Don't Miss!
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- News
Breaking; ಸರ್ಕಾರಿ ನೌಕರರ ವರ್ಗಾವಣೆ ಹೊಸ ಸುತ್ತೋಲೆ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರೇಮ್ ಹೊಸ ಚಿತ್ರದಲ್ಲಿ ಇಬ್ಬರು ನಟಿಯರು : ಕನ್ನಡಕ್ಕೆ ಸಾಯಿ ಪಲ್ಲವಿ, ಕೀರ್ತಿ ಸುರೇಶ್
ನಿರ್ದೇಶಕ ಜೋಗಿ ಪ್ರೇಮ್ ಇದೀಗ ಮತ್ತೊಂದು ಮೆಗಾ ಸಿನಿಮಾ ಮಾಡುತ್ತಿದ್ದಾರೆ. ನಿನ್ನೆ ಅವರ ಹೊಸ ಸಿನಿಮಾ ಲಾಂಚ್ ಆಗಿದೆ. ಆ ಚಿತ್ರದ ದೊಡ್ಡ ಸುದ್ದಿ ಇದೀಗ ಹೊರಬಂದಿದೆ.
ಪ್ರೇಮ್ ಬೇರೆ ಭಾಷೆಯ ದೊಡ್ಡ ನಟಿಯರನ್ನು ಕನ್ನಡಕ್ಕೆ ಕರೆ ತರುವಲ್ಲಿ ಫೇಮಸ್. ಈಗಾಗಲೇ, ಮಲ್ಲಿಕಾ ಶರಾವತ್, ಸನ್ನಿ ಲಿಯೋನ್, ಆಮಿ ಜಾಕ್ಸನ್ ಹೀಗೆ ಸಾಕಷ್ಟು ಚಂದದ ನಟಿಯರನ್ನು ಚಂದನವನಕ್ಕೆ ತಂದ ಖ್ಯಾತಿ ಅವರಿಗೆ ಇದೆ. ಇದರ ನಂತರ ಅದೇ ರೀತಿ ಇದೀಗ ಮತ್ತಿಬ್ಬರು ನಾಯಕಿಯನ್ನು ಪ್ರೇಮ್ ಕನ್ನಡ ಚಿತ್ರರಂಗಕ್ಕೆ ಕರೆ ತರುತ್ತಿದ್ದಾರೆ.
ರಕ್ಷಿತಾ
ಹುಟ್ಟುಹಬ್ಬಕ್ಕೆ
ವಿಶ್
ಮಾಡಿದ
ಕ್ರೇಜಿ
ಫ್ಯಾನ್
ಅಂದಹಾಗೆ, ರಕ್ಷಿತಾ ಅವರ ಸಹೋದರನ ಈ ಹೊಸ ಚಿತ್ರದ ನಾಯಕಿನಾಗಿದ್ದು, ಆ ಚಿತ್ರದ ಹೆಚ್ಚಿನ ಮಾಹಿತಿ ಮುಂದಿದೆ ಓದಿ...

ಕನ್ನಡಕ್ಕೆ ಕಾಲಿಟ್ಟ ರೌಡಿ ಬೇಬಿ
'ಪ್ರೇಮಂ' ಸಿನಿಮಾದಲ್ಲಿ ನೋಡಿದಾಲೇ ಸಾಯಿ ಪಲ್ಲವಿ ಮೇಲೆ ಎಲ್ಲರಿಗೂ ಪ್ರೇಮವಾಗಿತ್ತು. ಇನ್ನು ಈ ಹುಡುಗಿ ರೌಡಿ ಬೇಬಿ ಅಂತ ಕುಣಿದ ಮೇಲಂತು ಆಕೆಗೆ ಇದ್ದ ಕ್ರೇಜ್ ಡಬಲ್ ಆಯ್ತು. ಕನ್ನಡದಲ್ಲಿಯೂ ಸಾಯಿ ಪಲ್ಲವಿಗೆ ಬಹಳ ದೊಡ್ಡ ಅಭಿಮಾನಿ ಬಳಗ ಇದೆ. ಈ ಕಾರಣ ಪ್ರೇಮ್ ಸಾಯಿ ಪಲ್ಲವಿಗೆ ಈ ಬಾರಿ ಮಣೆ ಹಾಕಿದ್ದಾರೆ.

'ಮಹಾನಟಿ'ಗೆ ಮಾರು ಹೋದ ಪ್ರೇಮ್
ಕೀರ್ತಿ ಸುರೇಶ್ 'ಮಹಾನಟಿ' ಸಿನಿಮಾದ ಮೂಲಕ ಇಡೀ ಸೌತ್ ಇಂಡಿಯಾದಲ್ಲಿ ಹೆಸರು ಮಾಡಿದ್ದರು. ಈ ಚಿತ್ರದಲ್ಲಿ ಕೀರ್ತಿಯ ಅದ್ಭುತ ನಟನೆ ಇಷ್ಟ ಪಟ್ಟಿರುವ ಪ್ರೇಮ್ ತಮ್ಮ ಹೊಸ ಸಿನಿಮಾಗೆ ನಾಯಕಿಯಾಗಿ ಮಾಡಿದ್ದಾರೆ. ಈ ಹಿಂದೆಯೇ ಕೀರ್ತಿ ಸುರೇಶ್ ಬೇರೆ ಬೇರೆ ಚಿತ್ರಗಳ ಮೂಲಕ ಕನ್ನಡಕ್ಕೆ ಬರ್ತಾರೆ ಎಂಬ ಸುದ್ದಿ ಇದ್ದರೂ ಯಾವುದು ನಿಜ ಆಗಿರಲಿಲ್ಲ.
ರಕ್ಷಿತಾ
ಪ್ರೇಮ್
ಗೆ
ಕಿಚ್ಚ
ಸುದೀಪ್
ಶುಭಾಶಯ

ಮತ್ತೊಂದು ಸಾಹಸಕ್ಕೆ ಮುಂದಾದ 'ಡಿಕೆ' ಬಾಸ್
ಪ್ರೇಮ್ ದೊಡ್ಡ ಕನಸು ಕಾಣುತ್ತಾರೆ. ತಮ್ಮ ಕನಸಿನ ರೀತಿ ದೊಡ್ಡ ಸಿನಿಮಾ ಮಾಡುತ್ತಾರೆ. ಇದೀಗ ಈ ಚಿತ್ರದಲ್ಲಿಯೂ ಅಂತಹ ಸಾಹಸಕ್ಕೆ ಕೈ ಹಾಕಿದ್ದಾರೆ. ಒಂದೇ ಸಿನಿಮಾದ ಮೂಲಕ ಇಬ್ಬರು ದೊಡ್ಡ ಸೌತ್ ನಟಿಯರನ್ನು ಕನ್ನಡದಲ್ಲಿ ಲಾಂಚ್ ಮಾಡುತ್ತಿದ್ದಾರೆ. ಮೊದಲ ಚಿತ್ರದಲ್ಲಿಯೇ ರಕ್ಷಿತಾ ಸಹೋದರನಿಗೆ ಇಬ್ಬರು ನಾಯಕಿಯರು ಸಿಕ್ಕಿದ್ದಾರೆ.

ನೀವೂ ಏಪ್ರಿಲ್ ಫೂಲ್ ಆಗ್ಬಿಟ್ರಿ
ಇವತ್ತು ಏಪ್ರಿಲ್ 1 ಅಂದರೆ ಮೂರ್ಕರ ದಿನಾಚರಣೆ. ಈ ದಿನದ ವಿಶೇಷವಾಗಿ ತಮಾಷೆಗೆ ನಿಮ್ಮನ್ನು ಫೂಲ್ ಮಾಡಿದ್ವಿ. ಪ್ರೇಮ್ ಹೊಸ ಸಿನಿಮಾ ನಿನ್ನೆ ಲಾಂಚ್ ಆಗಿರೋದು ನಿಜ ಆದರೆ, ಆ ಸಿನಿಮಾಗೆ ಕೀರ್ತಿ ಸುರೇಶ್ ಹಾಗೂ ಸಾಯಿ ಪಲ್ಲವಿ ನಾಯಕಿ ಆಗ್ತಿರೋದು ಸುಳ್ಳು. ಇದೆಲ್ಲ ಜಸ್ಟ್ ಫಾರ್ ಫನ್ ಅಷ್ಟೇ.