»   » ಕಾವೇರಿ ಬಗ್ಗೆ ತಮಿಳು ನಟ ಸಿಂಬು ಆಡಿದ ಮಾತಿಗೆ ಶಿಳ್ಳೆ ಹೊಡೆದ ಕನ್ನಡಿಗರು!

ಕಾವೇರಿ ಬಗ್ಗೆ ತಮಿಳು ನಟ ಸಿಂಬು ಆಡಿದ ಮಾತಿಗೆ ಶಿಳ್ಳೆ ಹೊಡೆದ ಕನ್ನಡಿಗರು!

Posted By:
Subscribe to Filmibeat Kannada
ಸಿಲಂಬರಸನ್ ಅಲಿಯಾಸ್ ಸಿಂಬು ಕಾವೇರಿ ಬಗ್ಗೆ ಆಡಿದ ಮಾತುಗಳು ಕೇಳಿ | Oneindia Kannada

ಕಾವೇರಿ ನದಿ ವಿವಾದದ ಬಗ್ಗೆ ತಮಿಳಿನ ಖ್ಯಾತ ನಟ ಸಿಂಬು ಒಂದು ಹೇಳಿಕೆ ನೀಡಿದ್ದರು. ಕಾವೇರಿ ನೀರಿನ ಬಗ್ಗೆ ಸಿಂಬು ಹೇಳಿಕೆ ಹೃದಯಸ್ಪರ್ಶಿ ಆಗಿತ್ತು. ಅವರ ಪ್ರತಿ ಮಾತು ಕನ್ನಡಭಿಮಾನಿಗಳ ಮನಸು ಮುಟ್ಟಿತ್ತು. ಒಬ್ಬ ಕಾಲಿವುಡ್ ಸ್ಟಾರ್ ನಟನಾದರೂ ಕನ್ನಡದ ಬಗ್ಗೆ ಅವರು ಆಡಿದ ಮಾತುಗಳು ಕರ್ನಾಟಕದ ಜನರಿಗೆ ಬಹಳ ಇಷ್ಟ ಆಗಿದೆ.

ಕಾವೇರಿ ಬಗ್ಗೆ ತಮಿಳು ನಟ ಸಿಂಬು ಭಾವನಾತ್ಮಕ ಭಾಷಣದಲ್ಲೇನಿದೆ? ಇಲ್ಲಿದೆ ಅನುವಾದ

ಪತ್ರಿಕಾಗೋಷ್ಠಿಯಲ್ಲಿ ಈ ರೀತಿ ಮಾತನಾಡಿದ ಸಿಂಬು ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಿಂಬು ಹೇಳಿಕೆಯ ವಿಡಿಯೋ ನೋಡಿದ ತಕ್ಷಣ ಜನ ಪಟ್ ಅಂತ ಶೇರ್ ಮಾಡುತ್ತಿದ್ದಾರೆ. ''ಕನ್ನಡಿಗರನ್ನು ಅರ್ಥ ಮಾಡಿಕೊಂಡ ಮೊದಲ ತಮಿಳಿಗರು ನೀವು'' ಎಂದು ಸಿಂಬುಗೆ ಅನೇಕ ಜನರು ಬೇಷ್ ಎನ್ನುತ್ತಿದ್ದಾರೆ.

''ಕನ್ನಡಿಗರಿಗೆ ನೀರಿಲ್ಲ, ಇನ್ನೂ ನಮಗೆಲ್ಲಿಂದ ಕೊಡ್ತಾರೆ'' ತಮಿಳು ನಟನ ಹೃದಯಸ್ಪರ್ಶಿ ಹೇಳಿಕೆ

ಅಂದಹಾಗೆ, ಕಾವೇರಿ ವಿಚಾರವಾಗಿ ಸಿಂಬು ಕೊಟ್ಟ ಹೇಳಿಕೆ ಬಗ್ಗೆ ನಿಮ್ಮ 'ಫಿಲ್ಮಿ ಬೀಟ್ ಕನ್ನಡ' ವರದಿ ಮಾಡಿತ್ತು. ಇದೀಗ ಅದಕ್ಕೆ ಸಾಕಷ್ಟು ಓದುಗರು ಫೇಸ್ ಬುಕ್ ನಲ್ಲಿ ತಮ್ಮ ಕಮೆಂಟ್ ಗಳ ಮೂಲಕ ಪ್ರತಿಕ್ರಿಯೆ ನೀಡಿದ್ದರೆ ಮುಂದೆ ಓದಿ...

ಹ್ಯಾಟ್ಸ್ ಆಫ್

''Hat's off sir ನಾವೆಲ್ಲ ಭಾರತೀಯರು.. ನಾವೆಲ್ಲ ಒಂದೇ ಎಂದು ಸಂದೇಶ ಕೊಟ್ಟ ನಿಮಗೆ ಕೋಟಿ ನಮನಗಳು ಸರ್'' ಎಂದು ಕನ್ನಡಿಗರು ನಟ ಸಿಂಬು ಕೊಟ್ಟ ಹೇಳಿಕೆಯನ್ನು ಸ್ವಾಗತ ಮಾಡಿದ್ದಾರೆ.

ಕನ್ನಡಿಗರ ಪರವಾಗಿ ಮಾತನಾಡಿದ ಮೊದಲ ತಮಿಳಿಗರು

''ಕನ್ನಡಿಗರನ್ನು ಅರ್ಥ ಮಾಡಿಕೊಂಡಿದ್ದಕ್ಕೆ ನಿಮಗೆ ಧನ್ಯವಾದ. ಕನ್ನಡಿಗರ ಪರವಾಗಿ ಮಾತನಾಡಿದ ಮೊದಲ ತಮಿಳಿಗರು ನೀವು'' ಎಂದು ಸಿಂಬುಗೆ ಅನೇಕ ಜನರು ಬೇಷ್ ಎನ್ನುತ್ತಿದ್ದಾರೆ.

ಸಿಂಬು ಹೇಳಿದಂತೆ ವಿಡಿಯೋ ಮಾಡಲು ಸಿದ್ಧ

''ಕರ್ನಾಟಕದ ಅಷ್ಟೂ ಜನರು ಬರುವ ಹನ್ನೊಂದನೇ ತಾರೀಖು ಬುಧವಾರ, ಮಧ್ಯಾಹ್ನ ಮೂರು ಗಂಟೆಯಿಂದ ಸಂಜೆ ಆರು ಗಂಟೆ ಒಳಗೆ ಒಂದು ಲೋಟದಲ್ಲಿ ನೀರು ತುಂಬಿ ಹಿಡಿದು, ನಾವು ತಮಿಳರಿಗೆ ನೀರು ಕೊಡ್ತೀವಿ ಅಂತ ಅದನ್ನ ವಿಡಿಯೋ ಮಾಡಿ ತೋರಿಸಿ' ಎಂದು ಸಿಂಬು ಹೇಳಿದ್ದರು. ಅದನ್ನು ಅನೇಕರು ಮಾಡಲು ಸಿದ್ಧರಿದ್ದಾರೆ.

ಸಿಂಬು ಅವರನ್ನು ಗೌರವಿಸುತ್ತೇವೆ

''ಸಿಂಬು ಕೊಟ್ಟ ಹೇಳಿಕೆ ಕೇಳಿ ಕನ್ನಡಿಗರು ಖುಷಿ ಆಗಿದ್ದಾರೆ. ''ನಿಮ್ಮ ಹೇಳಿಕೆಯನ್ನು ನಾವು ಗೌರವಿಸುತ್ತೇವೆ. ರೈತರು ಈ ದೇಶದ ಬೆನ್ನೆಲುಬು ನಮಗೆ ಅವರ ಬೆಂಬಲ ಬೇಕಿದೆ ''ಎಂದು ಕೆಲವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಜನರು ಅರ್ಥ ಮಾಡಿಕೊಳ್ಳಬೇಕು

''ಕಾವೇರಿ ಸಮಸ್ಯೆಯನ್ನು ಎರಡು ರಾಜ್ಯದ ಜನರು ಅರ್ಥ ಮಾಡಿಕೊಳ್ಳಬೇಕು. ಹಾಗೆ ಅರ್ಧ ಮಾಡಿಕೊಂಡರೆ ಇದನ್ನು ಅದಷ್ಟು ಬೇಗ ಬಗೆಹರಿಸಬಹುದು. ಕಾವೇರಿ ಸಮಸ್ಯೆ ರಾಜಕೀಯ ಮತ್ತು ಇಗೋ ಸಮಸ್ಯೆ ಹೊಂದಿದೆ'' ಎಂದು ಕೆಲವರು ಬರೆದಿದ್ದಾರೆ.

ಸಿಂಬು ಮಾತು ಕೇಳಿ ರೋಮಾಂಚನ ಆಯ್ತು

''ಸಿಂಬು ಅವರ ಮಾತು ಹೇಳುತ್ತಿದ್ದರೆ ರೋಮಾಂಚನ ಆಯ್ತು. ಅವರ ಒಬ್ಬ ಪ್ರಬುದ್ಧ ವ್ಯಕ್ತಿ. ಕಾವೇರಿ ನೀರನ್ನು ತಮಿಳುನಾಡಿಗೆ ಬಿಡೋಕ್ಕೆ ನಾವು ಸಿದ್ಧ.'' ಅಂತ ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ.

ನೀರನ್ನು ಹಂಚಿಕೊಳ್ಳಬೇಕು

''ಅಕ್ಕ ಪಕ್ಕದ ರಾಜ್ಯದವರಾಗಿ ನಾವು ನೀರನ್ನು ಹಂಚಿಕೊಳ್ಳಬೇಕು. ಸಿಂಬು ಅವರ ಮಾತು ಸ್ಪೂರ್ತಿ ನೀಡುವ ಹಾಗಿದೆ.'' ಎಂಬ ಪ್ರತಿಕ್ರಿಯೆ ಸಿಂಬು ಹೇಳಿಕೆಗೆ ಬಂದಿದೆ.

English summary
Kannadigas have taken their Facebook account to appreciate Tamil Actor Simbu's speech over Cauvery water dispute.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X