»   » ಕರ್ನಾಟಕ ಕ್ರಿಕೆಟರ್ಸ್ ಮತ್ತು ಕನ್ನಡ ಸಿನಿಮಾ ನಂಟು.!

ಕರ್ನಾಟಕ ಕ್ರಿಕೆಟರ್ಸ್ ಮತ್ತು ಕನ್ನಡ ಸಿನಿಮಾ ನಂಟು.!

Posted By:
Subscribe to Filmibeat Kannada

ಭಾರತೀಯ ಕ್ರಿಕೆಟ್ ಪಟುಗಳಿಗೆ ಬಾಲಿವುಡ್ ಅಂದ್ರೆ ಎಲ್ಲಿಲ್ಲದ ಮೋಹ. ಅದಕ್ಕೆ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಮೊಹಮ್ಮದ್ ಅಜರುದ್ದೀನ್ ಬಗ್ಗೆ ಹಿಂದಿಯಲ್ಲಿ ಸಿನಿಮಾ ಆಗಿದೆ. ಈಗ ಕಪಿಲ್ ದೇವ್ ಕುರಿತು ಸಿನಿಮಾ ಬರ್ತಿದೆ.

ಕರ್ನಾಟಕ ಕ್ರಿಕೆಟರ್ಸ್ ಗೂ ಸ್ಯಾಂಡಲ್ ವುಡ್ ಕಂಡ್ರೆ ತುಂಬ ಪ್ರೀತಿ. ಆದ್ರೆ, ಕನ್ನಡದಲ್ಲಿ ಕ್ರಿಕೆಟ್ ಪಟುಗಳ ಕುರಿತು ಸಿನಿಮಾ ಬಂದಿಲ್ಲ. ಆದ್ರೆ, ಭಾರತ ಕ್ರಿಕೆಟ್ ತಂಡವನ್ನ ಪ್ರತಿನಿಧಿಸಿದ್ದ, ಕರ್ನಾಟಕ ಕ್ರಿಕೆಟರ್ಸ್ ಗಳು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಹಾಗಿದ್ರೆ, ಯಾವ ಕ್ರಿಕೆಟ್ ಆಟಗಾರರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದು ತಿಳಿಯಲು ಮುಂದೆ ಓದಿ.....

'ನವತಾರೆ' ಚಿತ್ರದಲ್ಲಿ ವಿಶ್ವನಾಥ್

ಕುಮಾರ ಬಂಗಾರಪ್ಪ ಅಭಿನಯಿಸಿದ್ದ 'ನವತಾರೆ' ಚಿತ್ರದಲ್ಲಿ ಭಾರತದ ಮಾಜಿ ಕ್ರಿಕೆಟ್ ಆಟಗಾರ ಗುಂಡಪ್ಪ ಆರ್ ವಿಶ್ವನಾಥ್ ಅಭಿನಯಿಸಿದ್ದರು. ಇದೊಂದು ಕ್ರಿಕೆಟ್ ಆಟಗಾರನ ಕುರಿತ ಚಿತ್ರವಾಗಿತ್ತು.

ಸೈಯಾದ್ ಕೀರ್ಮಾನಿ

ನಟ ಆದಿತ್ಯ ಅಭಿನಯದ 'ಡೆಡ್ಲಿ-2' ಮತ್ತು 'ನವತಾರೆ' ಚಿತ್ರ ಸೇರಿದಂತೆ ಕನ್ನಡದಲ್ಲಿ 2 ಸಿನಿಮಾ, ಹಾಗೂ ಹಿಂದಿ ಮತ್ತು ಮಲಯಾಳಂ ಚಿತ್ರದಲ್ಲಿ ಭಾರತದ ಮಾಜಿ ಕ್ರಿಕೆಟ್ ಆಟಗಾರ ಸೈಯಾದ್ ಕೀರ್ಮಾನಿ ನಟಿಸಿದ್ದಾರೆ.

ಒಂದೇ ಸಿನಿಮಾದಲ್ಲಿ ಮೂವರು ಆಟಗಾರರು

'ಈ ಪ್ರೀತಿ ಒಂಥರಾ' ಚಿತ್ರದ ಹಾಡೊಂದರಲ್ಲಿ ಕ್ರಿಕೆಟಿಗರಾದ ಸುನೀಲ್ ಜೋಶಿ, ಅಯ್ಯಪ್ಪ, ಮತ್ತು ಅಖಿಲ್ ಅಭಿನಯಿಸಿದ್ದರು.

ವೆಂಕಟೇಶ್ ಪ್ರಸಾದ್ ಮತ್ತು ಜವಗಲ್ ಶ್ರೀನಾಥ್

ಮಾಸ್ಟರ್ ಸ್ನೇಹಿತ್ ಅಭಿನಯಿಸಿದ್ದ 'ಸಚಿನ್ ತೆಂಡೂಲ್ಕರ್ ಅಲ್ಲ' ಚಿತ್ರದಲ್ಲಿ ಭಾರತದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಮತ್ತು ಜವಗಲ್ ಶ್ರೀನಾಥ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದರು.

ಕುಂಬ್ಳೆಗೆ ಸುದೀಪ್ ಅಂದ್ರೆ ಇಷ್ಟ

ವಿಶ್ವ ಕಂಡ ಶ್ರೇಷ್ಠ ಸ್ವಿನ್ ಬೌಲರ್ ಅನಿಲ್ ಕುಂಬ್ಳೆಗೆ ಕನ್ನಡದಲ್ಲಿ ಸುದೀಪ್ ಅಂದ್ರೆ ಇಷ್ಟವಂತೆ. ಇನ್ನು ಇತ್ತೀಚೆಗಷ್ಟೇ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆಯಲ್ಲಿ ಫೋಟೋ ತೆಗೆಸಿಕೊಂಡಿದ್ದರು.

'ಜಂಬೋ' ಅನಿಲ್ ಕುಂಬ್ಳೆ ಜೊತೆ 'ಗೋಲ್ಡನ್ ಸ್ಟಾರ್' ಗಣೇಶ್ ಸೂಪರ್ ಸೆಲ್ಫಿ

'ಮಡಿಕೇರಿ ಸಿಪಾಯಿ' ರಾಬಿನ್ ಉತ್ತಪ್ಪ

ಭಾರತದ ಯುವ ಕ್ರಿಕೆಟ್ ಆಟಗಾರ ರಾಬಿನ್ ಉತ್ತಪ್ಪಗೆ ಡಾ ವಿಷ್ಣುವರ್ಧನ್ ಅವರಂದ್ರೆ ತುಂಬ ಇಷ್ಟವಂತೆ. ಎಲ್ಲರು ಪ್ರೀತಿಯಿಂದ ರಾಬಿನ್ ಉತ್ತಪ್ಪ ಅವರನ್ನ ಮಡಿಕೇರಿ ಸಿಪಾಯಿ ಎಂದು ಕರೆಯುತ್ತಾರೆ.

English summary
Karnataka cricketers relationship with Kannada Films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada