For Quick Alerts
  ALLOW NOTIFICATIONS  
  For Daily Alerts

  ಹಕ್ಕು ಚಲಾಯಿಸಿದ ಕಿರುತೆರೆಯ ಕಲಾವಿದರು

  By Pavithra
  |

  ಈ ಬಾರಿಯ ವಿಧಾನಸಭಾ ಚುನಾವಣೆ 2018 ರಲ್ಲಿ ಸಿನಿಮಾ ಸ್ಟಾರ್ ಗಳ ಹವಾ ಜೋರಾಗಿಯೇ ಇತ್ತು. ತಮ್ಮಗಿಷ್ಟವಾದ ಅಭ್ಯರ್ಥಿಗಳ ಪರವಾಗಿ ಕಲಾವಿದರು ಮತಯಾಚನೆ ಮಾಡಿದರು. ಅದಷ್ಟೇ ಅಲ್ಲದೆ ಮಾತಿಗೆ ತಪ್ಪದೇ ಎಲ್ಲಾ ಕೆಲಸವನ್ನು ಬದಿಗಿಟ್ಟು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

  ಸಿನಿಮಾ ಸ್ಟಾರ್ ಗಳ ಜೊತೆಯಲ್ಲಿ ಕಿರುತೆರೆಯ ಕಲಾವಿದರು ಕೂಡ ರಾಜಕೀಯ ವ್ಯಕ್ತಿಗಳ ಪರವಾಗಿ ಪ್ರಚಾರ ಮಾಡಿದ್ದಾರೆ. ಎಲ್ಲಾ ಪಕ್ಷಗಳಲ್ಲಿಯೂ ತಮ್ಮ ತಮ್ಮ ಇಷ್ಟದ ಅಭ್ಯರ್ಥಿ ಪರವಾಗಿಯೇ ಕಿರುತೆರೆಯ ಕಲಾವಿದರು ಮತಯಾಚನೆ ಮಾಡಿದ್ದರು.

  ಮೊದಲ ಬಾರಿಗೆ ಮತ ಚಲಾಯಿಸಿದ ರಮೇಶ್ ಅರವಿಂದ್ ಮಗಳುಮೊದಲ ಬಾರಿಗೆ ಮತ ಚಲಾಯಿಸಿದ ರಮೇಶ್ ಅರವಿಂದ್ ಮಗಳು

  ಇದರ ಜೊತೆಯಲ್ಲಿ ತಾವು ಅಭಿನಯಿಸಿದ ಧಾರಾವಾಹಿ ಪ್ರಸಾರ ಆಗುವ ವಾಹಿನಿಗಳ ಮೂಲಕವೂ ಮತದಾನದ ಬಗ್ಗೆ ಜಾಗೃತಿ ಮೂಡಿಸಿದ್ದರು. ಮತದಾನ ಮಾಡಿ ಅಂತ ಜನ ಸಾಮಾನ್ಯರಿಗೆ ತಿಳಿ ಹೇಳಿದ್ದ ಕಿರುತೆರೆಯ ಸೂಪರ್ ಸ್ಟಾರ್ ಗಳು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಹಾಗಾದರೆ ಯಾರೆಲ್ಲ ವೋಟ್ ಮಾಡಿದರು ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

  ಟಾಕಿಂಗ್ ಸ್ಟಾರ್ ಸೃಜನ್

  ಟಾಕಿಂಗ್ ಸ್ಟಾರ್ ಸೃಜನ್

  ಮತದಾನಕ್ಕಾಗಿ ಸುಮಾರು ಒಂದು ತಿಂಗಳಿನಿಂದ ತಮ್ಮ ಕಾರ್ಯಕ್ರಮ ಹಾಗೂ ಸ್ವತಃ ಜವಾಬ್ದಾರಿ ತೆಗೆದುಕೊಂಡು ಜಾಗೃತಿ ಮೂಡಿಸುತ್ತಿದ್ದ ನಟ ಸೃಜನ್ ಕೂಡ ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ. ಕತ್ರಿಗುಪ್ಪೆಯಲ್ಲಿ ಸೃಜನ್ ವೋಟ್ ಮಾಡಿದ್ದಾರೆ.

  ಮಂಗಳೂರಿನಲ್ಲಿ ಅನುಶ್ರೀ ಮತದಾನ

  ಮಂಗಳೂರಿನಲ್ಲಿ ಅನುಶ್ರೀ ಮತದಾನ

  ಕನ್ನಡ ಸಿನಿಮಾ ನಟಿ ಹಾಗೂ ಕಿರುತೆರೆಯ ಸ್ಟಾರ್ ನಿರೂಪಕಿ ಅನುಶ್ರೀ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಮಂಗಳೂರಿನ ಕದ್ರಿಯಲ್ಲಿ ಅನುಶ್ರೀ ತಮ್ಮ ತಾಯಿಯ ಜೊತೆಯಲ್ಲಿ ಮತದಾನ ಮಾಡಿದ್ದಾರೆ.

  ವೋಟ್ ಮಾಡೊದ ಅನಿಕ

  ವೋಟ್ ಮಾಡೊದ ಅನಿಕ

  ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಖ್ಯಾತಿಯ ನಟಿ ಅನಿಕ ತಮ್ಮ ಬ್ಯುಸಿ ಕೆಲಸದ ಮಧ್ಯೆ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ವೋಟ್ ಮಾಡಿ ವೀಕ್ಷಕರಿಗೆ ಸಂದೇಶ ಸಾರಿದ್ದಾರೆ.

  ಮತದಾನ ಮಾಡಿದ ರಂಜನಿ ರಾಘವನ್

  ಮತದಾನ ಮಾಡಿದ ರಂಜನಿ ರಾಘವನ್

  ಪುಟ್ಟಗೌರಿ ಧಾರಾವಾಹಿಯ ಮೂಲಕ ಮನೆ ಮನೆ ಮಾತಾಗಿರುವ ನಟಿ ರಂಜನಿ ರಾಘವನ್ ಕೂಡ ವಿದ್ಯಾರಣ್ಯಪುರಂ ನಲ್ಲಿ ತಮ್ಮ ಹಕ್ಕು ಚಲಾಯಿಸಿ ಅನೇಕರಿಗೆ ಮಾದರಿಯಾಗಿದ್ದಾರೆ. ರಜನಿ ಕೂಡ ಈ ಬಾರಿಯ ಚುನಾವಣೆಯ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದರು.

  ಮತದಾನ ಮಾಡಿದ ದೀಪಿಕಾ ದಾಸ್

  ಮತದಾನ ಮಾಡಿದ ದೀಪಿಕಾ ದಾಸ್

  ನಾಗಿಣಿ ಧಾರಾವಾಹಿ ಮೂಲಕ ಪ್ರಖ್ಯಾತಿ ಪಡೆದುಕೊಂಡಿರುವ ನಟಿ ದೀಪಿಕಾ ದಾಸ್ ತಮ್ಮ ತಾಯಿಯ ಜೊತೆ ಹೋಗಿ ಮತದಾನ ಮಾಡಿ ಬಂದಿದ್ದಾರೆ. ದೀಪಿಕಾ ಕೂಡ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದರು.

  ಮತಚಲಾಯಿಸಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ ಸ್ಟಾರ್ ಗಳುಮತಚಲಾಯಿಸಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ ಸ್ಟಾರ್ ಗಳು

  English summary
  Kannada serial actor and actress voted Karnataka Assembly polls in 2018.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X