For Quick Alerts
  ALLOW NOTIFICATIONS  
  For Daily Alerts

  ಕರವೇ ಪ್ರವೀಣ್ ಶೆಟ್ಟಿಯವರಿಂದ ತಮಿಳು ಚಿತ್ರ ರಿಮೇಕ್

  |

  ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿಯವರು ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ.

  ತಮಿಳಿನ 'ಒಳಕ್ಕು ಎನ್ 18 /9 ' ಚಿತ್ರವನ್ನು 'ಕೇಸ್ 18 /9' ಎಂದು ಕನ್ನಡದಲ್ಲಿ ನಿರ್ಮಿಸಲಿದ್ದಾರೆ. ಈ ಚಿತ್ರವನ್ನು ಶೆಟ್ಟಿಯವರು ಇತರ ಮೂವರ ಜೊತೆ ಸೇರಿ ನಿರ್ಮಿಸಲಿದ್ದಾರೆ. ಇದು ಕಟ್ಟಾ ಕನ್ನಡ ಹೋರಾಟಗಾರನೊಬ್ಬ ನಿರ್ಮಿಸುತ್ತಿರುವ ತಮಿಳು ರಿಮೇಕ್ ಚಿತ್ರ.

  ತಾನು ಬದುಕಿನುದ್ದಕ್ಕೂ ಅನುಭವಿಸಿದ ಕಷ್ಟಕ್ಕೂ ಈ ಚಿತ್ರದ ಕಥೆಗೂ ತಂಬಾ ಹೋಲಿಕೆ ಇರುವುದರಿಂದ ಸಿನಿಮಾ ಮಾಡಲು ಮುಂದೆ ಬಂದೆ. ಕಲೆಗೆ ಭಾಷೆಯ ಗಡಿಗಳಿಲ್ಲ ಹಾಗಾಗಿ ಕನ್ನಡಪರ ಹೋರಾಟಗಾರನಾಗಿದ್ದರೂ ತಮಿಳು ಚಿತ್ರವೊಂದನ್ನು ರಿಮೇಕ್ ಮಾಡುತ್ತಿದ್ದೇನೆ ಎಂದು ಶೆಟ್ಟಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

  ತಮಿಳಿನ ಈ ಚಿತ್ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ನಾಮನಿರ್ದೆಶನಗೊಂಡ ಹಿಂದಿಯ ಬರ್ಫಿ ಚಿತ್ರದ ಜೊತೆಗೆ ಸ್ಪರ್ಧೆಯಲ್ಲಿತ್ತು. ಹಾಗಾಗಿ ಈ ಚಿತ್ರಕ್ಕೆ ಬಹಳ ಬೇಡಿಕೆಯಿತ್ತು.

  ಕನ್ನಡ ಹೋರಾಟಗಾರರೆಂದ ಮಾತ್ರಕ್ಕೆ ಕನ್ನಡ ಹೆಸರನ್ನೇ ಇಡಬೇಕೆಂದು ಇಲ್ಲ. ಈಗ ಇಂಗ್ಲಿಷ್ ನ ಎಷ್ಟೋ ಪದಗಳು ಕನ್ನಡದಲ್ಲಿ ಬೆರೆತಿಲ್ಲವೆ ಎಂದು ಪ್ರವೀಣ್ ಶೆಟ್ಟಿ ಚಿತ್ರಕ್ಕೆ ಇಂಗ್ಲಿಷ್ ಹೆಸರು ಇಟ್ಟಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.

  ಮುರಳಿ ಮೀಟ್ಸ್ ಮೀರಾ, ಭದ್ರ ಚಿತ್ರ ನಿರ್ದೇಶಿಸಿದ್ದ ಮಹೇಶ್ ರಾವ್ ಈ ಚಿತ್ರದ ಸೂತ್ರದಾರರು. ರಾಜು ಬೆಳಗೆರೆ (ಚಿತ್ರದುರ್ಗ) ಅವರ ಸಂಭಾಷಣೆ, ಅರ್ಜುನ್ ಜನ್ಯಾ ಸಂಗೀತ ಚಿತ್ರಕ್ಕಿದೆ. ನಿರಂಜನ್ ಚಿತ್ರದ ನಾಯಕ.

  ಕಾರ್ತಿಕ್ ಶರ್ಮಾ, ತಬಲಾ ನಾಣಿ, ಮೈಕೋ ನಾಗರಾಜ್, ರಂಗಾಯಣ ರಘು, ಗಿರಿಜಾ ಲೋಕೇಶ್ ಮುಂತಾದವರು ಪ್ರಮುಖ ತಾರಾಗಣದಲ್ಲಿರುತಾರೆ. ಸಿಂಧು ಲೋಕನಾಥ್ ಮತ್ತು ಶ್ವೇತಾ ಪಂಡಿತ್ ಚಿತ್ರದ ನಾಯಕಿಯರು.

  English summary
  Pro Kannada activist Praveen Shetty to produce Kannada Movie 'Case 18/9". Its remake of successful Tamil flick ' Olakku N 18/9'. Mr Shetty, president of break away KARAVE group justifies remaking Tamil movie; art and Cinema has no language barriers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X