»   » ರಿವೈಸಿಂಗ್ ಕಮಿಟಿ ಬಾಗಿಲು ತಟ್ಟಿದ 'ಅಯೋಧ್ಯಪುರ'

ರಿವೈಸಿಂಗ್ ಕಮಿಟಿ ಬಾಗಿಲು ತಟ್ಟಿದ 'ಅಯೋಧ್ಯಪುರ'

Posted By:
Subscribe to Filmibeat Kannada

ಅಯೋಧ್ಯೆ ಎಂದ ಮೇಲೆ ಎಲ್ಲರ ಹುಬ್ಬೇರುವುದು ಗ್ಯಾರಂಟಿ. ಈ ಕನ್ನಡ ಚಿತ್ರದಲ್ಲಿ ನಿರ್ಮಾಪಕ ಮಧುಸೂದನ್ ಹಾಗೂ ತಂಡ ಹಿಂದೂ ಹುಡುಗ ಹಾಗೂ ಮುಸ್ಲಿಂ ಹುಡುಗಿಯ ಅಂತಾರ್ಜಾತೀಯ ವಿವಾಹವನ್ನು ಕೇಂದ್ರವಾಗಿಟ್ಟುಕೊಂಡೇ ಕಥೆ ಹೆಣೆದಿದ್ದಾರೆ. ಚಿತ್ರದ ಹೆಸರು 'ಕರ್ನಾಟಕ ಅಯೋಧ್ಯೆಪುರಂ'.

ಇತ್ತೀಚೆಗೆ ಈ ಚಿತ್ರ ಪ್ರಾದೇಶಿಕ ಸೆನ್ಸಾರ್ ಮಂಡಳಿ ಮುಂದೆ ಬಂದಿತ್ತು. ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಲು ಹಾಗೂ ಕೆಲವು ಕಡೆ ಕತ್ತರಿ ಹಾಕಲು ಸೆನ್ಸಾರ್ ಮಂಡಳಿ ಸೂಚಿಸಿದೆ. ಈ ಬದಲಾವಣೆಗಳನ್ನು ಒಪ್ಪದ ಚಿತ್ರದ ನಿರ್ದೇಶಕ ವಿ.ಲವ ಹಾಗೂ ನಿರ್ಮಾಪಕರು ರಿವೈಸಿಂಗ್ ಕಮಿಟಿ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.


'ಕರ್ನಾಟಕ ಅಯೋಧ್ಯೆಪುರಂ' ಚಿತ್ರದಲ್ಲಿ ಹಿಂದೂ ಹಾಗೂ ಮುಸ್ಲಿಂ ಧರ್ಮದ ಬಗ್ಗೆ ಕೆಲವು ವಿಚಾರಗಳನ್ನು ನಿರ್ಮಾಪಕ ಕೆ.ಆರ್.ಮಧುಸೂಧನ್ ಹಾಗೂ ನಿರ್ದೇಶಕ ವಿ.ಲವ ಅವರು ಹಲವಾರು ಬಾರಿ ಚರ್ಚಿಸಿ ಸಲಹೆಯನ್ನು ಪಡೆದೆ ಚಿತ್ರೀಕರಣ ಮಾಡಿದ್ದರು. ಈಗ ಸೆನ್ಸಾರ್ ಮಂಡಳಿ ಕ್ಯಾತೆ ತೆಗೆದಿರುವುದು ಅವರ ಅಸಹನೆಗೆ ಕಾರಣವಾಗಿದೆ.

ಹಿಂದೂ ಹುಡುಗನಾಗಿ ರಾಕೇಶ್ ಹಾಗೂ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ನಯನಾ ಅಭಿನಯಿಸುತ್ತಿರುವ ಈ ಚಿತ್ರ ಅಂತಿಮ ಹಂತದ ಚಿತ್ರೀಕರಣವನ್ನು ಈ ತಿಂಗಳ 15ರಿಂದ ಪ್ರಾರಂಭಿಸಲಿದೆ. ಐದು ಹಾಡು ಹಾಗೂ 2 ಸಾಹಸ ಸನ್ನಿವೇಶವನ್ನು ಈ ಹಂತದಲ್ಲಿ ಚಿತ್ರೀಕರಣ ಮಾಡುವುದಾಗಿ ನಿರ್ದೇಶಕ ವಿ.ಲವಾ ತಿಳಿಸಿದ್ದಾರೆ.

ಸಾಗರ್ ನಾಗಭೂಷಣ್ ಅವರ ಸಂಗೀತ, ನಾಗರಾಜ್ ಅವರ ಛಾಯಾಗ್ರಹಣ, ಅಲ್ಟಿಮೇಟ್ ಶಿವು ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ತಾರಾಗಣದಲ್ಲಿ ಅಚ್ಯುತ ರಾವ್, ಸ್ವಸ್ತಿಕ್ ಶಂಕರ್, ಬುಲೆಟ್ ಪ್ರಕಾಶ್, ಮೋಹನ್ ಜುನೇಜಾ, ಅಕ್ಷಯ್, ಉದಯ ಟಿ.ವಿ. ಕಾಮಿಡಿ ಹರೀಶ್ ಹಾಗೂ ಇನ್ನಿತರರು ಇದ್ದಾರೆ. (ಒನ್ಇಂಡಿಯಾ ಕನ್ನಡ)

English summary
Kannada film 'Karnataka Ayodhyepuram' again lands in trouble. The film unit is upset over regional censor board. Now the team has decided to go to the Revising Committee. Rakesh and Nayana are playing a Hindu boy and Muslim girl in the film.
Please Wait while comments are loading...