For Quick Alerts
  ALLOW NOTIFICATIONS  
  For Daily Alerts

  ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ 'ಕೆಸಿಸಿ' ಕ್ರಿಕೆಟ್ ಟೂರ್ನಿ

  By Bharath Kumar
  |

  ಏಪ್ರಿಲ್ ತಿಂಗಳ ಆರಂಭದಲ್ಲಿ ಕನ್ನಡ ಸಿನಿತಾರೆಯರಲ್ಲೆ ಸೇರಿ ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿ ನಡೆಸಿದ್ದರು. ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಶಿವರಾಜ್ ಕುಮಾರ್, ಯಶ್, ರಕ್ಷಿತ್ ಶೆಟ್ಟಿ, ಪುನೀತ್ ರಾಜ್ ಸೇರಿ ಮೈದಾನಕ್ಕಿಳಿದು ಆಟವಾಡಿದ್ದರು.

  ಸಿಸಿಎಲ್ ಮಾದರಿಯಲ್ಲಿ ಆಯೋಜನೆ ಮಾಡಿದ್ದ ಈ ಕ್ರಿಕೆಟ್ ಟೂರ್ನಿಯನ್ನ ಅದೇಷ್ಟೋ ಅಭಿಮಾನಿ ನೋಡಲು ಸಾಧ್ಯವಾಗಿರಲಿಲ್ಲ. ಇದೀಗ, ಸ್ಯಾಂಡಲ್ ವುಡ ತಾರೆಯರು ಆಡಿದ ಕ್ರಿಕೆಟ್ ಪಂದ್ಯಗಳನ್ನ ಟಿವಿಯಲ್ಲಿ ನೋಡುವ ಅವಕಾಶ ಸಿಕ್ಕಿದೆ.

  ಸುದೀಪ್-ಯಶ್-ಶಿವಣ್ಣ ಕ್ರಿಕೆಟ್ ಆಡಿದ್ರು: ನೋಡೋದಕ್ಕೆ ಬಂದ್ದಿದವರು ಯಾರು ಗೊತ್ತಾ.?ಸುದೀಪ್-ಯಶ್-ಶಿವಣ್ಣ ಕ್ರಿಕೆಟ್ ಆಡಿದ್ರು: ನೋಡೋದಕ್ಕೆ ಬಂದ್ದಿದವರು ಯಾರು ಗೊತ್ತಾ.?

  ಇದೇ ತಿಂಗಳ 12 ಮತ್ತು 13 ರಂದು ನಿಮ್ಮ ನೆಚ್ಚಿನ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ಮತ್ತೆ 19 ಮತ್ತು 20ನೇ ತಾರೀಖು ಮರು ಪ್ರಸಾರವಾಗಲಿದೆ. ಸಮಯದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

  ಸ್ಯಾಂಡಲ್ ವುಡ್ ನಲ್ಲಿ 'T-10' ಕ್ರಿಕೆಟ್ ಟೂರ್ನಿಸ್ಯಾಂಡಲ್ ವುಡ್ ನಲ್ಲಿ 'T-10' ಕ್ರಿಕೆಟ್ ಟೂರ್ನಿ

  ಒಟ್ಟು ಆರು ತಂಡಗಳು ಈ ಟೂರ್ನಿ ಯಲ್ಲಿ ಭಾಗಿಯಾಗಿದ್ದು, ಸುದೀಪ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ನಿರ್ದೇಶಕ ನಂದಕಿಶೋರ್, ಇಂದ್ರಜೀತ್ ಲಂಕೇಶ್, ನಿರ್ಮಾಪಕ ಶ್ರೀಕಾಂತ್ ಸೇರಿದಂತೆ ಅನೇಕರು ಕಲಾವಿದರು ಭಾಗವಹಿಸಿದ್ದರು.

  ಇದು 'ಟಿ 10' ಪಂದ್ಯವಾಗಿದ್ದು, ಪ್ರತಿ ತಂಡಕ್ಕೆ 10 ಓವರ್ ಪಂದ್ಯವಾಳಿ ಆಗಿತ್ತು. ಈ ಟೂರ್ನಿಯನ್ನ ಹೆಬ್ಬುಲಿ ನಿರ್ದೇಶಕ ಕೃಷ್ಣ ಸಾರಥ್ಯದ ತಂಡ ಗೆದ್ದುಕೊಂಡಿತ್ತು. ಈ ತಂಡದಲ್ಲಿ ಶಿವರಾಜ್ ಕುಮಾರ್ ಸ್ಟಾರ್ ಆಟಗಾರರಾಗಿದ್ದರು. ಕ್ರಿಕೆಟ್ ಪಂದ್ಯದ ಜೊತೆಗೆ ವಿಶೇಷ ಕಾರ್ಯಕ್ರಮ ಕೂಡ ಪ್ರಸಾರವಾಗಲಿದೆ.

  English summary
  Much awaited First ever tournament of Celebrities conducted for Good cause Kannada Chalanachitra Cup will be telecasted on your favourite Zee Kannada on 12th and 13th of this month and Re Telecasted on 19th and 20th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X