಹೋಗಿದೆ. ಹೀಗಿರುವಾಗ ಈ ನೈಜ ಕಥೆಯನ್ನು ತೆರೆಯ ಮೇಲೆ ತಂದಿರುವುದಕ್ಕೆ ಅಭಿನಂದನೆಗಳು ಎಂದಿದ್ದಾರೆ.


  '83' ಚಿತ್ರದ ನಿರ್ದೇಶಕ ಕಬೀರ್ ಖಾನ್, ಕನ್ನಡ ಅವತರಣಿಕೆಯನ್ನು ಕಿಚ್ಚ ಸುದೀಪ್ ತೆರೆಗೆ ಅರ್ಪಣೆ ಮಾಡುತ್ತಾ ಇರುವುದು ಬಹಳ ಸಂತೋಷದ ವಿಚಾರ ಎನ್ನುತ್ತಾರೆ. ಕಿಚ್ಚ ಸುದೀಪ್ ಅವರು ತಮ್ಮ ತಂಡದೊಂದಿಗೆ ಸೇರಿಕೊಂಡಿರುವುದರಿಂದ '83' ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗಲಿದೆ ಎಂದು ಕಬೀರ್ ಖಾನ್ ಹೇಳಿಕೊಂಡಿದ್ದಾರೆ.

  83 ಚಿತ್ರದಲ್ಲಿ ಸತಿ-ಪತಿಯ ಪಾತ್ರದಲ್ಲಿ ರಣ್ವೀರ್-ದೀಪಿಕಾ!

  83 ಚಿತ್ರದಲ್ಲಿ ಸತಿ-ಪತಿಯ ಪಾತ್ರದಲ್ಲಿ ರಣ್ವೀರ್-ದೀಪಿಕಾ!

  ರಣವೀರ್ ಸಿಂಗ್ '83' ಚಿತ್ರದಲ್ಲಿ ಕಪಿಲ್ ದೇವ್ ಪಾತ್ರವನ್ನು ನಿರ್ವಹಿಸಿದ್ದಾರೆ. ತಾಹೀರ್ ರಾಜ್ ಭಾಸಿನ್, ಜೀವ, ಸಾಕಿಬ್ ಸಲೀಂ, ಜತಿನ್ ಸಾರ್ಣ, ಚಿರಾಗ್ ಪಾಟಿಲ್, ದಿನಕರ್ ಶರ್ಮ, ನಿಶಾಂತ್ ದಾಹಿಯ, ಹಾರ್ಡಿ ಸಂಧು, ಸಾಹಿಲ್ ಖಟ್ಟರ್, ಅಮ್ಮಿ ವಿರ್ಕ್, ಅದಿನಾಥ್ ಕೊತಾರೆ, ಧೈರ್ಯ ಕರ್ವ, ಆರ್ ಬದ್ರಿ ಹಾಗೂ ಪಂಕಜ್ ತೃಪತಿ ತಾರಾಗಣದಲ್ಲಿ ಇದ್ದಾರೆ.

  ಇನ್ನು ರಣ್ವೀರ್ ಸಿಂಗ್‌ ಜೊತೆಗೆ ಪತ್ನಿ ದೀಪಿಕಾ ಪಡುಕೋಣೆ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಲಿದ್ದಾರೆ. ಕಪಿಲ್ ದೇವ್ ಪತ್ನಿ ರೋಮಿ ಪಾತ್ರದಲ್ಲಿ ದೀಪಿಕಾ ಅಭಿನಯಿಸಿದ್ದಾರೆ.

  ಕನ್ನಡದ 83 ಸಿನಿಮಾವನ್ನು ಶಾಲಿನಿ ಆರ್ಟ್ಸ್ ಹಾಗೂ ರಿಲಯನ್ಸ್ ಎಂಟರ್ಟೈನ್ಮೇಂಟ್ ಸಂಸ್ಥೆ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಡಿಸೆಂಬರ್ 24, 2021 ರಿಂದ 83 ಬೆಳ್ಳಿ ಪರದೆಗೆ ಅಪ್ಪಳಿಸಲಿದೆ.

  English summary
  Kannada superstar Kichcha Sudeep to present Kannada version of Ranveer Singh Starrer '83', know more,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X