For Quick Alerts
  ALLOW NOTIFICATIONS  
  For Daily Alerts

  'ಸಿನಿಮಾ ಕ್ಷೇತ್ರದಲ್ಲಿ ಶೇಕಡಾ 2-3ರಷ್ಟು ಡ್ರಗ್ಸ್ ದಂಧೆ ಇರಬಹುದು'

  |

  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಅನುಮಾನಗಳಿವೆ. ಡ್ರಗ್ಸ್ ಕುರಿತು ಪಾರದರ್ಶಕ ತನಿಖೆ ನಡೆಯುತ್ತಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ಪೊಲೀಸರ ಮೇಲೆ ರಾಜಕಾರಣಿಗಳು ಒತ್ತಡ ಹಾಕುತ್ತಿದ್ದಾರೆ ಎಂದು ಸುದ್ದಿಗಳು ವರದಿಯಾಗಿವೆ.

  ಈ ಎಲ್ಲದರ ನಡುವೇ ಬರಿ ಸಿನಿಮಾ ಕ್ಷೇತ್ರದಲ್ಲಿ ಮಾತ್ರ ಡ್ರಗ್ಸ್ ದಂಧೆ ಇರುವಂತೆ ಬಿಂಬಿತವಾಗುತ್ತಿರುವುದು ನಿಜಕ್ಕೂ ಬೇಸರ ಸಂಗತಿ. ಇದುವರೆಗೂ ನಡೆದ ತನಿಖೆಯ ಆಧಾರದಲ್ಲಿ ಸಂಜನಾ-ರಾಗಿಣಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಇನ್ನು ಕೆಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಡ್ರಗ್ಸ್ ಕೇಸ್‌ನಲ್ಲಿ ಸಿನಿಮಾ ಇಂಡಸ್ಟ್ರಿ ಟಾರ್ಗೆಟ್ ಆಗಿದೆ ಅಷ್ಟೇ. 'ಸಿನಿಮಾ ಕ್ಷೇತ್ರದಲ್ಲಿ ಶೇಕಡಾ 2 ರಿಂದ 3 ರಷ್ಟು ದಂಧೆ ಇರಬಹುದು' ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ. ಮುಂದೆ ಓದಿ...

  ಸಿನಿಮಾ ಕ್ಷೇತ್ರದಲ್ಲಿ ಕೇವಲ 2-3 ರಷ್ಟು ದಂಧೆ

  ಸಿನಿಮಾ ಕ್ಷೇತ್ರದಲ್ಲಿ ಕೇವಲ 2-3 ರಷ್ಟು ದಂಧೆ

  ''ಬೆಂಗಳೂರು ನಗರಕ್ಕಿಂತಲೈ ಮೈಸೂರು, ಕಲಬುರ್ಗಿ, ದಕ್ಷಿಣ ಕನ್ನಡ, ಕೋಲಾರ, ಬೆಳಗಾವಿ ಜಿಲ್ಲೆಗಳಲ್ಲಿ ಡ್ರಗ್ಸ್ ಸಂಬಂಧಿತ ಹೆಚ್ಚು ಪ್ರಕರಣ ದಾಖಲಾಗಿದೆ. ಸಿನಿಮಾ ಕ್ಷೇತ್ರದಲ್ಲಿ ಶೇಕಡಾ 2 ರಿಂದ 3 ರಷ್ಟು ಡ್ರಗ್ಸ್ ದಂಧೆ ಇರಬಹುದು, ಬೇರೆ ಕ್ಷೇತ್ರದಲ್ಲಿ ವ್ಯಾಪಕವಾಗಿದೆ. ಆದ್ರೆ, ಮಾಧ್ಯಮಗಳಲ್ಲಿ ಸಿನಿಮಾ ಕ್ಷೇತ್ರದ ಬಗ್ಗೆ ಹೆಚ್ಚು ಪ್ರಚಾರ ಕೊಡಲಾಗುತ್ತಿದೆ'' ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಾಹಿತಿ ನೀಡಿದ್ದಾರೆ.

  ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಕೇವಲ ಬೆಂಗಳೂರಿಗೆ ಸೀಮಿತವಲ್ಲ: ಡಿಜಿಪಿ

  ಬರಿ ಇಬ್ಬರು ನಟಿಯರು ಮಾತ್ರನಾ?

  ಬರಿ ಇಬ್ಬರು ನಟಿಯರು ಮಾತ್ರನಾ?

  ಬಂಧಿತವಾಗಿರುವ ಡ್ರಗ್ಸ್ ಪೆಡ್ಲರ್‌ಗಳಿಗೆ ಬಹುದೊಡ್ಡ ನೆಟ್‌ವರ್ಕ್ ಇದೆ. ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಇದೆ. ಈ ಪೆಡ್ಲರ್‌ಗಳು ಇಡೀ ಇಂಡಸ್ಟ್ರಿಯಲ್ಲಿ ರಾಗಿಣಿ ಮತ್ತು ಸಂಜನಾಗೆ ಮಾತ್ರ ಡ್ರಗ್ಸ್ ಸಪ್ಲೈ ಮಾಡ್ತಿದ್ರಾ? ಬೇರೆ ಯಾರೂ ಡ್ರಗ್ಸ್ ಸೇವಿಸಿಲ್ವಾ ಅಥವಾ ಡ್ರಗ್ಸ್ ಪಾರ್ಟಿಗಳಲ್ಲಿ ಭಾಗವಹಿಸಿಲ್ವಾ ಎಂಬ ಪ್ರಶ್ನೆಗಳು ಸಹಜವಾಗಿ ಕಾಡುತ್ತಿದೆ.

  ಡ್ರಗ್ಸ್ ಡೀಲರ್‌ಗಳು ಟಾರ್ಗೆಟ್

  ಡ್ರಗ್ಸ್ ಡೀಲರ್‌ಗಳು ಟಾರ್ಗೆಟ್

  ''ಡ್ರಗ್ಸ್ ಪ್ರಕರಣದಲ್ಲಿ ಡ್ರಗ್ಸ್ ಸೇವಿಸಿದವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿಲ್ಲ. ಡ್ರಗ್ಸ್ ಪೂರೈಕೆದಾರರು, ಮದ್ಯವರ್ತಿಗಳು ಹಾಗೂ ಜಾಲವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವ ಕೆಲಸ ನಡೆಯುತ್ತಿದೆ'' ಎಂದು ಪ್ರವೀಣ್ ಸೂದ್ ಸ್ಪಷ್ಟನೆ ನೀಡಿದ್ದಾರೆ.

  ಗಂಡಸ್ತನ ಇದ್ರೆ ಸಾಬೀತು ಮಾಡಿ ತೋರ್ಸಿ ಅವಾಗ ಒಪ್ಕೋತೀನಿ | Kumarswamy | Filmibeat Kannada
  ನಟಿಯರ ಕಥೆ ಏನು?

  ನಟಿಯರ ಕಥೆ ಏನು?

  ಡ್ರಗ್ಸ್ ಕೇಸ್‌ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ರಾಗಿಣಿ ಮತ್ತು ಸಂಜನಾ ವಿರುದ್ಧ ಇಡಿ ಇಲಾಖೆ ಸಹ ಕೇಸ್ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಹಾಗೂ ಅಕ್ರಮ ಹಣದ ವ್ಯವಹಾರದ ಅನುಮಾದ ಹಿನ್ನೆಲೆ ತನಿಖೆ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  English summary
  Karnataka State Police Director General Praveen Sood said that, "There may be 2-3 per cent of drugs mafia in the film industry''.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X