Don't Miss!
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- News
Mangaluru cooker blast: ಸುಟ್ಟಗಾಯಗಳಿಂದ ಚೇತರಿಸಿಕೊಂಡ ಆರೋಪಿಯನ್ನು ವಶಕ್ಕೆ ಪಡೆಯಲಿರುವ ಎನ್ಐಎ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಂಕ್ರಾಂತಿ ಹಬ್ಬಕ್ಕೆ ಶ್ಯಾನೇ ಟಾಪ್ ಆಗಿ ಖರೀದಿ ಮಾಡಿದ ಬರ್ತ್‌ಡೇ ಗರ್ಲ್ ಅದಿತಿ ಪ್ರಭುದೇವ
ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಅದಿತಿ ಪ್ರಭುದೇವ. ಇತ್ತೀಚೆಗೆ ರಚಿತಾ ರಾಮ್ ಬಿಟ್ಟರೆ ಕನ್ನಡ ನಟಿಯೊಬ್ಬರು ಈ ಮಟ್ಟಿಗೆ ಬ್ಯುಸಿಯಾಗಿದ್ದು ಯಾರೂ ನೋಡಿಯೇ ಇಲ್ಲ. ಕೈ ತುಂಬಾ ಸಿನಿಮಾಗಳನ್ನು ಇಟ್ಟುಕೊಂಡು ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ. ಹಂತ ಹಂತವಾಗಿ ಸಿನಿಮಾರಂಗದಲ್ಲಿ ತನ್ನದೇ ಸ್ಥಾನ ಗಿಟ್ಟಿಸಿಕೊಂಡಿರುವ ಈ ನಟಿ ಡಬಲ್ ಸಂಭ್ರಮದಲ್ಲಿದ್ದಾರೆ.
ದಾವಣಗೆರೆ ಮೂಲದ ಅದಿತಿ ಪ್ರಭುದೇವ ಕನ್ನಡ ಚಿತ್ರರಂಗ ಬಹುಬೇಡಿಕೆಯ ನಟಿ. ಇಂದು( ಜನವರಿ 13) ಅದಿತಿ ಪ್ರಭುದೇವ ತಮ್ಮ 28ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜೊತೆ ನಾಳೆ (ಜನವರಿ 14) ಸಂಕ್ರಾಂತಿ ಹಬ್ಬ. ಹೀಗಾಗಿ ಎರಡು ಸಂಭ್ರಮವನ್ನು ಒಟ್ಟಿಗೆ ಶಾಪಿಂಗ್ ಮಾಡುವ ಮೂಲಕ ಆಚರಿಸಿಕೊಂಡಿದ್ದಾರೆ. ಹಾಗಿದ್ದರೆ, ಅದಿತಿ ಬರ್ತ್‌ಡೇ ಹಾಗೂ ಸಂಕ್ರಾಂತಿಗೆ ಏನೆಲ್ಲಾ ಶಾಪಿಂಗ್ ಮಾಡಿದ್ದಾರೆ? ಅಂತ ತಿಳಿಯಲು ಮುಂದೆ ಓದಿ.

ಅದಿತಿಗೆ ಹುಟ್ಟುಹಬ್ಬದ ಸಂಭ್ರಮ
ಅದಿತಿ ಪ್ರಭುದೇವ ನಟನೆಯಲ್ಲಿ ರಂಗನಾಯಕಿ. ಮಾತಿನಲ್ಲಿ ಶ್ಯಾನೇ ಟಾಪ್. ಹೆಜ್ಜೆ ಹಾಕುವುದರಲ್ಲಿ ಎತ್ತಿದ ಕೈ. ಒಬ್ಬ ನಟಿಯಾಗಲು ಇನ್ನೇನು ಬೇಕು. ಅದಕ್ಕೆ ಕನ್ನಡ ಚಿತ್ರರಂಗದಲ್ಲಿ ಅದಿತಿ ಪ್ರಭುದೇವರನ್ನು ಆಫರ್‌ಗಳು ಹುಡುಕಿಕೊಂಡು ಬರುತ್ತಿವೆ. ಸ್ಯಾಂಡಲ್‌ವುಡ್‌ನಲ್ಲಿ ಅದಿತಿ ಪ್ರಭುದೇವ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ನಿಧಾನವಾಗಿಚಿತ್ರರಂಗದಲ್ಲಿ ಹೆಜ್ಜೆ ಇಡುತ್ತಾ ಚಿತ್ರರಂಗದಲ್ಲಿ ತನ್ನದೇ ಸ್ಥಾನ ಗಿಟ್ಟಿಸಿಕೊಂಡಿರುವ ನಟಿ 28ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ವೇಳೆ ಸಂಕ್ರಾಂತಿ ಹಬ್ಬ ಕೂಡ ಇರುವುದರಿಂದ ಭರ್ಜರಿ ಶಾಪಿಂಗ್ ಕೂಡ ಮಾಡಿದ್ದಾರೆ.

ಸಂಕ್ರಾಂತಿ ಶಾಪಿಂಗ್ ಬಲು ಜೋರು
ಹುಡುಗಿಯರು ಅಂದ್ಮೇಲೆ ಶಾಂಪಿಂಗ್ ಜೋರಾಗೇ ಇರುತ್ತೆ. ಅದರಲ್ಲೂ ಹುಟ್ಟುಹಬ್ಬ ಹಾಗೂ ಹಬ್ಬದ ಸಂದರ್ಭದಲ್ಲಿ ಭರ್ಜರಿಯಾಗಿ ಶಾಪಿಂಗ್ ಮಾಡುತ್ತಾರೆ. ಅಂತೆಯೇ ಡಬಲ್ ಖುಷಿಯಲ್ಲಿರುವ ಅದಿ ಪ್ರಭುದೇವ ಶಾಪಿಂಗ್ ಮಾಲ್‌ಗಳಿಗೆ ಹೋಗಿ ಶಾಪಿಂಗ್ ಮಾಡಲು ಸಮಯವಿಲ್ಲ. ಹೀಗಾಗಿ ಆನ್‌ಲೈನ್ ಮೂಲಕ ಡ್ರೆಸ್ ಖರೀದಿ ಮಾಡಿದ್ದಾರೆ. " ನಾನು ಬರ್ತ್‌ಡೇಗೆ ಅಂತಾನೇ ಡ್ರೆಸ್ ಖರೀದಿ ಮಾಡಿದ್ದು ಬಹಳಾನೇ ಕಡಿಮೆ. ಯಾವ ಡ್ರೆಸ್ ಇರುತ್ತೋ ಅದನ್ನು ಹಾಕಿಕೊಂಡು ಜೈ ಅನಿಸುತ್ತಿದೆ. ಇದೇ ಮೊದಲ ಬಾರಿ ಬರ್ತ್‌ಡೇ ಅಂತ ಕ್ಯೂಟ್ ಆಗಿರುವ ಫ್ರಾಕ್ ಖರೀದಿ ಮಾಡಿದ್ದೀನಿ." ಎಂದಿದ್ದಾರೆ ಅದಿತಿ. ಇದರೊಂದಿಗೆ ಅನಾರ್ಕಲಿ ಡ್ರೆಸ್, ಒಂದು ಸೀರೆ, ಮತ್ತೊಂದು ಟಾಪ್, ಬೆಲ್ಡ್ ಅನ್ನು ಶಾಪಿಂಗ್ ಮಾಡಿದ್ದಾರೆ.

ಬ್ಯೂಟಿ ಟಿಪ್ಸ್ ಕೊಟ್ಟ ಅದಿತಿ ಪ್ರಭುದೇವ
ಅದಿತಿ ಪ್ರಭುದೇವ ಕೇವಲ ಶಾಪಿಂಗ್ ಅಷ್ಟೇ ಮಾಡಿಲ್ಲ. ಬದಲಾಗಿ ತನ್ನ ಅಭಿಮಾನಿಗಳಿಗೆ ಬ್ಯೂಟಿ ಟಿಪ್ಸ್ ಕೂಡ ನೀಡಿದ್ದಾರೆ. ಇಡೀ ದಿನ ಮುಖದಲ್ಲಿ ಕಾಂತಿ ಉಳಿಯುವುದಕ್ಕೆ ತಾನೇನು ಮಾಡುತ್ತೇನೆ ಎನ್ನುವುದನ್ನು ಹೇಳಿದ್ದಾರೆ. ಬೆಳಗ್ಗೆ ಎದ್ದ ಕೂಡಲೇ ಬೆಚ್ಚಗಿನ ನೀರಿಗೆ ಎರಡು ಹನಿ ಲಿಂಬೆ ಹಣ್ಣಿನ ರಸವನ್ನು ಹಾಕಿಕೊಂಡು ಕುಡಿಯುತ್ತಾರೆ. ಇದಕ್ಕೆ ಬೇಕಿದ್ದರೆ ಜೇನು ತುಪ್ಪಾ ಬೇಕಾದರೂ ಸೇರಿಸಿಕೊಳ್ಳಿ ಅಂತಾರೆ ಅದಿತಿ. ಲಿಂಬೆ ಹಣ್ಣಿನ ರಸ ಕುಡಿದಾಗ ಇಡೀ ದಿನ ಅದಿತಿ ಪ್ರಭುದೇವ ಖುಷಿ ಖುಷಿಯಾಗಿ ಇರುತ್ತಾರಂತೆ.

ಅದಿತಿ ಮದುವೆ ಯಾವಾಗ?
ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಸದ್ದಿಲ್ಲದೆ ಸರ್ಪ್ರೈಸ್ ನೀಡಿದ್ದರು. ಅದಿತಿ ಉದ್ಯಮಿ ಹಾಗೂ ಕಾಪಿ ತೋಟದ ಮಾಲೀಕ ಯಶಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಹೊಸ ವರ್ಷದ ಸಂಭ್ರಮವನ್ನೂ ಅವರೊಂದಿಗೆ ಆಚರಿಸಿದ್ದರು. ಈ ಬಗ್ಗೆ ಕೂಡ ನಟಿ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದರು. ಸಿನಿಮಾದ ಜೊತೆ ಜೊತೆಗೆ ಪರ್ಸನಲ್ ಲೈಫ್‌ನಲ್ಲೂ ಅದಿತಿ ಪ್ರಭುದೇವ ಬ್ಯುಸಿಯಾಗಿದ್ದಾರೆ.