Don't Miss!
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Sports
IND vs NZ: ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ದಿಢೀರ್ ಭೇಟಿ ನೀಡಿದ ಎಂಎಸ್ ಧೋನಿ; ವಿಡಿಯೋ
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಣ್ಣಾವ್ರ ಮನೆ ಹುಡುಕಿಕೊಂಡು ಬಂದ ಖ್ಯಾತ ನಟಿ ಕೀರ್ತಿ ಸುರೇಶ್
ಡಾ.ರಾಜ್‌ಕುಮಾರ್ ಲೆಕ್ಕವಿಲ್ಲದಷ್ಟು ನಟ-ನಟಿಯರಿಗೆ ಸ್ಪೂರ್ತಿ ತುಂಬಿದ್ದಾರೆ. ತುಂಬುತ್ತಿದ್ದಾರೆ ಸಹ. ಕನ್ನಡಿಗರು ಮಾತ್ರವಲ್ಲ ಹೊರ ರಾಜ್ಯದ ನಟ-ನಟಿಯರಿಗೂ ರಾಜ್‌ಕುಮಾರ್ ಎಂದರೆ ಆರಾಧ್ಯ ಭಾವ.
Recommended Video
ಹೊರ ರಾಜ್ಯದ ಹಿರಿಯ ನಟ-ನಟಿಯರು ಬೆಂಗಳೂರಿಗೆ ಆಗಮಿಸಿದಾಗ ರಾಜ್‌ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡುವುದು ಸಂಪ್ರದಾಯದಂತಾಗಿದ್ದ ಕಾಲವೊಂದಿತ್ತು.
ಈಗಲೂ ಹೊರ ರಾಜ್ಯದ ನಟ-ನಟಿಯರಿಗೆ ರಾಜ್‌ಕುಮಾರ್ ಅವರ ಕುಟುಂಬ ಬಹಳ ಆಪ್ತ. ಹೊಸ ತಲೆಮಾರಿನ ಅನ್ಯಭಾಷೆ ನಾಯಕ-ನಾಯಕಿಯರಿಗೆ ರಾಜ್‌ಕುಮಾರ್ ಎಂಬ ದಂತಕತೆ ಬಗ್ಗೆ ಮಾಹಿತಿ ಇರುವುದಿಲ್ಲ ಎಂದುಕೊಳ್ಳುವಂತಿಲ್ಲ, ಇದಕ್ಕೆ ಸಾಕ್ಷಿ ನಟಿ ಕೀರ್ತಿ ಸುರೇಶ್.

ರಾಜ್‌ಕುಮಾರ್ ಕುಟುಂಬ ಭೇಟಿ ಮಾಡಿದ ಕೀರ್ತಿ ಸುರೇಶ್
ಖ್ಯಾತ ನಟಿ, ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ಅವರು ಇತ್ತೀಚೆಗೆ ರಾಜ್‌ಕುಮಾರ್ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಈ ಭೇಟಿಗೆ ಸಿನಿಮಾ ಉದ್ದೇಶವೇನೂ ಇಲ್ಲ, ಕೇವಲ ಗೌರವ ಪೂರ್ವಕ ಭೇಟಿ ಇದಾಗಿದೆ.

ರಾಘವೇಂದ್ರ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ
ಕೀರ್ತಿ ಸುರೇಶ್ ಅವರು ರಾಘವೇಂದ್ರ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪತ್ನಿ ಮಂಗಳಾ ರಾಘವೇಂದ್ರ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಕೀರ್ತಿ ಸುರೇಶ್-ರಾಜ್‌ಕುಮಾರ್ ಕುಟುಂಬಕ್ಕೂ ಇದೆ ನಂಟು
ಕೀರ್ತಿ ಸುರೇಶ್ ಕುಟುಂಬ ಹಾಗೂ ರಾಜ್‌ಕುಮಾರ್ ಕುಟುಂಬಕ್ಕೂ ಹಳೆಯ ನಂಟು. ರಾಜ್‌ಕುಮಾರ್ ಅವರ ಸಮಯದ ಗೊಂಬೆ ಸಿನಿಮಾದಲ್ಲಿ ಕೀರ್ತಿ ಸುರೇಶ್ ತಾಯಿ ಮೇನಕಾ ಸುರೇಶ್ ರಾಜ್‌ಕುಮಾರ್ ಅವರ ತಂಗಿಯ ಪಾತ್ರ ನಿರ್ವಹಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್
ರಾಘವೇಂದ್ರ ರಾಜ್‌ಕುಮಾರ್-ಮಂಗಳಾ ರಾಘವೇಂದ್ರ ಅವರೊಟ್ಟಿಗೆ ಕೀರ್ತಿ ಸುರೇಶ್ ನಿಂತಿರುವ ಚಿತ್ರವನ್ನು ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.