Just In
Don't Miss!
- News
ನೇತಾಜಿ ಸಮಾರಂಭದಲ್ಲಿ ಜೈ ಶ್ರೀರಾಮ್ ಘೋಷಣೆ: ಬಿಜೆಪಿಗೆ RSS ಎಚ್ಚರಿಕೆ
- Lifestyle
ಕಾಂತಿಯುತ ತ್ವಚೆಗಾಗಿ ಬಾಳೆಹಣ್ಣಿನ ವಿವಿಧ ಫೇಸ್ ಮಾಸ್ಕ್ ಗಳು
- Sports
ಟೀಮ್ ಇಂಡಿಯಾ vs ಇಂಗ್ಲೆಂಡ್: ಚೆನ್ನೈಗೆ ಬಂದಿಳಿದ ಜೋ ರೂಟ್ ಪಡೆ
- Finance
900ಕ್ಕೂ ಹೆಚ್ಚು ಪಾಯಿಂಟ್ ಕುಸಿದ ಸೆನ್ಸೆಕ್ಸ್; 13,967 ಪಾಯಿಂಟ್ ನಲ್ಲಿ ನಿಫ್ಟಿ ದಿನಾಂತ್ಯ
- Automobiles
ಅನಾವರಣವಾಯ್ತು 2021ರ ಟ್ರಯಂಫ್ ಸ್ಪೀಡ್ ಟ್ರಿಪಲ್ 1200ಆರ್ಎಸ್ ಬೈಕ್
- Education
KSAT Recruitment 2021: 16 ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒಂದು ಪಾತ್ರ ಕೊಟ್ಟು ಬಿರಾದರ್ ಗೆ ಕಂಡಿಷನ್ ಹಾಕಿದ್ದರಂತೆ ಕಾಶೀನಾಥ್.!
ಆಗಾಗಲೇ ಚೆನ್ನೈ, ಬೆಂಗಳೂರು ಅಂತೆಲ್ಲ ಅಲೆದಾಡಿ ನಿರಾಸೆಯಾಗಿದ್ದ ಬಿರಾದರ್ ಊರಿಗೆ ವಾಪಸ್ ಹೋಗಿಬಿಡೋಣ ಎಂದು ನಿರ್ಧರಿಸಿಬಿಟ್ಟಿದ್ದರು. ಅಷ್ಟರೊಳಗೆ ಶಂಖನಾದ ಅರವಿಂದ್ ಅವರ ನಾಟಕದಲ್ಲಿ ನಟಿಸುವ ಅವಕಾಶ ಪಡೆದುಕೊಂಡರು.
ತುಮಕೂರಿನ ಹೋಟೆಲ್ ವೊಂದರಲ್ಲಿ ನಾಟಕ ಮಾಡಬೇಕಿತ್ತು. ಅಲ್ಲಿಗೆ ಸಾಕಷ್ಟು ಜನ ಬಂದಿದ್ದರು. ವಿಶೇಷ ಅಂದ್ರೆ ನಿರ್ದೇಶಕ, ನಟ ಕಾಶೀನಾಥ್ ಕೂಡ ಅಲ್ಲಿಗೆ ಬಂದಿದ್ದರು. ಬಿರಾದರ್ ಅವರನ್ನ ಕಾಶೀನಾಥ್ ಮೊದಲ ಸಲ ನೋಡಿದ್ದು ಇದೇ ನಾಟಕದಲ್ಲಿ.
ಚೆನ್ನೈನಲ್ಲಿದ್ದ ಅಣ್ಣಾವ್ರ ಮನೆ ಹುಡುಕಿಕೊಂಡು ಹೋಗಿದ್ದ ಬಿರಾದರ್ ಗೆ ರಾಜ್ ಹೇಳಿದ್ದೇನು?
ನಾಟಕ ಮುಗಿತು. ಬಿರಾದರ್ ಅಭಿನಯ ನೋಡಿದ ಕಾಶೀನಾಥ್ ''ಅದ್ಭುತವಾಗಿ ನಟಿಸುತ್ತಿರಾ, ನಾನೊಂದು ಸಿನಿಮಾ ಮಾಡ್ತಿದ್ದೀನಿ, ಅದರಲ್ಲಿ ಒಂದು ಸಣ್ಣ ಪಾತ್ರ ಇದೆ. ಮಾಡ್ತೀರಾ'' ಎಂದರು. ಹುಂ ಎಂದಾಗ ಕಾಶೀನಾಥ್ ಫೋನ್ ನಂಬರ್ ಕೊಟ್ಟು ಕಂಡಿಷನ್ ಹಾಕಿ ಹೋಗಿದ್ದರು. ಆಮೇಲೆ ಏನಾಯ್ತು? ಮುಂದೆ ಓದಿ....

ಕಾಶೀನಾಥ್ ಹಾಕಿದ ಕಂಡಿಷನ್ ಏನು?
ಬಿರಾದರ್ ಗೆ ಫೋನ್ ನಂಬರ್ ಕೊಟ್ಟ ಕಾಶೀನಾಥ್ ಅವರು ''ನನಗೆ ಪ್ರತಿನಿತ್ಯ 7.30 ರಿಂದ 7.35ರ ಒಳಗೆ ಫೋನ್ ಮಾಡಬೇಕು. ಐದು ನಿಮಿಷ ಬೇಗನೂ ಮಾಡಬಾರದು, ಐದು ನಿಮಿಷ ಲೇಟ್ ಆಗಿ ಮಾಡಬಾರದು'' ಎಂದರು. ಆಮೇಲೆ ಬಿರಾದರ್ ಫೋನ್ ಮಾಡಿದರು. ಫೋನ್ ರಿಸೀವ್ ಮಾಡಿದ ಕಾಶೀನಾಥ್ 'ನಾಳೆ ಮಾಡಿ' ಎಂದರು.
ಕಷ್ಟದ ದಿನದಲ್ಲಿ ಉಪೇಂದ್ರ - ಬಿರಾದರ್ ನಡುವೆ ಆಗಿತ್ತು ಈ ಒಪ್ಪಂದ

ಏಂಟನೇ ದಿನ ಬರೋಕೆ ಹೇಳಿದ್ರು
ಸತತ ಏಳು ದಿನ ಫೋನ್ ಮಾಡಿದಾಗಲೂ ನಾಳೆ ಮಾಡಿ ಎಂದು ಹೇಳುತ್ತಿದ್ದ ಕಾಶೀನಾಥ್ ಏಂಟನೇ ದಿನ ''ಬಿರಾದರ್ ನಿಮಗೆ ಇವತ್ತು ಶೂಟಿಂಗ್ ಇದೆ. ಲಾಲ್ ಬಾಗ್ ಹತ್ರ ಇರೋ ಪೆಟ್ರೋಲ್ ಬಂಕ್ ಬಳಿ ಇರೋ ಮನೆಗೆ ಬನ್ನಿ. 12 ಗಂಟೆಗೆ ಬನ್ನಿ 2 ಗಂಟೆಗೆ ಕಳುಹಿಸ್ತೀನಿ'' ಎಂದರು. ನಂತರ ಬಿರಾದರ್ ಕೂಡ ಹೋದರು.

ಉಪೇಂದ್ರ ಸಹಾಯಕರಾಗಿ ಕೆಲಸ ಮಾಡ್ತಿದ್ರು
ಅಜಗಜಾಂತರ ಸಿನಿಮಾ ವೇಳೆ ಉಪೇಂದ್ರ ಅವರು ಕಾಶೀನಾಥ್ ಅವರ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡ್ತಿದ್ರು. ಡಬ್ಬಾ ರಿಪೇರಿ, ಕೊಡೆ ರಿಪೇರಿ ಅಂತ ಒಂದು ದೃಶ್ಯವಿದೆ. ಅದೇ ದೃಶ್ಯ ಇದು. ಇದಕ್ಕೂ ಮುಂಚೆ ಶಂಖನಾದ ಚಿತ್ರದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದ ಬಿರಾದರ್ ಗೆ ಅಜಗಜಾಂತರ ಸೀನ್ ಖ್ಯಾತಿ ತಂದುಕೊಡ್ತು.

ಕಾಶೀನಾಥ್ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ
ಅಜಗಜಾಂತರ ಸಿನಿಮಾ ಮೂಲಕ ಕಾಶೀನಾಥ್ ಅವರಿಗೆ ಪರಿಚಯವಾದ ಬಿರಾದರ್, ಮುಂದಿನ ದಿನಗಳಲ್ಲಿ ಕಾಶೀನಾಥ್ ಬಹುತೇಕ ಚಿತ್ರಗಳಲ್ಲಿ ನಟಿಸಿದರು. ಉಪೇಂದ್ರ ಅವರ ಚಿತ್ರಗಳಲ್ಲೂ ಬಿರಾದರ್ ನಟಿಸಿದರು. ಸುಮಾರು 350ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.