For Quick Alerts
  ALLOW NOTIFICATIONS  
  For Daily Alerts

  100 ದಿನ ಪೂರೈಸಿದ ಕಾಂತಾರ; ಎಷ್ಟು ಚಿತ್ರಮಂದಿರಗಳಲ್ಲಿ ಶತಕ? 50 ಹಾಗೂ 75 ದಿನ ಎಷ್ಟು ಚಿತ್ರಮಂದಿರಗಳಲ್ಲಿ?

  |

  ಕೊರೊನಾ ಲಾಕ್ ಡೌನ್‌ನಿಂದ ಬಳಲಿ ಸಂಕಷ್ಟಕ್ಕೆ ಸಿಲುಕಿದ್ದ ಸಿನಿಮಾ ಕ್ಷೇತ್ರಕ್ಕೆ 2022 ಮರುಜೀವ ನೀಡಿದ ವರ್ಷ. ಹೌದು, ಕಳೆದ ವರ್ಷ ಬಿಡುಗಡೆಯಾದ ಅನೇಕ‌ ಚಿತ್ರಗಳು ನಿರೀಕ್ಷೆಗೂ ಮೀರಿದ ಪ್ರದರ್ಶನ ಕಂಡು ಗಳಿಕೆ ಮಾಡಿದವು. ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗಗಳ ಸಿನಿಮಾಗಳು ಬಾಲಿವುಡ್ ಚಿತ್ರರಂಗವನ್ನೂ ಹಿಂದಿಕ್ಕಿ ಅಬ್ಬರಿಸಿದವು‌. ಇನ್ನು ಕಡಿಮೆ ಬಜೆಟ್ ಹೊಂದಿದ್ದ ಹಲವು ಚಿತ್ರಗಳು ನೂರು ಕೋಟಿ ಕ್ಲಬ್ ಸೇರಿ ಅಬ್ಬರಿಸಿದವು. ಕಳೆದ ವರ್ಷ ನೂರು ಕೋಟಿ ಕ್ಲಬ್ ಸೇರಿದ 31 ಚಿತ್ರಗಳ ಪೈಕಿ ಕನ್ನಡ ಚಲನಚಿತ್ರರಂಗದ ಐದು ಚಿತ್ರಗಳು ಸೇರಿವೆ.

  ಅದರಲ್ಲೂ ರಿಷಬ್ ಶೆಟ್ಟಿ ನಟನೆಯ ಹಾಗೂ ನಿರ್ದೇಶನದ ಕಾಂತಾರ ಚಿತ್ರ ಹೆಚ್ಚಿನ ಕಲೆಕ್ಷನ್ ಮಾಡಿದ್ದು ಮಾತ್ರವಲ್ಲದೇ ಇದೀಗ ಚಿತ್ರಮಂದಿರಗಳಲ್ಲಿ ಶತದಿನವನ್ನೂ ಸಹ ಪೂರೈಸಿದೆ. ಹೌದು, ಸೆಪ್ಟೆಂಬರ್ 30ರಂದು ಬಿಡುಗಡೆಗೊಂಡಿದ್ದ ಕಾಂತಾರ ಚಿತ್ರದ ಕನ್ನಡ ಅವತರಣಿಕೆ ಇಂದು ( ಜನವರಿ 7 ) ಚಿತ್ರಮಂದಿರಗಳಲ್ಲಿ ನೂರನೇ ದಿನದ ಪ್ರದರ್ಶನವನ್ನು ಕಾಣುತ್ತಿದೆ.

  ಈ ವಿಷಯವನ್ನು ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ 'ಬೆಳಕು.. ಆದರೆ ಇದು ಬೆಳಕಲ್ಲ ನೂರು ದಿನದ ದರ್ಶನ' ಎಂದು ಬರೆದುಕೊಳ್ಳುವುದರ ಮೂಲಕ ತಿಳಿಸಿ ಸಂಭ್ರಮಿಸಿದ್ದಾರೆ. ಇನ್ನು ಚಿತ್ರದ ಕಾರ್ಯಕಾರಿ ನಿರ್ಮಾಪಕ ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಗೌಡ ಸಹ ಈ ಕುರಿತಾಗಿ ಟ್ವೀಟ್ ಮಾಡಿದ್ದು, ಚಿತ್ರ ಎಷ್ಟು ಚಿತ್ರಮಂದಿರಗಳಲ್ಲಿ ಶತದಿನ ಪ್ರದರ್ಶನ ಕಂಡಿದೆ, ಎಷ್ಟು ಚಿತ್ರಮಂದಿರಗಳಲ್ಲಿ 50 ಹಾಗೂ 75 ದಿನಗಳನ್ನು ಪೂರೈಸಿದೆ ಎಂಬುದನ್ನು ತಿಳಿಸಿದ್ದಾರೆ.

  ಶತದಿನ ಎಷ್ಟು ಚಿತ್ರಮಂದಿರಗಳಲ್ಲಿ?

  ಶತದಿನ ಎಷ್ಟು ಚಿತ್ರಮಂದಿರಗಳಲ್ಲಿ?

  ಕಾಂತಾರ ಚಿತ್ರ ಬೆಂಗಳೂರಿನ ಏಳು ಪಿವಿಆರ್ ಸೇರಿದಂತೆ ರಾಜ್ಯದ ಬರೋಬ್ಬರಿ 37 ಚಿತ್ರಮಂದಿರಗಳಲ್ಲಿ ನೂರು ದಿನಗಳನ್ನು ಪೂರೈಸಿದೆ ಎಂದು ಕಾರ್ತಿಕ್ ಗೌಡ ತಿಳಿಸಿದ್ದಾರೆ. ಇನ್ನು 170 ಚಿತ್ರಮಂದಿರಗಳಲ್ಲಿ ಕಾಂತಾರ 75 ದಿನಗಳನ್ನು ಪೂರೈಸಿತ್ತು ಎಂದೂ ಸಹ ತಿಳಿಸಲಾಗಿದೆ. ಅಷ್ಟೇ ಅಲ್ಲದೇ ಬಿಡುಗಡೆಗೊಂಡ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ 49 ದಿನಗಳನ್ನು ಪೂರೈಸಿದ್ದ ಕಾಂತಾರ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಐವತ್ತು ದಿನಗಳನ್ನು ಪೂರೈಸಿತ್ತು.

  ಓಟಿಟಿಗೆ ಬಂದ ನಂತರವೂ ಶತಕ!

  ಓಟಿಟಿಗೆ ಬಂದ ನಂತರವೂ ಶತಕ!

  ಇನ್ನು ಕಾಂತಾರ ಚಿತ್ರ ಓಟಿಟಿಗೆ ಎಲ್ಲಾ ಭಾಷೆಗಳಲ್ಲಿಯೂ ಬಂದ ನಂತರವೂ ಶತದಿನಗಳನ್ನು ಪೂರೈಸಿರುವುದು ವಿಶೇಷವೆನಿಸಿದೆ. ಮುಖ್ಯ ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸುವುದೂ ಸಹ ಕಷ್ಟವಾಗಿರುವ ಈಗಿನ ದಿನಗಳಲ್ಲಿ ಕಾಂತಾರ ಇಷ್ಟು ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಶತಕ ಬಾರಿಸಿರುವುದು ದೊಡ್ಡ ಸಾಧನೆಯೇ ಸರಿ. ಸದ್ಯ ಕಾಂತಾರ ಚಿತ್ರ ಮಾಡಿರುವ ಈ ದಾಖಲೆಯನ್ನು ಮುರಿದು ಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದೇ ಹೇಳಬಹುದು.

  ಬರಲಿದೆ ಕಾಂತಾರ 2

  ಬರಲಿದೆ ಕಾಂತಾರ 2

  ಸದ್ಯ ಕಾಂತಾರ ಯಶಸ್ಸಿನ ಅಲೆಯಲ್ಲಿ ಇರುವ ರಿಷಬ್ ಶೆಟ್ಟಿ ಕಾಂತಾರ 2 ಚಿತ್ರದ ಕಥೆ ಬರೆಯುವಲ್ಲಿ ನಿರತರಾಗಿದ್ದಾರೆ. ಹೀಗಾಗಿ ಈ ಹಿಂದೆ ತಾವು ಒಪ್ಪಿಕೊಂಡಿದ್ದ ಚಿತ್ರಗಳಿಂದೆಲ್ಲಾ ರಿಷಬ್ ಹಿಂದೆ ಸರಿದಿದ್ದಾರೆ. ಗೆಳಯ ರಕ್ಷಿತ್ ಶೆಟ್ಟಿ ನಿರ್ಮಾಣದ ಬ್ಯಾಚುಲರ್ ಪಾರ್ಟಿ, ಬೆಲ್ ಬಾಟಂ 2 ಹಾಗೂ ಇನ್ನಿತರ ಚಿತ್ರಗಳಿಂದ ರಿಷಬ್ ಹಿಂದೆ ಸರಿದಿದ್ದಾರೆ. ಇನ್ನು ಬ್ಯಾಚುಲರ್ ಪಾರ್ಟಿ ಚಿತ್ರದಲ್ಲಿ ರಿಷಬ್ ಶೆಟ್ಟಿ ನಟಿಸಬೇಕಿದ್ದ ಪಾತ್ರಕ್ಕೆ ಯೋಗೇಶ್ ಆಯ್ಕೆಯಾಗಿದ್ದು, ಬೆಲ್ ಬಾಟಂ 2 ಕಥೆ ಏನಾಗಲಿದೆಯೋ ಕಾದು ನೋಡಬೇಕಿದೆ.

  English summary
  Kantara creates huge record by completed 100 days in mammoth 37 centres . Take a look
  Saturday, January 7, 2023, 16:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X