For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಪ್ರಕರಣದ 'ವಿಶಲ್ ಬ್ಲೋವರ್': ಪ್ರಶಾಂತ್ ಸಂಬರ್ಗಿ ವಿರುದ್ಧ ದೂರು

  |

  ಈ ವರ್ಷ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಕೆಲವು ನಟ-ನಟಿಯರ ಜೊತೆಗೆ ಸಾಕಷ್ಟು ಸುದ್ದಿಯಲ್ಲಿದ್ದ ಹೆಸರು ಪ್ರಶಾಂತ್ ಸಂಬರ್ಗಿ.

  ಕೆಲ ಸಿನಿಮಾಗಳ ವಿತರಣೆ ಮಾಡಿರುವ, ಕೆಲ ಡಬ್ಬಿಂಗ್ ಸಿನಿಮಾಗಳನ್ನು ಬಿಡುಗಡೆ ಮಾಡಿರುವ, ಕೆಲವು ಸ್ಟಾರ್ ನಟರುಗಳ ಜಾಹೀರಾತು ಮಾಡಿರುವ ಪ್ರಶಾಂತ್ ಸಂಬರ್ಗಿ ಚಿತ್ರರಂಗಕ್ಕೆ ಅಷ್ಟಾಗಿ ಸಂಬಂಧ ಇಲ್ಲದಿದ್ದರೂ ಸಹ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ತಮ್ಮ ಹೇಳಿಕೆಗಳ ಮೂಲಕ ಸಾಕಷ್ಟು ಸಂಚಲನ ಸೃಷ್ಟಿಸಿದ್ದರು.

  ಚಿರಂಜೀವಿ ಸರ್ಜಾ ಸಾವಿಗೆ ಡ್ರಗ್ಸ್ ಕಾರಣ ಎಂಬ ಆರೋಪವನ್ನು ನಿರಾಕರಿಸುತ್ತಾ, 'ಸ್ಯಾಂಡಲ್‌ವುಡ್‌ ನಲ್ಲಿ ಸಾಕಷ್ಟು ಮಂದಿ ಡ್ರಗ್ಸ್ ವ್ಯಸನಿಗಳು ಇದ್ದಾರೆ' ಎನ್ನುವ ಮೂಲಕ ಚಂದನವನದ ಡ್ರಗ್ಸ್‌ ಪ್ರಕರಣದ ಬಗ್ಗೆ ಮಾತನಾಡಲು ಆರಂಭಿಸಿದ ಪ್ರಶಾಂತ್ ಸಂಬರ್ಗಿ ಆ ನಂತರ ರಾಗಿಣಿ, ಸಂಜನಾ ಗಲ್ರಾನಿ ಇನ್ನೂ ಹಲವಾರು ಮಂದಿಯ ವಿರುದ್ಧ ಪುಂಖಾನುಪುಂಖವಾಗಿ ಟ್ವೀಟ್‌ಗಳನ್ನು ಮಾಡಿ ಹಲವರು ನಟ-ನಟಿಯರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.

  ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ನಾಯಕರನ್ನು, ಸಿನಿಮಾ ನಟ-ನಟಿಯರನ್ನು, ಅನ್ಯ ಧರ್ಮೀಯರನ್ನು ಗುರಿಯಾಗಿರಿಸಿಕೊಂಡು 'ಟ್ರೂಲ್' ಮಾಡುತ್ತಿರುವ ಪ್ರಶಾಂತ್ ಸಂಬರ್ಗಿ ವಿರುದ್ಧ ರಾಜ್ಯ ಕಾಂಗ್ರೆಸ್ ಸದಸ್ಯರು ದೂರು ನೀಡಿದ್ದಾರೆ.

  'ಪ್ರಶಾಂತ್ ಸಂಬರ್ಗಿಯು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆಯನ್ನು, ರಾಜ್ಯ ಕಾಂಗ್ರೆಸ್‌ನ ಮುಖಂಡರನ್ನು, ಮಾಜಿ ಮುಖ್ಯಮಂತ್ರಿಗಳನ್ನು ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ, ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು' ಎಂದು ಕಾಂಗ್ರೆಸ್ ನಿಯೋಗವು ಪೊಲೀಸರಿಗೆ ಮನವಿ ಸಲ್ಲಿಸಿದೆ.

  ಸಲಾರ್ ನಂತರ ಮತ್ತೊಂದು ಸಿನಿಮಾ ಘೋಷಣೆ ಮಾಡಲಿದೆ ಹೊಂಬಾಳೆ ಫಿಲಂಸ್ | Filmibeat Kannada

  ಕೆಟ್ಟ ಪದಗಳನ್ನು ಬಳಸಿ, ಸುಳ್ಳು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಮಾಜಿ ಸಿಎಂ ಹೆಸರನ್ನು ಪ್ರಸ್ತಾಪಿಸಿ ಪ್ರಚೋದನಕಾರಿ ಹೇಳಿಕೆ ಹಾಗೂ ತಾನೇ ಸೃಷ್ಟಿಸಿರುವ ಭಾವಚಿತ್ರಗಳನ್ನು ಕೆಟ್ಟ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಸಾಮರಸ್ಯ ಕೆಡಿಸುತ್ತಿರುವ ಆರೋಪವನ್ನು ರಾಜ್ಯ ಕಾಂಗ್ರೆಸ್ ಪ್ರಶಾಂತ್ ಸಂಬರ್ಗಿ ಮೇಲೆ ಹೊರಿಸಿದ್ದು, ಅವರ ವಿರುದ್ಧ ಶೀಘ್ರವೇ ಕೈಗೊಳ್ಳುವಂತೆ ಒತ್ತಾಯಿಸಿದೆ.

  English summary
  Karnataka state congress gave complaint against Prashanth Sambargi for his anti congress miss informative social media posts.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X