For Quick Alerts
  ALLOW NOTIFICATIONS  
  For Daily Alerts

  ಕಿಚ್ಚ ಸುದೀಪ್ ಮಹತ್ವದ ಕೆಲಸಕ್ಕೆ ಸಚಿವ ಸುಧಾಕರ್ ಮೆಚ್ಚುಗೆ

  |

  ಕನ್ನಡ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಚಾರಿಟಬಲ್ ಟ್ರಸ್ಟ್ ಮೂಲಕ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವ ಘಟನೆ ವರದಿಯಾಗಿವೆ. ಇದೀಗ, ರಾಜ್ಯದ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿರುವ ಸಂಗತಿ ಹೊರಬಿದ್ದಿದೆ.

  Unseen “Nightout” Behind the scene video | Filmibeat Kannada

  ಶಿವಮೊಗ್ಗ ಜಿಲ್ಲೆಯ ನಾಲ್ಕು ಶಾಲೆಗಳನ್ನು ಸುದೀಪ್ ಅವರ ಟ್ರಸ್ಟ್ ದತ್ತು ಪಡೆದುಕೊಂಡಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆವಿಗೆ ಗ್ರಾಮ, ಹಾಳಸಸಿ ಗ್ರಾಮ, ಎಂ.ಎಲ್. ಹಳ್ಳಿ ಹಾಗೂ ಎಸ್. ಎನ್. ನಗರದ ನಾಲ್ಕು ಸರ್ಕಾರಿ ಶಾಲೆಗಳನ್ನು ಕಿಚ್ಚ ಸುದೀಪ್‌ ಚಾರಿಟೇಬಲ್ ಟ್ರಸ್ಟ್ ದತ್ತು ಪಡೆದುಕೊಂಡಿದೆ.

  ನಿನ್ನ ಮುದ್ದಾಡಲು ಯಾವಾಗಲೂ ಸಿದ್ಧ: ಕಿಚ್ಚ ಸುದೀಪ್‌ಗೆ ಹೀಗೆಂದವರು ಯಾರು?ನಿನ್ನ ಮುದ್ದಾಡಲು ಯಾವಾಗಲೂ ಸಿದ್ಧ: ಕಿಚ್ಚ ಸುದೀಪ್‌ಗೆ ಹೀಗೆಂದವರು ಯಾರು?

  ಕಿಚ್ಚ ಸುದೀಪ್ ಅವರ ಈ ಮಹತ್ವದ ಕೆಲಸಕ್ಕೆ ಕರ್ನಾಟಕ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ಮೂಲಕ ಶ್ಲಾಘಿಸಿರುವ ಸಚಿವರು, ಹೃದಯ ಪೂರ್ವಕ ಅಭಿನಂದನೆಗಳು ಸಲ್ಲಿಸಿದ್ದಾರೆ.

  ಸುಧಾಕರ್ ಟ್ವೀಟ್‌ನಲ್ಲಿ ಏನಿದೆ?

  ಸುಧಾಕರ್ ಟ್ವೀಟ್‌ನಲ್ಲಿ ಏನಿದೆ?

  ''ಕೋವಿಡ್ ಸಂಕಷ್ಟ ಕಾಲದಲ್ಲಿ ನಟ ಸುದೀಪ್ ಅವರು ರಾಜ್ಯದ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸುದ್ದಿ ಅತ್ಯಂತ ಶ್ಲಾಘನೀಯ. ಸರ್ಕಾರದ ಜೊತೆ ಕೈ ಜೋಡಿಸಿ ಶಿವಮೊಗ್ಗದ 4 ಸ್ಕೂಲ್ ಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿರುವ ಅವರ ಕಾರ್ಯ ಅತ್ಯಂತ ಸಂತಸದ ವಿಷಯ. ಅವರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು'' ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.

  ಥ್ಯಾಂಕ್ ಯೂ ಸರ್

  ಥ್ಯಾಂಕ್ ಯೂ ಸರ್

  ವೈದ್ಯಕೀಯ ಶಿಕ್ಷಣ ಸಚಿವರ ಅಭಿನಂದನಾ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್ ಟ್ವಿಟ್ಟರ್‌ನಲ್ಲೆ ''ಥ್ಯಾಂಕ್ ಯೂ ಸರ್'' ಎಂದಿದ್ದಾರೆ. ಇನ್ನು ಅಭಿಮಾನಿಗಳು ಸಹ ಸುದೀಪ್ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುಧಾಕರ್ ಅವರ ಟ್ವೀಟ್‌ಗೂ ಸಂತಸ ಹಂಚಿಕೊಂಡಿದ್ದಾರೆ.

  'ಕೋಟಿಗೊಬ್ಬ 3' ಖದರ್ ಲುಕ್: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಖುಷಿಯೋ ಖುಷಿ'ಕೋಟಿಗೊಬ್ಬ 3' ಖದರ್ ಲುಕ್: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಖುಷಿಯೋ ಖುಷಿ

  ಚಿತ್ರದುರ್ಗದಲ್ಲೂ ಶಾಲೆ ದತ್ತು ಪಡೆದ ಸುದೀಪ್ ಟ್ರಸ್ಟ್

  ಚಿತ್ರದುರ್ಗದಲ್ಲೂ ಶಾಲೆ ದತ್ತು ಪಡೆದ ಸುದೀಪ್ ಟ್ರಸ್ಟ್

  ಈ ಹಿಂದೆ ಚಿತ್ರದುರ್ಗ ಜಿಲ್ಲೆಯಲ್ಲಿ ಮೂರು ಸರ್ಕಾರಿ ಶಾಲೆಗಳನ್ನು ಸುದೀಪ್ ಚಾರಿಟಬಲ್ ಟ್ರಸ್ಟ್ ದತ್ತು ಪಡೆದುಕೊಂಡಿತ್ತು. ಚಳ್ಳಕೆರೆ ತಾಲೊಕಿನ ಮೂರು ಹಾಗೂ ಹಿರಿಯೂರು ತಾಲೊಕಿನ ಒಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದರು.

  ಫ್ಯಾಂಟಮ್ ಚಿತ್ರೀಕರಣದಲ್ಲಿ ಸುದೀಪ್!

  ಫ್ಯಾಂಟಮ್ ಚಿತ್ರೀಕರಣದಲ್ಲಿ ಸುದೀಪ್!

  ಲಾಕ್‌ಡೌನ್‌ನಿಂದ ಶೂಟಿಂಗ್ ಸ್ಥಗಿತಗೊಂಡಿತ್ತು. ಅನ್‌ಲಾಕ್‌ ಪ್ರಕ್ರಿಯೆ ಆರಂಭವಾದ ಮೇಲೆ ಫ್ಯಾಂಟಮ್ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಕಿಚ್ಚ ಸುದೀಪ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಅನೂಪ್ ಭಂಡಾರಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಈಗಾಗಲೇ ಎರಡು ಟೀಸರ್ ಭಾರಿ ಸದ್ದು ಮಾಡುತ್ತಿದೆ. ಹೈದರಾಬಾದ್‌ನಲ್ಲಿ ಭಾರಿ ಬಜೆಟ್‌ನಲ್ಲಿ ಸೆಟ್‌ ನಿರ್ಮಿಸಿ ಫ್ಯಾಂಟಮ್ ಸಿನಿಮಾ ಶೂಟಿಂಗ್ ನಡೆಯುತ್ತಿದೆ.

  English summary
  Karnataka minister Dr Sudhakar Praised Sudeep's good work. Sudeep has adopted 4 government schools in the state.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X