For Quick Alerts
  ALLOW NOTIFICATIONS  
  For Daily Alerts

  ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಕಾರ್ತಿಕ್ ಜಯರಾಂ

  |

  ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಮೋಡಿ ಮಾಡಿರುವ ನಟ ಕಾರ್ತಿಕ್ ಜಯರಾಂ ಈಗ ತಮಿಳಿನತ್ತ ಹೆಜ್ಜೆಯಿಟ್ಟಿದ್ದಾರೆ. ರಾವಣನ ಪಾತ್ರದ ಮೂಲಕ ಹಿಂದಿ ಪ್ರೇಕ್ಷಕರ ಮನಗೆದ್ದಿದ್ದ ಜೆಕೆ ಮೊದಲ ಸಲ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ಇತ್ತೀಚಿಗಷ್ಟೆ ಜೆಕೆ ಕಾಣಿಸಿಕೊಳ್ಳುತ್ತಿರುವ ಚೊಚ್ಚಲ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಈ ಚಿತ್ರಕ್ಕೆ ಮಾಳಿಗೈ ಎಂದು ಹೆಸರಿಡಲಾಗಿದೆ. ದಿಲ್ ಸತ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿದೆ.

  'ಸೂಪರ್ ಸ್ಟಾರ್' ವಿವಾದದ ಬಗ್ಗೆ 'ಜೆಕೆ' ನೇರ ಮಾತು

  ಪುನರ್ ಜನ್ಮದ ಕಥೆ ಹೊಂದಿರುವ ಈ ಚಿತ್ರದಲ್ಲಿ 200 ವರ್ಷಗಳ ಹಿಂದಿನ ನಡೆಯುತ್ತಂತೆ. ಜೆಕೆ ಈ ಚಿತ್ರದಲ್ಲಿ ಯುವರಾಜನ ಪಾತ್ರದಲ್ಲಿ ನಟಿಸುತ್ತಿದ್ದು, ರಾಜನಾಗಿ ಅಶುತೋಷ್ ರಾಣಾ ನಟಿಸುತ್ತಿದ್ದಾರೆ. ಇನ್ನು ನಟಿ ಆಂಡ್ರಿಯಾ ಯುವರಾಣಿ ಹಾಗೂ ಇನ್ನೊಂದು ಜನ್ಮದಲ್ಲಿ ಪೊಲೀಸ್ ಆಫೀಸರ್ ಆಗಿ ನಟಿಸುತ್ತಿದ್ದಾರೆ.

  ಶೃತಿ ಪ್ರಕಾಶ್ ಕಡೆಯಿಂದ ಜೆಕೆಗೆ ತಲುಪಿದ ಹುಟ್ಟುಹಬ್ಬ ಶುಭಾಶಯ

  ಭವಾನಿ ಎಂಟರ್ಟೈನ್ಮೆಂಟ್ ಹಾಗೂ ಶಾಂತಿ ಟೆಲಿ ಫಿಲ್ಮ್ಸ್ ಅಡಿಯಲ್ಲಿ ಕಮಲ್ ಬೋರಾ ಮತ್ತು ರಾಜೇಶ್ ಕುಮಾರ್ ಈ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದು, ಹಿಂದೊಮ್ಮೆ ಮುಂಬೈನಲ್ಲಿ ಜೆಕೆ ಅವರನ್ನ ನಿರ್ಮಾಪಕರು ನೋಡಿದ್ದರಂತೆ. ಆಗಾಗಲೇ ಜೆಕೆ ರಾವಣನ ಪಾತ್ರದಲ್ಲಿ ನಟಿಸಿದ್ದನ್ನ ನಿರ್ಮಾಪಕರು ಗಮನಿಸಿದ್ದ ಕಾರಣ, ಈ ಸಿನಿಮಾದಲ್ಲಿ ನಟಿಸುವ ಅವಕಾಶ ಮಾಡಿಕೊಟ್ಟಿದ್ದಾರಂತೆ.

  ಬಿಗ್ ಬಾಸ್ ಕಾರ್ಯಕ್ರಮ ಮುಗಿದ ಬಳಿಕ ಆ ಕರಾಳ ರಾತ್ರಿ, ಮೇ1 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಜೆಕೆ ಈಗ ಪುಟ 109 ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮಿಳಿನ ಮಾಳಿಗೈ ಚಿತ್ರದಲ್ಲೂ ತೊಡಗಿಕೊಂಡಿದ್ದಾರೆ. ಈ ಮೂಲಕ ತಮಿಳು ಇಂಡಸ್ಟ್ರಿಗೂ ಕನ್ನಡದ ಕಾರ್ತಿಕ್ ಜಯರಾಂ ಪ್ರವೇಶವಾಗಿದೆ.

  English summary
  Kannada actor Karthik jayaram to make tamil debut in maaligai movie. jk's first tamil movie teaser also released. the movie directed by dil sathya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X