twitter
    For Quick Alerts
    ALLOW NOTIFICATIONS  
    For Daily Alerts

    ಅವಧಿ ಮುಗಿದು ವರ್ಷವಾದರೂ ಫಿಲ್ಮ್ ಚೇಂಬರ್‌ಗೆ ಚುನಾವಣೆ ನಡೆದಿಲ್ಲ: ರೊಚ್ಚಿಗೆದ್ದ ಸದಸ್ಯರು

    |

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(KFCC) ಇದು ಕನ್ನಡ ಚಲನ ಚಿತ್ರರಂಗದ ಬಹುಮುಖ್ಯ ಅಂಗ. ಸಿನಿಮಾರಂಗದ ಯಾವುದೇ ಚಟುವಟಿಕೆಗಳಿದ್ದರೂ ಅವೆಲ್ಲವೂ ಇಲ್ಲಿಂದಲೇ ನಡೆಯುತ್ತೆ. ಸಿನಿಮಾ ಶೀರ್ಷಿಕೆ ನೋಂದಣಿಯಿಂದ ಹಿಡಿದು, ವಿವಾದಗಳವರೆಗೂ ಫಿಲ್ಮ್ ಚೇಂಬರ್‌ನಲ್ಲೇ ತೀರ್ಮಾನವಾಗುತ್ತೆ. ಆದರೆ, ಇದೇ ವಾಣಿಜ್ಯ ಮಂಡಳಿ ಈಗ ವಿವಾದಕ್ಕೆ ಸಿಲುಕಿದೆ. ಅವಧಿ ಮುಗಿದು ವರ್ಷವೇ ಕಳೆದು ಹೋಗಿದ್ದರು ಇನ್ನೂ ಚುನಾವಣೆ ನಡೆಸುತ್ತಿಲ್ಲವೆಂಬ ಆರೋಪ ಎದುರಿಸುತ್ತಿದೆ.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಒಂದು ವರ್ಷದ ಅವಧಿಗೆ ಚುನಾವಣೆ ನಡೆಯುತ್ತೆ. ಒಂದು ಅವಧಿ ಮುಗಿಯುವುದರೊಳಗೆ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಬೇಕು. ಪ್ರತಿಬಾರಿಯೂ ನಿಯಮದ ಪ್ರಕಾರ ಒಂದೊಂದು ವಲಯಕ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶವಿರುತ್ತದೆ. ಆದರೆ, ವಾಣಿಜ್ಯ ಮಂಡಳಿಗೆ ಎರಡು ವರ್ಷವಾದರೂ ಎಲೆಕ್ಷನ್ ನಡೆದಿಲ್ಲವೆಂದು ಫಿಲ್ಮ್ ಚೇಂಬರ್ ಸದಸ್ಯರು ಜಿಲ್ಲಾ ನೋಂದಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

    ಎರಡು ವರ್ಷವಾದರೂ ಫಿಲ್ಮ್ ಚೇಂಬರ್‌ಗೆ ಚುನಾವಣೆ ನಡೆದಿಲ್ಲ ಏಕೆ?

    "2019ರಲ್ಲಿ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಚುನಾವಣೆ ನಡೆದಿತ್ತು. ಆ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಜೈರಾಜ್ ಆಯ್ಕೆಯಾಗಿದ್ದರು. ಇವರೊಂದಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿತ್ತು. ಇವರ ಅವಧಿ 2020 ಜೂನ್ ತಿಂಗಳಲ್ಲಿಯೇ ಮುಗಿದಿದೆ. ಅದು ಕಳೆದು ಒಂದು ವರ್ಷವಾದರೂ, ಇನ್ನೂ ಚುನಾವಣೆಗೆ ದಿನಾಂಕ ನಿಗಧಿ ಮಾಡಿಲ್ಲ. ಅಧಿಕಾರದ ಆಸೆಗೆ ನಿಯಮವನ್ನು ಮುರಿದಿದ್ದಾರೆ." ಎಂದು ನಿರ್ಮಾಪಕ ಭಾ ಮಾ ಹರೀಶ್ ಆರೋಪಿಸಿದ್ದಾರೆ.

    Karnataka Film Chamber member goes against current Committee for not conducting election

    ನೋಂದಣಾಧಿಕಾರಿಗಳು ಪತ್ರ ಬರೆದರೂ ಚುನಾವಣೆ ನಡೆದಿಲ್ಲ

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ಈ ಹಿಂದೆಯೇ ಜಿಲ್ಲಾ ನೋಂದಣಾಧಿಕಾರಿಗಳಿಗೆ ಚುನಾವಣೆ ನಡೆಸಲು ಆದೇಶ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಕೂಡಲೇ ಸ್ಪಂದಿಸಿದ ನೋಂದಣಾಧಿಕಾರಿಗಳು ವಾಣಿಜ್ಯ ಮಂಡಳಿಗೆ ಚುನಾವಣೆ ನಡೆಸುವಂತೆ ಆದೇಶಿಸಿದ್ದರು. ಆದರೂ, ಆದೇಶವನ್ನು ಗಾಳಿಗೆ ತೂರಲಾಗಿದೆ ಎಂದು ಮತ್ತೆ ಪತ್ರದ ಮೂಲಕ ದೂರು ನೀಡಿದ್ದಾರೆ. "ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳು ತಮ್ಮ ಆದೇಶವನ್ನು ನಿರ್ಲಕ್ಷಿಸಿ, ಚುನಾವಣೆಗೆ ಸಂಬಂಧಪಟ್ಟ ಯಾವುದೇ ಚಟುವಟಿಕೆಗಳನ್ನು ಪ್ರಾರಂಭಿಸದೇ ದುರುದ್ದೇಶ ಪೂರ್ವಕವಾಗಿ ಚುನಾವಣೆಯನ್ನು ಮುಂದೂಡಲು ಯತ್ನಿಸಿರುತ್ತಾರೆ. ಮಂಡಳಿಯ ನೀತಿ ನಿಯಮಗಳಿಗೆ ವಿರುದ್ಧವಾಗಿ ಅನಧಿಕೃತವಾಗಿ ಅಧಿಕಾರ ನಡೆಸುತ್ತಿರುವ ಪ್ರಸ್ತುತ ಆಡಳಿತ ಮಂಡಳಿಯು ನ್ಯಾಯಾಲಯದ ತೀರ್ಪು ಹಾಗೂ ಇಲಾಖೆಯ ಆದೇಶವನ್ನ ಗಾಳಿಗೆ ತೂರಿ ಚುನಾವಣೆಯನ್ನು ನಡೆಸದೆ ಕಾನೂನನ್ನು ಉಲ್ಲಂಘಿಸಿದೆ." ಎಂದು ದೂರಿನಲ್ಲಿ ಬರೆದಿದ್ದಾರೆ.

    Karnataka Film Chamber member goes against current Committee for not conducting election

    ದೂರು ಸಲ್ಲಿಸಿದವರು ಯಾರು?

    ನವೆಂಬರ್ 26ರಂದು ಚುನಾವಣೆಗೆ ಸಂಬಂಧಿಸಿದಂತೆ ತುರ್ತುಸಭೆ ನಡೆಸಿದರೂ, ಸದಸ್ಯರಿಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಹೀಗಾಗಿ ಇಲಾಖೆಯಿಂದ ಚುನಾವಣಾಧಿಕಾರಿಯನ್ನು ನೇಮಿಸಿ, ಡಿಸೆಂಬರ್ 31ರೊಳಗೆ ಚುನಾವಣೆ ನೆಡಸಬೇಕು ಎಂದು ವಾಣಿಜ್ಯ ಮಂಡಳಿ ಸದಸ್ಯರು ಮನವಿ ಮಾಡಿಕೊಂಡಿದ್ದಾರೆ. ನಿರ್ಮಾಪಕ ವಿಜಯ್ ಕುಮಾರ್ ಸಿಂಹ್, ಭಾಮಾ ಗಿರೀಶ್, ಬಿ ಆರ್ ಕೇಶವ, ಟಿಪ್ಪುವರ್ಧನ್ ಸೇರಿದಂತೆ ಹಲವು ಸದಸ್ಯರು ದೂರು ಸಲ್ಲಿಸಿದ್ದಾರೆ.

    English summary
    Karnataka Film Chamber member goes against current Committee for not conducting election.
    Wednesday, December 1, 2021, 10:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X