For Quick Alerts
  ALLOW NOTIFICATIONS  
  For Daily Alerts

  "ಕಾಂತಾರ ತಂಡದವರು ನಮ್ಮೊಂದಿಗೆ ಸೌಜನ್ಯಕ್ಕೂ ಮಾತಾಡಿಲ್ಲ": ಥೈಕ್ಕುಡಂ ಬ್ರಿಡ್ಜ್ ಆರೋಪ!

  |

  'ಕಾಂತಾರ' ಜಗತ್ತನ್ನೇ ಗೆದ್ದು ಬೀಗುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನ, ನಟನೆ ಎಲ್ಲದಕ್ಕೂ ಪ್ರೇಕ್ಷಕರು ನೂರಕ್ಕೆ ನೂರು ಅಂಕ ಕೊಟ್ಟಿಕೊಟ್ಟಿದ್ದಾರೆ. ದೇಶ ಅಷ್ಟೇ ವಿಶ್ವದ ಮೂಲೆ ಮೂಲೆಯಲ್ಲೂ ಕನ್ನಡ ಸಿನಿಮಾವೊಂದು ಈ ಮಟ್ಟಿಗೆ ಸದ್ದು ಮಾಡುತ್ತಿರೋಕೆ ಕನ್ನಡಿಗರ ಗರ್ವವನ್ನು ದುಪ್ಪಟ್ಟು ಮಾಡಿದೆ.

  'ಕಾಂತಾರ' ತಂಡ ಒಂದೇ ಒಂದು ವಿವಾದಕ್ಕೆ ಸಿಕ್ಕಿಕೊಳ್ಳದೆ ಇದ್ದಿದ್ದರೆ, ಈ ಸಂಭ್ರಮ ಇನ್ನೂ ಜೋರಾಗಿರುತ್ತಿತ್ತು. ಆದರೆ, ಸಿನಿಮಾದಲ್ಲಿ ಸಿನಿಪ್ರಿಯರ ಮನಗೆದ್ದ 'ವರಹ ರೂಪಂ..' ಹಾಡು ವಿವಾದಕ್ಕೆ ಸಿಕ್ಕಿಕೊಂಡಿತ್ತು. ಮಲಯಾಳಂನ ಥೈಕ್ಕುಡಂ ಬ್ರಿಡ್ಜ್ ಅನ್ನೋ ಬ್ಯಾಂಡ್‌ ಕಂಪೋಸ್ ಮಾಡಿದ್ದ 'ನವರಸಂ' ಹಾಡನ್ನು ಅಜನೀಶ್ ಲೋಕನಾಥ್ ಕದ್ದಿರೋ ಆರೋಪ ಮಾಡಲಾಗಿತ್ತು.

  ₹400 ಕೋಟಿ ಕಲೆಕ್ಷನ್ ಮಾಡೇ ಬಿಡ್ತು ರಿಷಬ್ ಶೆಟ್ಟಿ 'ಕಾಂತಾರ': ಇದರಲ್ಲಿ ಕರ್ನಾಟಕದ ಪಾಲು ಎಷ್ಟು?₹400 ಕೋಟಿ ಕಲೆಕ್ಷನ್ ಮಾಡೇ ಬಿಡ್ತು ರಿಷಬ್ ಶೆಟ್ಟಿ 'ಕಾಂತಾರ': ಇದರಲ್ಲಿ ಕರ್ನಾಟಕದ ಪಾಲು ಎಷ್ಟು?

  ಈ ಬ್ಯಾಂಡ್ 'ಕಾಂತಾರ' ತಂಡದ ವಿರುದ್ಧ ಕಾನೂನು ಸಮರ ಕೂಡ ಸಾರಿತ್ತು. ಆದ್ರೀಗ ಇದೇ ಬ್ಯಾಂಡ್‌ನ ಸದಸ್ಯ ವಿಯಾನ್ ಫರ್ನಾಂಡೀಸ್ 'ವರಹ ರೂಪಂ..' ವಿವಾದ ಬಗ್ಗೆ ದ ಫೆಡರಲ್‌ನ ಸೀನಿಯರ್ ಆಂಕರ್ ಶ್ರೇಯಸ್ ಜೊತೆ ಸವಿಸ್ತಾರವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

  ಅಜನೀಶ್ ಹಾಗೂ ಗೋವಿಂದ ನಡುವಿನ ಚರ್ಚೆ

  ಅಜನೀಶ್ ಹಾಗೂ ಗೋವಿಂದ ನಡುವಿನ ಚರ್ಚೆ

  'ವರಹ ರೂಪಂ..' ಹಾಡು ವಿವಾದಕ್ಕೆ ಎಡೆ ಮಾಡಿಕೊಡುತ್ತಿದ್ದಂತೆ ಅಜನೀಶ್ ಲೋಕನಾಥ್ ಬ್ಯಾಂಡ್‌ನ ಸದ್ಯಸ ಗೋವಿಂದ್ ಅವರೊಂದಿಗೆ ಚರ್ಚೆ ಮಾಡಿದ್ದರು. ಗೋವಿಂದ್ ಥೈಕ್ಕುಡಂ ಬ್ರಿಡ್ಜ್ ಬ್ಯಾಂಡ್‌ನಲ್ಲಿ ವಯಲಿನ್ ವಾಧ್ಯ ನುಡಿಸುವುದರೊಂದಿಗೆ ಗಾಯಕರೂ ಆಗಿದ್ದಾರೆ. ತಮಿಳಿನ ಸೂಪರ್‌ ಹಿಟ್ ಸಿನಿಮಾ '96'ನ ಸಂಗೀತ ನಿರ್ದೇಶಕರು ಕೂಡ ಇವರೇನೆ. ಇವರೊಂದಿಗೆ ಅಜನೀಶ್ ಮಾತುಕತೆ ನಡೆಸಿದೆ ಬಳಿಕ ಸಂದರ್ಶನವೊಂದರಲ್ಲಿ ನಮಗೂ 'ನವರಸಂ' ಸಾಂಗಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದರಂತೆ. ಇದು ತಂಡಕ್ಕೆ ಬೇಸರ ತರಿಸಿತ್ತು. ಮುಂದೇನಾಯ್ತು ಅನ್ನೋದನ್ನು ವಿಯಾನ್ ಫರ್ನಾಂಡೀಸ್ ಸಂದರ್ಶಕರಿಗೆ ವಿವರಿಸಿದ್ದಾರೆ.

  'ಕಾಂತಾರ'ಗೆ 'ನವರಸಂ' ಟ್ರ್ಯಾಕ್ ಸಾಂಗ್ ಇದ್ದಂತೆ

  'ಕಾಂತಾರ'ಗೆ 'ನವರಸಂ' ಟ್ರ್ಯಾಕ್ ಸಾಂಗ್ ಇದ್ದಂತೆ

  " ನಾವು ಅವರ ಜೊತೆ ಸಂಪರ್ಕದಲ್ಲಿ ಇರಲಿಲ್ಲ. ಅವರು ನಮ್ಮೊಂದಿಗೆ ಸಂಪರ್ಕದಲ್ಲಿ ಇದ್ದರು. ಒಳಗೆ ಏನು ನಡೆಯುತ್ತಿದೆ ಅನ್ನೋದು ಅವರಿಗೆ ಗೊತ್ತಿತ್ತು. ನವರಸಂ ಹಾಡನ್ನು ಖಂಡಿತವಾಗಿಯೂ ರೆಫರೆನ್ಸ್ ಆಗಿ ಬಳಸಿಕೊಂಡಿದ್ದಾರೆ. ಇದು ಸಿನಿಮಾದ ರೆಫರೆನ್ಸ್ ಟ್ರ್ಯಾಕ್ ಆಗಿತ್ತು. ನಿರ್ದೇಶಕರಿಗೆ 'ನವರಸಂ' ಹಾಗೇ ಕೇಳುವ ಹಾಡು ಬೇಕಿತ್ತು. ಇಲ್ಲಿ ಅವರು ಏನು ಮಾಡಿದ್ದಾರೆ ಅಂದ್ರೆ, ನವರಸಂ ಅಂತಹದ್ದೇ ಸಾಂಗ್ ಅನ್ನು ಕಂಪೋಸ್ ಮಾಡಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಾಗ, ನಾವು ಅರ್ಥ ಮಾಡಿಕೊಳ್ಳುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಂಡೆವು. ಆ ಬಳಿಕವೇ ನಾನು ಹೋರಾಟ ಮಾಡಲು ನಿರ್ಧರಿಸಿದೆವು."

  'ನಾವು ತಡವಾಗಿ ಸಿನಿಮಾ ನೋಡಿದ್ವಿ'

  'ನಾವು ತಡವಾಗಿ ಸಿನಿಮಾ ನೋಡಿದ್ವಿ'

  " ಕೋವಿಡ್ ಬಳಿಕ ನಾವು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದೆವು. ನಮಗೆ ಬ್ಯಾಕ್ ಟು ಬ್ಯಾಕ್ ಶೋಗಳಿದ್ದವು. ಹೀಗಾಗಿ ನಾವು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಲು ಸಾಧ್ಯವಾಗಿರಲಿಲ್ಲ. ನಮಗೆ ಅಭಿಮಾನಿಗಳಿಂದ ಈ ವಿಷಯ ಗೊತ್ತಾಯ್ತು. ಮೊದಲು ಥಿಯೇಟರ್‌ಗೆ ಹೋದಾಗ ಜನರು ಈ ಸಾಂಗ್‌ ಅನ್ನು ಕಂಪೋಸ್ ಮಾಡಿದ್ದು, ಥೈಕ್ಕುಡಂ ಬ್ರಿಡ್ಜ್ ಟೀಂ ಅಂತಲೇ ಭಾವಿಸಿದ್ದರು. ನಮಗೆ ಸಾಕಷ್ಟು ಮೆಸೇಜ್‌ಗಳು ಬರಲು ಆರಂಭಿಸಿದ್ದವು. ಹೀಗಾಗಿ ನಾವು ಇನ್ನೊಬ್ಬ ಸಂಗೀತಗಾರರನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡೆವು. ಎಲ್ಲಾ ತಿಳಿದುಕೊಂಡ ಬಳಿಕ ನಾವು ಕೇಸ್ ಫೈಲ್ ಮಾಡಲು ನಿರ್ಧರಿಸಿದ್ದೆವು."

  'ನಿರ್ದೇಶಕರು ಸೌಜನ್ಯಕ್ಕೂ ಕರೆ ಮಾಡಿಲ್ಲ'

  'ನಿರ್ದೇಶಕರು ಸೌಜನ್ಯಕ್ಕೂ ಕರೆ ಮಾಡಿಲ್ಲ'

  "ಇಷ್ಟೆಲ್ಲ ಆದ್ಮೇಲೆ ಇವರು ಹಣಕ್ಕೋಸ್ಕರ, ಹೆಸರಿಗೋಸ್ಕರ ಇದನ್ನೆಲ್ಲಾ ಮಾಡುತ್ತಿದ್ದಾರೆ ಅಂತೆಲ್ಲಾ ಹೇಳಿದ್ರು. ನಮಗೆ ಈಗಾಗಲೇ ಹೆಸರು ಇದೆ. ಹಣದ ಬಗ್ಗೆ ನವರಸಂ ಹಾಡಿನ ರೈಟ್ಸ್ ಹೊಂದಿರುವ ಮಾತೃಭೂಮಿಯವರು ಯೋಚನೆ ಮಾಡುತ್ತಾರೆ. ಆದರೆ, ಬ್ಯಾಂಡ್ ಕೇಳುತ್ತಿರೋದು ಕ್ರೆಡಿಟ್. ಹಾಗೇ ಇದು ಒಬ್ಬ ಕಲಾವಿದನಿಗೆ ಅಲ್ಲ. ಹೀಗೆ ಸ್ವತಂತ್ರವಾಗಿರುವ ಎಲ್ಲಾ ಕಲಾವಿದರ ಪರವಾಗಿ ನಾವು ಹೋರಾಟ ಮಾಡಿದ್ದೇವೆ. ನಿರ್ದೇಶಕರಿಗೆ ಒಂದೇ ಒಂದು ಸಾರಿ ಫೋನ್ ಮಾಡುವ ಸೌಜನ್ಯ ಕೂಡ ಇಲ್ಲ. ಇದೂವರೆಗೂ ಒಂದೇ ಒಂದು ಫೋನ್ ಮಾಡಿ ಈ ಬಗ್ಗೆ ಮಾತಾಡಿಲ್ಲ."

  'ನಮಗೆ ಕ್ರೆಡಿಟ್ ಕೊಡುತ್ತೇನೆ ಎಂದೂ ಹೇಳಿಲ್ಲ'

  'ನಮಗೆ ಕ್ರೆಡಿಟ್ ಕೊಡುತ್ತೇನೆ ಎಂದೂ ಹೇಳಿಲ್ಲ'

  " ನಮ್ಮ ಬ್ಯಾಂಡ್ ಸದಸ್ಯರಾಗಿರೋ ಗೋವಿಂದ್ ಜೊತೆ ಸಂಗೀತ ನಿರ್ದೇಶಕರು ಮಾತಾಡಿದ್ದಾರೆ ಅಷ್ಟೇ. ಪ್ರೊಡಕ್ಷನ್ ಕಂಪನಿ ಮಾತಾಡಿಯೇ ಇಲ್ಲ. ಅವರೂ ಕೂಡ ಒಬ್ಬ ಸಂಗೀತ ನಿರ್ದೇಶಕರಾಗಿ ಇನ್ನೊಬ್ಬ ಸಂಗೀತ ನಿರ್ದೇಶಕರನ್ನು ಅರ್ಥ ಮಾಡಿಕೊಳ್ಳಿ ಅಂತ ಮಾತಾಡಿದ್ದರು. ಎಲ್ಲೂ ಕ್ರೆಡಿಟ್ ಕೊಡುತ್ತೇವೆ ಅಂತ ಹೇಳಿಲ್ಲ. ಸಂಗೀತ ನಿರ್ದೇಶಕರು ವೈಯಕ್ತಿಕವಾಗಿ ಈ ಮಾತಾಡಿದ್ದರು ಅಷ್ಟೇ. ಅಲ್ಲದೆ ಸಂದರ್ಶನದಲ್ಲೂ ಕೂಡ ಈ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ." ಎಂದು ವಿಯಾನ್ ಫರ್ನಾಂಡೀಸ್ ಆರೋಪ ಮಾಡಿದ್ದಾರೆ.

  English summary
  Kantara Team Never Contacted Thaikkudam Bridge oficially On Varaha Roopam, Know More.
  Tuesday, November 22, 2022, 21:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X