India
  For Quick Alerts
  ALLOW NOTIFICATIONS  
  For Daily Alerts

  'ಪ್ರತಿಭಟನೆಗೆ ಬನ್ನಿ' ಅಂತ ಸ್ಟಾರ್ಸ್ ಗೆ ಎಲೆ-ಅಡಿಕೆ ಕೊಟ್ಟು ಕರೀಬೇಕಿತ್ತಾ?

  By ಕನ್ನಡ ಅಭಿಮಾನಿ
  |

  ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಇಂದು ಕರೆ ನೀಡಿದ ಕರ್ನಾಟಕ ಬಂದ್ ಯಶಸ್ವಿ ಆಗಿದೆ. ಕರ್ನಾಟಕ ಬಂದ್ ಗೆ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಕರ್ನಾಟಕ ಬಂದ್ ಗೆ ಸ್ಯಾಂಡಲ್ ವುಡ್ ಕಡೆಯಿಂದ ಸಂಪೂರ್ಣ ಬೆಂಬಲ ನೀಡಿದರೂ, ವಿವಿಧ ಸಂಘಟನೆಗಳು ನಗರದ ಹಲವೆಡೆ ಹಮ್ಮಿಕೊಂಡಿದ್ದ ಪ್ರತಿಭಟನೆಗಳಲ್ಲಿ ಕನ್ನಡ ಚಿತ್ರರಂಗದ ಯಾರೊಬ್ಬರೂ ಭಾಗವಹಿಸದೇ ಇದ್ದದ್ದು ದುರಂತ.!! [ಉತ್ತರ ಕರ್ನಾಟಕದ ನೀರಿನ ತುಡಿತಕ್ಕೆ ಮಿಡಿದ ಬೆಂಗಳೂರು]

  ಕಳಸಾ-ಬಂಡೂರಿ ಯೋಜನೆಗೆ ಆಗ್ರಹಿಸಿ, ಇಡೀ ಸ್ಯಾಂಡಲ್ ವುಡ್ ಸೆಪ್ಟೆಂಬರ್ 13 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಕೈಗೊಂಡಿದ್ದರು. 'ಹೋರಾಟದಲ್ಲಿ ನಿಮ್ಮ ಜೊತೆ ನಾವಿರುತ್ತೇವೆ' ಅಂತ ಎಲ್ಲಾ ಕಲಾವಿದರು ಅಂದು ನುಡಿಮುತ್ತುಗಳನ್ನು ಉದುರಿಸಿದ್ದರು. ಆದ್ರೆ, ಇಂದು ಯಾವೊಬ್ಬ ಕಲಾವಿದರೂ ಬೀದಿಗೆ ಇಳಿಯಲೇ ಇಲ್ಲ.! [ಕಳಸಾ-ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು ; ಯಾರು ಏನು ಹೇಳಿದರು?]

  ಕನ್ನಡ ಚಿತ್ರರಂಗದವರೇ ಆದ ಸಾ.ರಾ.ಗೋವಿಂದು, ಕನ್ನಡ ಚಳುವಳಿ ಪಕ್ಷದ ವಾಟಾಳ್ ನಾಗರಾಜ್ ಜೊತೆ ಪುರಭವನದಿಂದ ಬೃಹತ್ ಮೆರವಣಿಗೆ ನಡೆಸಿ, ಫ್ರೀಡಂ ಪಾರ್ಕ್ ನಲ್ಲಿ ಬಹಿರಂಗ ಸಭೆಯನ್ನು ಆಯೋಜಿಸಿದ್ದರು.

  karnataka-bandh

  ಹೀಗಿದ್ದರೂ, ಎಲ್ಲಿಯೂ ಸ್ಯಾಂಡಲ್ ವುಡ್ ಕಂಪು ಬೀರಲಿಲ್ಲ. ಒಂದು ದಿನದ ಮಟ್ಟಿಗೆ ಅಬ್ಬರಿಸಿ ಬೊಬ್ಬಿರಿದ 'ಗಾಂಧಿನಗರ' ಇಂದು ಎಲ್ಲಿ ಕಾಣೆ ಆಯ್ತು ಅನ್ನೋದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಪ್ರಶ್ನೆ.

  ಎಲ್ಲರಿಗಿಂತ ಮುಂಚೆ 'ರೈತರ ಕಷ್ಟಗಳಿಗೆ ಸ್ಪಂದಿಸುತ್ತೇನೆ' ಅಂತ ಮೊದಲು ಕಿಚ್ಚ ಸುದೀಪ್ ಮುಂದೆ ಬಂದರು. 'ಇಂದು ನಡೆಯುವ ಬಂದ್ ಗೆ ಸಂಪೂರ್ಣ ಬೆಂಬಲ ಇದೆ' ಅಂತ ಶಿವರಾಜ್ ಕುಮಾರ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಪುನೀತ್ ರಾಜ್ ಕುಮಾರ್, ದರ್ಶನ್, ಧ್ರುವ ಸರ್ಜಾ, ದುನಿಯಾ ವಿಜಯ್ ರೈತರ ಪರವಾಗಿ ವೇದಿಕೆಯಲ್ಲಿ ಭಾಷಣ ಮಾಡಿದ್ದರು. ಇವರೆಲ್ಲಾ ಇಂದು ದುರ್ಬೀನು ಹಾಕೊಂಡು ಹುಡುಕಿದರೂ ಸಿಗಲಿಲ್ಲ.!

  ಹಾಗ್ನೋಡಿದ್ರೆ, ಈ ಎಲ್ಲಾ ನಟರಿಗೆ ಬೆಂಗಳೂರು-ಮೈಸೂರು-ಮಂಡ್ಯ ಬಿಟ್ಟರೆ ದೊಡ್ಡ ಮಾರ್ಕೆಟ್ ಇರುವುದೇ ಉತ್ತರ ಕರ್ನಾಟಕದಲ್ಲಿ. ದರ್ಶನ್, ಶಿವರಾಜ್ ಕುಮಾರ್ ಅಭಿನಯದ ಅನೇಕ ಸಿನಿಮಾಗಳು ಉತ್ತರ ಕರ್ನಾಟಕದಲ್ಲಿ ಶೂಟ್ ಆಗಿವೆ. ಹೀಗಿದ್ಮೇಲೆ, ಆ ಜನರ ಕೂಗಿ ನಟರು ಸ್ಪಂದಿಸುವುದು ಬೇಡವಾ? ವಿವಿಧ ಸಂಘಟನೆಗಳು ಎಲ್ಲರಿಗೂ ಎಲೆ ಅಡಿಕೆ ಕೊಟ್ಟು ಆಮಂತ್ರಣ ನೀಡಬೇಕಿತ್ತಾ? ಸಾಮಾಜಿಕ ಜವಾಬ್ದಾರಿ ಹೊಂದಿರುವ ನಟರಿಗೆ ಜನರ ಕಾಳಜಿ ಒಂದು ದಿನದ ಮಟ್ಟಿಗೆ ಮಾತ್ರ ಸೀಮಿತವಾಗೋಯ್ತಾ? [ಮಹದಾಯಿ, ಸಿನಿಮಾದವರ ಬೆಂಬಲಕ್ಕೆ ಅಪಸ್ವರ: ನಾವೇನು ಷಂಡರಾ?]

  ''ಇಲ್ಲಿ ಸದ್ದು ಮಾಡಿದರೆ, ಅಲ್ಲಿ ಕೇಳಿಸಬೇಕು'' ಅಂತ ಸ್ಟಾರ್ ನಟರು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ಹೇಳಿ ಚಪ್ಪಾಳೆ ಗಿಟ್ಟಿಸಿದ್ದುಂಟು. ಆದ್ರೆ, ಇಂದು ಚಿತ್ರರಂಗ ಸದ್ದು ಮಾಡದೆ ಸೈಲೆಂಟ್ ಆಗಿದ್ದು ಯಾಕೆ ಅನ್ನುವ ಅಭಿಮಾನಿ ದೇವರುಗಳ ಪ್ರಶ್ನೆಗೆ 'ಕನ್ನಡ ಕಲಾವಿದರೇ' ಉತ್ತರ ನೀಡಬೇಕು.

  English summary
  Pro-Kannada outfits have called for a 'Karnataka Bandh' today (September 26) to protest against Goa Government opposition to Kalsa-Banduri drinking water project. Sadly, None of Sandalwood Stars participated in the Protest today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X