»   » ರಾಜ್ಯ ಪ್ರಶಸ್ತಿ: ಶ್ರೇಷ್ಠ ನಟ ದರ್ಶನ್, ನಟಿ ನಿರ್ಮಲಾ

ರಾಜ್ಯ ಪ್ರಶಸ್ತಿ: ಶ್ರೇಷ್ಠ ನಟ ದರ್ಶನ್, ನಟಿ ನಿರ್ಮಲಾ

Posted By:
Subscribe to Filmibeat Kannada

2011-12ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ (ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ) ಹಾಗೂ ನಿರ್ಮಲಾ (ತಲ್ಲಣ) ಅವರು ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಬಾರಿ ಪ್ರಶಸ್ತಿಗಾಗಿ 59 ಚಿತ್ರಗಳು ಸ್ಪರ್ಧೆಯಲ್ಲಿದ್ದವು. ಹಿರಿಯ ಚಲನಚಿತ್ರ ನಿರ್ಮಾಪಕರಾದ ಕೆ.ಸಿ.ಎನ್.ಚಂದ್ರಶೇಖರ್ ಅವರ ನೇತೃತ್ವದ ಸಮಿತಿಯು 59 ಚಿತ್ರಗಳನ್ನು ವೀಕ್ಷಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸಮಿತಿ ಶಿಫಾರಸು ಮಾಡಿರುವ ಚಲನಚಿತ್ರಗಳನ್ನು ವಾರ್ತಾ ಸಚಿವರಾದ ರೋಷನ್ ಬೇಗ್ ಅವರು ಇಂದು ಪ್ರಕಟಿಸಿದರು.

Challenging Star Darshan

ಈ ಬಾರಿ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದದ್ಯರಾಗಿ ಪ್ರಮೀಳಾ ಜೋಷಾಯ್, ಮುರಳಿಧರ ಹಾಲಪ್ಪ, ಸತ್ಯಮೂರ್ತಿ ಆನಂದೂರು, ಸಾ.ರಾ.ಗೋವಿಂದು, ಯಾಕುಬ್ ಖಾದರ್ ಗುಲ್ವಾಡಿ, ಅಪ್ಪಗೆರೆ ತಿಮ್ಮರಾಜು, ಗೋಪಿ ಪೀಣ್ಯ ಹಾಗೂ ವಾರ್ತಾ ನಿರ್ದೇಶಕರು ಸಮಿತಿಯಲ್ಲಿದ್ದರು.

ಡಾ.ರಾಜ್ ಕುಮಾರ್ ಪ್ರಶಸ್ತಿ:  ಎಂ. ಭಕ್ತವತ್ಸಲ
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ:  ಚಿ. ದತ್ತರಾಜ್
ಡಾ. ವಿಷ್ಣುವರ್ಧನ ಪ್ರಶಸ್ತಿ:  ರಾಜೇಶ್
ಪ್ರಥಮ ಅತ್ಯುತ್ತಮ ಚಿತ್ರ: ತಲ್ಲಣ
ದ್ವಿತೀಯ ಅತ್ಯುತ್ತಮ ಚಿತ್ರ: ಭಾರತ್ ಸ್ಟೋರ್ಸ್
ತೃತೀಯ ಅತ್ಯುತ್ತಮ ಚಿತ್ರ: ಎದೆಗಾರಿಕೆ
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಕಾರಣಿಕ ಶಿಶು
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಅತ್ಯುತ್ತಮ ಮಕ್ಕಳ ಚಿತ್ರ: ಲಿಟ್ಲ್ ಮಾಸ್ಟರ್
ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ: ಅಲೆಮಾರಿ
ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ: ಕೊಂಚಾವರಂ
ಅತ್ಯುತ್ತಮ ನಟ (ಸುಬ್ಬಯ್ಯ ನಾಯ್ಡು ಪ್ರಶಸ್ತಿ):  ದರ್ಶನ್
ಅತ್ಯುತ್ತಮ ನಟಿ:  ನಿರ್ಮಲ ಚೆನ್ನಪ್ಪ
ಅತ್ಯುತ್ತಮ ಪೋಷಕ ನಟ: ಕರಿಸುಬ್ಬು
ಅತ್ಯುತ್ತಮ ಪೋಷಕ ನಟಿ:  ಅರುಣಾ ಬಾಲರಾಜ್
ಅತ್ಯುತ್ತಮ ಕಥೆ ಬರಹಗಾರ: ಡಾ. ಬರಗೂರು ರಾಮಚಂದ್ರಪ್ಪ
ಅತ್ಯುತ್ತಮ ಚಿತ್ರಕಥೆ ಬರಹಗಾರ:  ಕೆ.ವೈ. ನಾರಾಯಣಸ್ವಾಮಿ
ಅತ್ಯುತ್ತಮ ಸಂಭಾಷಣೆಕಾರ:  ಎಂ.ಎಸ್. ರಮೇಶ್
ಅತ್ಯುತ್ತಮ ಛಾಯಾಗ್ರಾಹಕ:  ರಾಕೇಶ್
ಅತ್ಯುತ್ತಮ ಸಂಗೀತ ನಿರ್ದೇಶಕ: ಅರ್ಜುನ್ ಜನ್ಯ
ಅತ್ಯುತ್ತಮ ಸಂಕಲನಕಾರ: ಪಿ.ಅರ್. ಸೌಂದರರಾಜ್
ಅತ್ಯುತ್ತಮ ಬಾಲ ನಟ: ಮಾಸ್ಟರ್ ವಿ. ಅನಿಲ್ ಕುಮಾರ್
ಅತ್ಯುತ್ತಮ ಬಾಲ ನಟಿ: ಬೇಬಿ ಲೇಪನ
ಅತ್ಯುತ್ತಮ ಕಲಾ ನಿರ್ದೇಶಕ: ಭೇಮೇಶಪ್ಪ
ಅತ್ಯುತ್ತಮ ಗೀತ ರಚನೆಕಾರ:  ಬಿ.ಹೆಚ್. ಮಲ್ಲಿಕಾರ್ಜುನ್
ಅತ್ಯುತ್ತಮ ಹಿನ್ನಲೆ ಗಾಯಕ: ವಾಸು ದೀಕ್ಷಿತ್
ಅತ್ಯುತ್ತಮ ಹಿನ್ನಲೆ ಗಾಯಕಿ: ಅನುರಾಧ ಭಟ್
ತೀರ್ಪುಗಾರರ ವಿಶೇಷ ಪ್ರಶಸ್ತಿ:  ರವಿವರ್ಮ

English summary
The state award for 2011-12 headed by KCN Chandrashekhar has been announced by Information Minister Roshan Baig. Challenging Star Darshan is the best actor for Sangolli Rayanna movie and best actress is Nirmala for Tallana. A total of 59 films will be fighting for various category awards. 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada