»   » ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ ರಾ ಗೋವಿಂದು ಅವರಿಗೆ ಸಂಕಷ್ಟ.!

ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ ರಾ ಗೋವಿಂದು ಅವರಿಗೆ ಸಂಕಷ್ಟ.!

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ ರಾ ಗೋವಿಂದು ಹಾಗೂ ಪದಾಧಿಕಾರಿಗಳಿಗೆ ಸರ್ಕಾರದ ಅಧೀನ ಕಾಯದರ್ಶಿ ಬಿಕೆ ಪ್ರಕಾಶ್ ಅವರು ನೋಟಿಸ್ ನೀಡಿದ್ದಾರೆ.

ಕಳೆದ 9 ತಿಂಗಳಿನಿಂದ ವಾಣಿಜ್ಯ ಮಂಡಳಿಯಲ್ಲಿ ಕಾರ್ಯಕಾರಿ ಸಮಿತಿಯ ಅನುಸಾರ ಚುನಾವಣೆ ನಡೆಸದೆ, ನಿಯಮಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಹಿಂದೆ ಎರಡು ಬಾರಿ ನೋಟಿಸ್ ನೀಡಿದ್ದರು, ಯಾವುದೇ ಕ್ರಮಕೈಗೊಳ್ಳಲಿಲ್ಲ. ಹೀಗಾಗಿ, ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ನೋಟಿಸ್ ಜಾರಿ ಮಾಡಿದೆ.

Karnataka Film Chamber of Commerce get notice

15 ದಿನದೊಳಗೆ ಈ ನೋಟಿಸ್ ಗೆ ಉತ್ತರ ನೀಡಬೇಕು. ಯಾವುದೇ ಪ್ರತಿಕ್ರಿಯೆ ನೀಡದೆ ಹೋದಲ್ಲಿ ಕರ್ನಾಟಕ ಸಂಘಗಳ ಕಾಯ್ದೆ ಅಡಿ ಆಡಳಿತಾಧಿಕಾರಿಯನ್ನ ನೇಮಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Karnataka Film Chamber of Commerce get notice

ಈ ಹಿಂದೆ ನಿರ್ಮಾಪಕ ಬಾ.ಮಾ ಹರೀಶ್, ಬಸಂತ್ ಕುಮಾರ್ ಪಾಟೀಲ್ ಸೇರಿದಂತೆ ಹಲವರು ಚುನಾವಣೆ ನಡೆಸುವಂತೆ ದೂರು ನೀಡಿದ್ದರು.

English summary
Karnataka Film Chamber of Commerce get notice from Government Secretary office. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕರ್ನಾಟಕ ಸಚಿವಾಲಯದಿಂದ ನೋಟಿಸ್ ಜಾರಿಯಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada