twitter
    For Quick Alerts
    ALLOW NOTIFICATIONS  
    For Daily Alerts

    'ಬಾಹುಬಲಿ' ವಿರುದ್ಧ ಕೆರಳಿದ ಕನ್ನಡಿಗರು, ರೀ-ರಿಲೀಸ್ ಗೆ ಬಿಡಲ್ಲ

    By Suneel
    |

    ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಚಿತ್ರ ಬಿಡುಗಡೆ ಆಗಲು ಇನ್ನೂ ಮೂರು ವಾರ ಬಾಕಿ ಇದೆ. 'ಬಾಹುಬಲಿ-2' ನೋಡುವ ಮುನ್ನ 'ಬಾಹುಬಲಿ' ಚಿತ್ರದ ಮೊದಲ ಭಾಗವನ್ನ ಮತ್ತೊಮ್ಮೆ ಎಲ್ಲರೂ ಕಣ್ತುಂಬಿಕೊಳ್ಳಲಿ ಎನ್ನುವ ಕಾರಣಕ್ಕೆ ದೇಶಾದ್ಯಂತ ಸುಮಾರು 800 ಚಿತ್ರಮಂದಿರಗಳಲ್ಲಿ 'ಬಾಹುಬಲಿ-ದಿ ಬಿಗಿನ್ನಿಂಗ್' ನಾಳೆ (ಏಪ್ರಿಲ್ 7) ಬಿಡುಗಡೆ ಆಗಲಿದೆ. ['ಬಾಹುಬಲಿ-2'ಗೆ ಮೊದಲೇ ಮತ್ತೆ ದಾಖಲೆ ಬರೆದ 'ಬಾಹುಬಲಿ- ದಿ ಬಿಗಿನಿಂಗ್']

    'ಬಾಹುಬಲಿ' ಚಿತ್ರದಲ್ಲಿ ಕಟ್ಟಪ್ಪನ ಪಾತ್ರ ನಿರ್ವಹಿಸಿದ್ದ ಸತ್ಯರಾಜ್ ಈ ಹಿಂದೆ ಕಾವೇರಿ ಹೋರಾಟದ ವಿಚಾರವಾಗಿ ಅವಹೇಳನಕಾರಿ ಮಾತುಗಳನ್ನಾಡಿದ್ದರು ಎಂಬ ಕಾರಣಕ್ಕೆ 'ಬಾಹುಬಲಿ' ಚಿತ್ರದ ಮರು ಬಿಡುಗಡೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇದೇ ಹಿನ್ನಲೆಯಲ್ಲಿ ಇಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬಾಣಸವಾಡಿ ಒರಾಯನ್ ಈಸ್ಟ್ ಮಾಲ್ ಗೆ ಮುತ್ತಿಗೆ ಹಾಕಿ, ಒಂದು ಗಂಟೆ ಶೋ ಸ್ಥಗಿತಗೊಳಿಸಿದ್ದಾರೆ. ಜೊತೆಗೆ ಟಿಕೆಟ್ ಹಿಂಪಡೆಯುವಂತೆ ಗಲಾಟೆ ಮಾಡಿದ್ದಾರೆ.

    Karnataka Rakshana Vedike Protest agaist 'Baahubali- The Begining' Re-Release

    ಇದರ ಜೊತೆಗೆ ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿ ಇರುವ ಯು.ಎಫ್.ಓ ಸಂಸ್ಥೆಗೆ ಮುತ್ತಿಗೆ ಹಾಕಿದ ಕರ್ನಾಟಕ ರಕ್ಷಣಾ ವೇದಿಕೆಯ ವಾಟಾಳ್ ನಾಗರಾಜ್, ಪ್ರವೀಣ್ ಶೆಟ್ಟಿ, ಗಿರಿಗೌಡ್ರು ಹಾಗೂ ಶಿವಾನಂದ ಶೆಟ್ಟಿ ಚಿತ್ರದ ಸರ್ವೀಸ್ ಕೊಡದಂತೆ ಎಚ್ಚರಿಕೆ ನೀಡಿದ್ದಾರೆ.[ಬಿಡುಗಡೆಗೂ ಮುನ್ನ ಕೋಟಿ ಕೋಟಿ ಲೂಟಿ ಮಾಡಿದ 'ಬಾಹುಬಲಿ-2']

    Karnataka Rakshana Vedike Protest agaist 'Baahubali- The Begining' Re-Release

    ಇನ್ನು ಕಟ್ಟಪ್ಪನ ಪ್ರತಿಕೃತಿಯನ್ನು ದಹನ ಮಾಡುವುದರ ಮೂಲಕ ಪ್ರತಿಭಟನೆ ನಡೆಸಿದ ಕನ್ನಡಪರ ಕಾರ್ಯಕರ್ತರು, ರಾಜ್ಯದಲ್ಲಿ 'ಬಾಹುಬಲಿ' ಚಿತ್ರ ತೆರೆ ಕಾಣದಂತೆ ನೋಡಿಕೊಳ್ಳಬೇಕು ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ.ಗೋವಿಂದು ಜತೆ ಮಾತುಕತೆ ನಡೆಸಿದ್ದಾರೆ.

    ಇತ್ತ ಕನ್ನಡ ಪರ ಸಂಘಟನೆಗಳು 'ಬಾಹುಬಲಿ-ದಿ ಬಿಗಿನಿಂಗ್' ಚಿತ್ರದ ಮರು ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಸಿನಿಪೊಲಿಸ್: ರಾಯಲ್ ಮೀನಾಕ್ಷಿ ಮಾಲ್, ಪಿವಿಆರ್: ಒರಾಯನ್ ರಾಜಾಜಿನಗರ, ಗೋಪಾಲನ್ ಸಿನಿಮಾಸ್; ಬನ್ನೇರುಘಟ್ಟ ರಸ್ತೆ, ಪಿವಿಆರ್: ಫೋರಮ್ ಬೆಂಗಳೂರು, ಪಿವಿರ್: ಮಾರ್ಕೆಟ್ ಸಿಟಿ ಬೆಂಗಳೂರು ಸೇರಿದಂತೆ ಬೆಂಗಳೂರಿನ 20 ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರ ವೀಕ್ಷಣೆಗೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಅವಕಾಶ ನೀಡಲಾಗಿದೆ.

    English summary
    Karnataka Rakshana Vedike Protest agaist 'Baahubali- The Begining' Re-Release on April 7.
    Thursday, April 6, 2017, 18:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X