For Quick Alerts
  ALLOW NOTIFICATIONS  
  For Daily Alerts

  'ರಾಗ' ಚಿತ್ರಕ್ಕೆ ಅನ್ಯಾಯ, ಸಿಡಿದೆದ್ದ ಕನ್ನಡಿಗರು.!

  |

  'ಬಾಹುಬಲಿ-2' ಚಿತ್ರ ಬಿಡುಗಡೆಯಿಂದಾಗಿ ತಮ್ಮ 'ರಾಗ' ಸಿನಿಮಾಗೆ ಅನ್ಯಾಯ ಆಗಿದೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ನಿನ್ನೆ ರಾತ್ರಿ(ಏಪ್ರಿಲ್ 26) ತಮ್ಮ ಫೇಸ್ ಬುಕ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿ ತಮಗಾದ ನೋವನ್ನ ಹೇಳಿಕೊಂಡಿದ್ರು.['ಬಾಹುಬಲಿ'ಗೆ ಬಲಿಯಾಯ್ತು ಕನ್ನಡ ಚಿತ್ರ: ಇದು ನಿರ್ದೇಶಕರ ನೋವಿನ 'ರಾಗ']

  'ಬಾಹುಬಲಿ-2' ಬರುತ್ತಿರುವ ಕಾರಣಕ್ಕೆ ಚಿತ್ರಮಂದಿರಗಳಿಂದ 'ರಾಗ' ಚಿತ್ರವನ್ನ ಎತ್ತಂಗಡಿ ಮಾಡುತ್ತಿರುವ ವಿಷಯವನ್ನ ಪಿ.ಸಿ.ಶೇಖರ್ ತಮ್ಮ ಫೇಸ್ ಬುಕ್ ವಿಡಿಯೋದಲ್ಲಿ ಪ್ರಸ್ತಾಪಿಸಿದ್ದರು.

  ಪಿ.ಸಿ.ಶೇಖರ್ ಆಡಿದ ಮಾತುಗಳನ್ನ ಕೇಳಿದ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಸಿಡಿದೆದ್ದಿದ್ದಾರೆ. ಪರಭಾಷೆಯ ಸಿನಿಮಾದ ಅಬ್ಬರದ ಮುಂದೆ ಕನ್ನಡದ ಕಲರ್ ಫುಲ್ ಸಿನಿಮಾವೊಂದು ಕರಗಿ ಹೋಗುತ್ತಿರುವ ಬಗ್ಗೆ ಕನ್ನಡಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

  ['ಬಾಹುಬಲಿ' ಬೆಂಬಲಿಸಿ ಕನ್ನಡ ಚಿತ್ರಗಳಿಗೆ ತೊಂದರೆ ಕೊಟ್ಟರೆ ಹುಷಾರ್.!]

  'ಸಪೋರ್ಟ್ ರಾಗ'

  'ಸಪೋರ್ಟ್ ರಾಗ'

  'ಸಪೋರ್ಟ್ ರಾಗ' ಎಂಬ ಹೆಸರಿನ ಹ್ಯಾಷ್ ಟ್ಯಾಗ್ ಬಳಸಿ ಫೇಸ್ ಬುಕ್ ನಲ್ಲಿ ಕನ್ನಡಿಗರು ಅಭಿಯಾನ ಶುರು ಮಾಡಿದ್ದಾರೆ. ಅನೇಕ ಜನರು ಇಲ್ಲಿ ತಮ್ಮದೆ ರೀತಿಯಲ್ಲಿ 'ರಾಗ' ಸಿನಿಮಾಗೆ ಸಪೋರ್ಟ್ ಮಾಡುತ್ತಿದ್ದಾರೆ.

  'ರಾಗ' ಜೊತೆ ನಾವಿದ್ದೇವೆ

  'ರಾಗ' ಜೊತೆ ನಾವಿದ್ದೇವೆ

  ''ರಾಗ ಸಿನಿಮಾದ ಜೊತೆ ನಾವಿದ್ದೇವೆ. ನಾಳೆ ಇನ್ನೊಂದು ಬಾರಿ ಸಿನಿಮಾ ನೋಡುತ್ತೇವೆ. 'ರಾಗ' ರೀತಿಯ ಒಂದು ಅದ್ಭುತ ಸಿನಿಮಾಗೆ ಅನ್ಯಾಯ ಆಗಬಾರದು'' ಎನ್ನುತ್ತಿದ್ದಾರೆ ಕನ್ನಡ ಸಿನಿ ಪ್ರಿಯರು.[ಇಂದು ರಾತ್ರಿಯಿಂದಲೇ ಕರ್ನಾಟಕದಲ್ಲಿ 'ಬಾಹುಬಲಿ-2' ಪ್ರದರ್ಶನ: ಟಿಕೆಟ್ ಬೆಲೆ ಅಬ್ಬಬ್ಬಾ.!]

  ಯಾರನ್ನೂ ದ್ವೇಷಿಸುವುದಿಲ್ಲ

  ಯಾರನ್ನೂ ದ್ವೇಷಿಸುವುದಿಲ್ಲ

  ''ನಾವು ಯಾವ ಭಾಷೆಯನ್ನು ದ್ವೇಷಿಸುತ್ತಿಲ್ಲ. ಅದರೆ, ನಮ್ಮ ಮೊದಲ ಆದ್ಯತೆ ಕನ್ನಡ ಸಿನಿಮಾಗಳಿಗೆ, 'ಬಾಹುಬಲಿ'ಗಾಗಿ ಕನ್ನಡದ 'ರಾಗ' ಸಿನಿಮಾವನ್ನ ತೆಗೆಯುವುದು ಯಾವ ನ್ಯಾಯ'' ಅಂತ ಕೆಲವರು ಪ್ರಶ್ನಿಸಿದ್ದಾರೆ.

  ನಿರ್ದೇಶಕರ ಸಾಥ್

  ನಿರ್ದೇಶಕರ ಸಾಥ್

  'ಜಟ್ಟ' ಖ್ಯಾತಿಯ ನಿರ್ದೇಶಕ ಗಿರಿರಾಜ್ ''ರಾಗ' ಸಿನಿಮಾ ಅನುರಾಗ, ಆದ್ರೆ ಪ್ರೇಕ್ಷಕ ಮಾತ್ರ ಅದಕ್ಕೆ ಶುಭಯೋಗ ತೋರಿಸಲಿಲ್ಲ'' ಎಂದಿದ್ದಾರೆ. 'ಲೂಸಿಯ' ಪವನ್ ಕುಮಾರ್ ಸಹ ಸಿನಿಮಾದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಎಲ್ಲಿದ್ದಾರೆ ಹೋರಾಟಗಾರರು

  ಎಲ್ಲಿದ್ದಾರೆ ಹೋರಾಟಗಾರರು

  'ಎಲ್ಲಿದ್ದಾರೆ ಹೋರಾಟಗಾರರು' - ಇದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಕೇಳುತ್ತಿರುವ ಪ್ರಶ್ನೆಯಾಗಿದೆ. ''ಬಾಹುಬಲಿ-2' ಸಿನಿಮಾವನ್ನ ನಿಲ್ಲಿಸಿಬಿಡುತ್ತೇವೆ ಎಂದು ಹೇಳಿದ್ದ ಹೋರಾಟಗಾರರು ಒಂದು ಕನ್ನಡ ಚಿತ್ರಕ್ಕೆ ಅನ್ಯಾಯವಾದ್ರೂ ಎಲ್ಲಿದ್ದಾರೆ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  English summary
  Kannadigas have taken their Facebook Page to support P.C.Shekar directorial 'Raaga' movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X