»   » ವೋಟ್ ಹಾಕದೆ ವಾಪಸ್ ಹೋದರು Rank ರಾಜು ಗುರುನಂದನ್

ವೋಟ್ ಹಾಕದೆ ವಾಪಸ್ ಹೋದರು Rank ರಾಜು ಗುರುನಂದನ್

Posted By:
Subscribe to Filmibeat Kannada

ಇಂದು ಕನ್ನಡ ಚಿತ್ರರಂಗದ ಹಲವಾರು ಕಲಾವಿದರು ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಆದರೆ ಫಸ್ಟ್ Rank ರಾಜು ಖ್ಯಾತಿಯ ನಟ ಗುರುನಂದನ್ ಮಾತ್ರ ಮತ ಹಾಕದೆ ವಾಪಸ್ ಮನೆಗೆ ಹೋಗಿದ್ದಾರೆ.

ಮತದಾನ ಮಾಡುವ ಜೋಶ್ ನಲ್ಲಿ ಇಂದು ತಮ್ಮ ಮತಗಟ್ಟೆಗೆ ಬಂದ ನಟ ಗುರುನಂದನ್ ಬೇಸರ ಮಾಡಿಕೊಂಡರು. ಯಾಕೆಂದರೆ, ವೋಟರ್ ಲಿಸ್ಟ್ ನಲ್ಲಿ ಅವರ ಹೆಸರು ಇರಲಿಲ್ಲ. ಅವರ ಕುಟುಂಬದ ಸದಸ್ಯರ ಜೊತೆಗೆ ಬಂದಿದ್ದ ಗುರು ಕೆಲ ಕಾಲ ನೋಡಿದರು. ಹೆಸರು ಇಲ್ಲ ಎಂದು ತಿಳಿದು ಬೇಸರದಲ್ಲಿ ಮನೆಗೆ ಹಿಂದಿರುಗಿದರು.

ವೋಟ್ ಮಾಡಿದ ಸ್ಟಾರ್ ಪಟ್ಟಿ : ಮತದಾನ ಮಾಡಿ ಜವಾಬ್ದಾರಿ ಮೆರೆದವರು

ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಎಲ್ಲೆಲ್ಲಿಂದಲೋ ವಲಸೆ ಬಂದವರಿಗೆ ವೋಟ್ ಹಾಕುಲು ಅವಕಾಶ ಇದೆ. ಆದರೆ ಬೆಂಗಳೂರಿನಲ್ಲಿಯೇ ಇರುವ ನಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ ಎಂದು ಕೋಪಗೊಂಡರು.

karnataka election 2018 actor gurunandans name was in voter list

ಉಳಿದಂತೆ, ಕನ್ನಡದ ನಟರಾದ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಉಪೇಂದ್ರ ಸುದೀಪ್, ರಮೇಶ್, ಯಶ್ ಸೇರಿದಂತೆ ಸಾಕಷ್ಟು ಕಲಾವಿದರು ವೋಟ್ ಮಾಡಿದರು.

English summary
Karnataka Election 2018 : Kannada actor Gurunandan's name was in voter list.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X