»   » ಪತ್ನಿ ಮತ್ತು ಮಕ್ಕಳ ಜೊತೆಗೆ ಮತ ಚಲಾವಣೆ ಮಾಡಿದ ಜಗ್ಗೇಶ್

ಪತ್ನಿ ಮತ್ತು ಮಕ್ಕಳ ಜೊತೆಗೆ ಮತ ಚಲಾವಣೆ ಮಾಡಿದ ಜಗ್ಗೇಶ್

Posted By:
Subscribe to Filmibeat Kannada

ಇಂದು ಕರ್ನಾಟಕ ಚುನಾವಣೆ.. ರಾಜ್ಯದ ಜನ ಮತದಾನ ಮಾಡಿ ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಅದೇ ರೀತಿ ನಟ ಜಗ್ಗೇಶ್ ಕೂಡ ತಮ್ಮ ಕುಟುಂಬದ ಜೊತೆಗೆ ಮತದಾನ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜಗ್ಗೇಶ್ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೂಡ ಆಗಿದ್ದಾರೆ.

LIVE: ಕರ್ನಾಟಕದ ಹಣೆಬರಹ ಬರೆಯುತ್ತಿರುವ ಮತದಾರರು

ಇಂದು ಬೆಳ್ಳಗೆ ಜಗ್ಗೇಶ್ ತಮ್ಮ ಪತ್ನಿ ಪರಿಮಳ ಹಾಗೂ ಇಬ್ಬರು ಮಕ್ಕಳ ಜೊತೆಗೆ ವೋಟ್ ಹಾಕಿದ್ದಾರೆ. ಮಲ್ಲೇಶ್ವರಂ ನಲ್ಲಿ ಜಗ್ಗೇಶ್ ಮತದಾನ ಮಾಡಿದ್ದು, ನಂತರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಂತಸ ಹಂಚಿಕೊಂಡಿದ್ದಾರೆ.

karnataka election 2018 jaggesh voted in malleshwaram

''ಹೆಮ್ಮೆಯಿಂದ ಮತ ಹಾಕಿ ಬಂದೆ.. ಮತ ಹಾಕುವುದು ಪ್ರಜೆಯೇ ಹಕ್ಕು.. ಮತದಾರನೆ ಈ ದೇಶದ ಸಾರ್ವಭೌಮ.. ಸರದಿಸಾಲಲ್ಲಿ ನಿಲ್ಲಲು ಬೇಸರಬೇಡ.. ಹೆಮ್ಮೆಯಿಂದ ತಾಳ್ಮೆಯಿಂದ ನಿಂತು ಮತದಾನ ಮಾಡಿ.. ಜಾತಿ ಮತ ಧರ್ಮ ಪಂಕ್ತಕ್ಕಿಂತ ದೇಶ ರಾಜ್ಯದ ಒಳಿತಿಗಾಗಿ ಮತದಾನ ಮಾಡಿ. ನಾವು ಸರಿಯಿದ್ದರೆ ಸಮಾಜ ಸರಿಯಿರುತ್ತದೆ..ಜೈಹಿಂದ್..ವಂದೆಮಾತರಂ..ಶುಭದಿನ..'' ಎಂದು ಜಗ್ಗೇಶ್ ತಮ್ಮ ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರರಂಗದ ಅನೇಕರು ಜಗ್ಗೇಶ್ ಅವರಿಗೆ ಶುಭ ಕೋರಿದ್ದಾರೆ. ವಿಶೇಷ ಅಂದರೆ, ಅವರ ಪುಟ್ಟ ಮೊಮ್ಮಗ ಅರ್ಜುನ್ ಬಿಜೆಪಿ ಪಕ್ಷದ ಚಿಹ್ನೆಯ ಟೋಪಿ ಧರಿಸಿ ತಮ್ಮ ತಾತನಿಗೆ ಆಲ್ ದಿ ಬೆಸ್ಟ್ ಹೇಳಿದ್ದಾನೆ.

English summary
Karnataka Election 2018 : Kannada actor and Yeshwanthpura constituency bjp candidate Jaggesh voted in malleshwaram with his wife Parimala Jaggesh.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X