For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ಅಕೌಂಟ್ ಸಸ್ಪೆಂಡ್ ಬಗ್ಗೆ ನಟ ಕಿಶೋರ್ ಪ್ರತಿಕ್ರಿಯೆ: 'ಕಾಂತಾರ' ನಟ ಹೇಳಿದ್ದಿಷ್ಟು

  |

  ಇತ್ತೀಚೆಗೆ ನಟ ಕಿಶೋರ್ ಅವರ ಟ್ವಿಟ್ಟರ್ ಖಾತೆ ಸಸ್ಪೆಂಡ್ ಆಗಿತ್ತು. ತಮ್ಮ ಪೋಸ್ಟ್‌ಗಳಿಂದ ಟ್ವಿಟ್ಟರ್ ನಿಯಮಗಳನ್ನು ಮೀರಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿತ್ತು. ಈ ಸಂಬಂಧ ಕಿಶೋರ್ ಫೇಸ್‌ಬುಲ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

  ನಟನಾಗಿ ಮಾತ್ರವಲ್ಲದೇ ಮಾದರಿ ರೈತನಾಗಿಯೂ ಕಿಶೋರ್ ಎಲ್ಲರಿಗೂ ಮಾದರಿ ಆಗಿದ್ದಾರೆ. ಪ್ರಪಂಚದ ಆಗುಹೋಗುಗಳ ಬಗ್ಗೆ ತಮ್ಮ ಭಿನ್ನವಾದ ಅಭಿಪ್ರಾಯ ಹಾಗೂ ಸಾಮಾಜಿಕ ಚಿಂತನೆಗಳಿಂದ ಗುರ್ತಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಕಳೆದ ವಾರ ಇದ್ದಕ್ಕಿದಂತೆ ಕಿಶೋರ್ ಅವರ ಟ್ವಿಟ್ಟರ್ ಅಕೌಂಟ್ ಸಸ್ಪೆಂಡ್ ಆಗಿತ್ತು. ಬಲಪಂಥೀಯ ವಾದದ ವಿರುದ್ಧ ಮಾತನಾಡುವವ ಸೋಷಿಯಲ್ ಮೀಡಿಯಾ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ ಎನ್ನುವ ಬಗ್ಗೆ ಕೂಡ ಕೆಲ ದಿನಗಳಿಂದ ಚರ್ಚೆ ಆಗ್ತಿದೆ. ಹಾಗಾಗಿ ಕಿಶೋರ್ ಟ್ವಿಟ್ಟರ್ ಖಾತೆ ಸಸ್ಪೆಂಡ್‌ಗೆ ಅದೇ ಕಾರಣನಾ ಎನ್ನು ಅನುಮಾನ ಮೂಡಿತ್ತು.

  'ಕಾಂತಾರ'ದ ದೈವ ಅವಮಾನಿಸಿದ ಯುವಕ ರಕ್ತಕಾರಿ ಸಾವು ಎನ್ನುವ ವಿಡಿಯೋ ವೈರಲ್: ನಟ ಕಿಶೋರ್ ಹೇಳಿದ್ದಿಷ್ಟು!'ಕಾಂತಾರ'ದ ದೈವ ಅವಮಾನಿಸಿದ ಯುವಕ ರಕ್ತಕಾರಿ ಸಾವು ಎನ್ನುವ ವಿಡಿಯೋ ವೈರಲ್: ನಟ ಕಿಶೋರ್ ಹೇಳಿದ್ದಿಷ್ಟು!

  ಭ್ರಷ್ಟ ವ್ಯವಸ್ಥೆಯನ್ನು ಕಿಶೋರ್ ಮೊದಲಿನಿಂದಲೂ ಟೀಕಿಸುತ್ತಾ ಬರುತ್ತಿದ್ದಾರೆ. ಹಾಗಾಗಿ ಅವರ ಟ್ವಿಟ್ಟರ್ ಖಾತೆ ಸಸ್ಪೆಂಡ್ ಆಗಲು ಇಂತಹ ಪೋಸ್ಟ್‌ಗಳೇ ಕಾರಣನಾ? ಎನ್ನುವ ಗೊಂದಲ ಶುರುವಾಗಿತ್ತು. ಹಾಗಾದರೆ ಆ ಪೋಸ್ಟ್‌ಗಳು ಯಾವುದು? ಎನ್ನುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ ಇದೀಗ ಎಲ್ಲದಲ್ಲೂ ಕಿಶೋರ್ ಸ್ಪಷ್ಟನೆ ನೀಡಿದ್ದಾರೆ.

  ಅಕೌಂಟ್ ಸಸ್ಪೆಂಡ್‌ ಕಾರಣ ಏನು?

  ಅಕೌಂಟ್ ಸಸ್ಪೆಂಡ್‌ ಕಾರಣ ಏನು?

  ಸೋಶಿಯಲ್ ಮೀಡಿಯಾದಲ್ಲಿ ನಕಲಿ ಅಕೌಂಟ್‌ಗಳ ಹಾವಳಿ ಹೆಚ್ಚು. ಸೆಲೆಬ್ರೆಟಿಗಳ ಹೆಸರಿನಲ್ಲಿ ಕಿಡಿಗೇಡಿಗಳು ಅಕೌಂಟ್ ಕ್ರಿಯೇಟ್ ಮಾಡಿ ಏನೇನೋ ಪೋಸ್ಟ್‌ಗಳನ್ನು ಮಾಡಿರುವ ಉದಾಹರಣೆಯೂ ಇದೆ. ನಟ ಕಿಶೋರ್ ತಮ್ಮ ಟ್ವಿಟ್ಟರ್ ಅಕೌಂಟ್ ಸಸ್ಪೆಂಡ್ ಆಗಿರುವ ಬಗ್ಗೆ ಟ್ವಿಟ್ಟರ್ ಕಳುಹಿಸಿರುವ ಇಮೇಲ್ ಸಮೇತ ಪೋಸ್ಟ್ ಮಾಡಿದ್ದಾರೆ. "ಅನವಶ್ಯಕ ಊಹಾಪೋಹಗಳನ್ನು ತಡೆಯಲಿಕ್ಕಾಗಿಯಷ್ಟೆ. ನನ್ನ ಟ್ವಿಟರ್ ಅಕೌಂಟ್ ಸಸ್ಪೆಂಡ್ ಆದದ್ದು ನನ್ನ ಯಾವ ಪೋಸ್ಟಿನಿಂದಲೂ ಅಲ್ಲ" ಫೇಸ್ಬುಕ್‌ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

  ಕಿಶೋರ್ ಟ್ವಿಟ್ಟರ್ ಅಕೌಂಟ್ ಹ್ಯಾಕ್

  ಕಿಶೋರ್ ಟ್ವಿಟ್ಟರ್ ಅಕೌಂಟ್ ಹ್ಯಾಕ್

  ನಟ ಕಿಶೋರ್ ತಮ್ಮ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿತ್ತು ಎಂದು ಹೇಳಿದ್ದಾರೆ. ಆ ಕಾರಣಕ್ಕೆ ಅಕೌಂಟ್ ಸಸ್ಪೆಂಡ್ ಆಗಿದ್ದು ಎಂದು ವಿವರಿಸಿದ್ದಾರೆ. "ನನ್ನ ಅಕೌಂಟ್ ಸಸ್ಪೆಂಡ್ ಆಗಿದ್ದು ಡಿಸೆಂಬರ್ 20 ನೇತಾರೀಖು 2022 ರಂದು ಹ್ಯಾಕ್ ಮಾಡಲಾಗಿದ್ದರಿಂದ ಎಂದು ತಿಳಿದುಬಂದಿದೆ. ತಕ್ಕ ಕ್ರಮ ಕೈಗೊಳ್ಳುವ ಭರವಸೆ ಟ್ವಿಟರ್ ಕೂಡ ಕೊಟ್ಟಿದೆ. ಎಲ್ಲರ ಕಾಳಜಿಗೆ ಧನ್ಯವಾದಗಳು" ಎಂದು ವಿವರಿಸಿದ್ದಾರೆ.

  ಕಿಶೋರ್‌ಗೆ ಟ್ವಿಟ್ಟರ್‌ ಪ್ರತಿಕ್ರಿಯೆ

  ಕಿಶೋರ್‌ಗೆ ಟ್ವಿಟ್ಟರ್‌ ಪ್ರತಿಕ್ರಿಯೆ

  ಸದ್ಯ ತಮ್ಮ ಟ್ವಿಟ್ಟರ್ ಅಕೌಂಟ್ ಸಸ್ಪೆಂಡ್ ಆಗಿರುವ ಬಗ್ಗೆ ಟ್ವಿಟ್ಟರ್‌ನ ಸಂಪರ್ಕಿಸಿದ್ದಾರೆ. ಟ್ವಿಟ್ಟರ್ ನಿಮ್ಮ ಇಮೇಲ್ ಅಡ್ರೆಸ್ ಕನ್ಫರ್ಮ್ ಮಾಡುವಂತೆ ಕೇಳಿದೆ. ನಿಮ್ಮ ಮಾಹಿತಿಯನ್ನು ಮರುಪರಿಶೀಲಿಸಿ ಕೂಡಲೇ ಪ್ರತಿಕ್ರಿಯಿಸುವುದಾಗಿ ತಿಳಿಸಿದೆ. ಅದರ ಸ್ಕ್ರೀನ್‌ಶಾಟ್ ಅನ್ನು ಕೂಡ ಕಿಶೋರ್ ಹಂಚಿಕೊಂಡಿದ್ದಾರೆ. ಟ್ವಿಟ್ಟರ್ ನಿಯಮ ಮೀರಿದ್ದಕ್ಕೆ ಅಕೌಂಟ್ ಸಸ್ಪೆಂಡ್ ಮಾಡಿರುವುದಾಗಿ ಹೇಳಿದೆ. ಆದರೆ ನಟ ಕಿಶೋರ್ ತಮ್ಮ ಅಕೌಂಟ್ ಹ್ಯಾಕ್ ಆಗಿತ್ತು ಎಂದು ಇಡೀಗ ಸ್ಪಷ್ಟನೆ ನೀಡಿದ್ದಾರೆ.

  ಬ್ಲೂ ಟಿಕ್ ಪಡೆಯುವಂತೆ ಸಲಹೆ

  ಬ್ಲೂ ಟಿಕ್ ಪಡೆಯುವಂತೆ ಸಲಹೆ

  ಸಾಮಾನ್ಯವಾಗಿ ಸೆಲೆಬ್ರೆಟಿಗಳು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ಗಳಿಗೆ ಬ್ಲೂ ಟಿಕ್ ಪಡೆಯುತ್ತಾರೆ. ಆದರೆ ಕಿಶೋರ್ ಅವರ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂ ಅಕೌಂಟ್‌ಗೆ ಬ್ಲೂಟಿಕ್ ಇಲ್ಲ. ಇದೇ ಕಾರಣಕ್ಕೆ ಕೆಲವೊಮ್ಮೆ ನೆಟ್ಟಿಗರು ಗೊಂದಲಕ್ಕೀಡಾಗುತ್ತಾರೆ. ಇದು ಅವರದ್ದೇ ಅಕೌಂಟ್ ಹೌದೋ ಅಲ್ಲವೋ ಎನ್ನುವ ಅನುಮಾನ ಮೂಡುತ್ತದೆ. ಇಷ್ಟೆಲ್ಲಾ ಆದ ಮೇಲೆ ಸರ್ ಬೇಗ ಬ್ಲೂ ಟಿಕ್ ಪಡೆಯಿರಿ ಎಂದು ಅಭಿಮಾನಿಗಳು ಕಾಮೆಂಟ್‌ ಬಾಕ್ಸ್‌ನಲ್ಲಿ ಸಲಹೆ ನೀಡುತ್ತಿದ್ದಾರೆ.

  English summary
  Kantara Actor Kishore reacts to his Twitter account being suspended. My Twitter account was not suspended because of any of my posts. Twitter has promised necessary action. Know more.
  Wednesday, January 4, 2023, 17:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X