twitter
    For Quick Alerts
    ALLOW NOTIFICATIONS  
    For Daily Alerts

    Breaking: 'ಕಾಂತಾರ'ತಂಡಕ್ಕೆ ಸಂಕಷ್ಟ: 'ವರಹರೂಪಂ' ಹಾಡಿಗೆ ತಡೆ ನೀಡಿದ ಕೇರಳ ಕೋರ್ಟ್!

    |

    ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ' ದೇಶದ ಉದ್ದಗಲಕ್ಕೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. 'ಕಾಂತಾರ' ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ಥಿಯೇಟರ್‌ನಲ್ಲಿ ಸಿಗುತ್ತಿರುವ ಹೊಸ ಅನುಭವಕ್ಕೆ ಸಿನಿಪ್ರಿಯರು ಮಂತ್ರ ಮುಗ್ಧರಾಗಿದ್ದಾರೆ.

    ಒಂದ್ಕಡೆ 'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಅದೇ ಇನ್ನೊಂದ್ಕಡೆ ವಿವಾದದ ಸುಳಿಗೂ ಸಿಲುಕಿದೆ. ಕಳೆದ ಕೆಲವು ದಿನಗಳಿಂದ 'ಕಾಂತಾರ' ಸಿನಿಮಾದ ವರಹ ರೂಪಂ ಹಾಡನ್ನು ಮಲಯಾಳಂ ನವರಸಂ ಹಾಡಿನಿಂದ ಕದ್ದಿದ್ದಾರೆಂದು ಆರೋಪ ಮಾಡಲಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಮಲಯಾಳಂ 'ನವರಸಂ' ಹಾಡನ್ನು ಕಂಪೋಸ್ ಮಾಡಿದ್ದ ಥೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಕೂಡ ಆಕ್ರೋಶ ಹೊರ ಹಾಕಿತ್ತು.

    'ಕಾಂತಾರ' ನಿರ್ಮಾಣ ಸಂಸ್ಥೆಯ ವಿರುದ್ಧ ಥೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಕಾನೂನು ಹೋರಾಟ ಮಾಡುವುದಾಗಿ ಕಿಡಿಕಾರಿತ್ತು. ಅದರಂತೆ ಈ ಮ್ಯೂಸಿಕ್ ಬ್ಯಾಂಡ್ ನ್ಯಾಯಾಲಯ ಮೆಟ್ಟಿಲೇರಿತ್ತು. ಸದ್ಯ ಕೇರಳದ ಕೋಳಿಕೊಡೆಯ ಸೆಷನ್ ಕೋರ್ಟ್ ವರಹ ರೂಪಂ ಹಾಡನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ನೀಡಿದೆ.

    'ಕಾಂತಾರ' ಗೆ 'ವರಹ ರೂಪಂ' ತಲೆನೋವು

    'ಕಾಂತಾರ' ಗೆ 'ವರಹ ರೂಪಂ' ತಲೆನೋವು

    ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ 'ಕಾಂತಾರ' ಸಿನಿಮಾ ದೇಶಾದ್ಯಂತ ಮೆಚ್ಚುಗೆ ಗಳಿಸಿದೆ. ರಿಷಬ್ ಶೆಟ್ಟಿ ನಟನೆ, ನಿರ್ದೇಶನದಿಂದ ಹಿಡಿದು, ಸಂಗೀತ, ಹಿನ್ನೆಲೆ ಸಂಗೀತಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದ್ದಂತೆ 'ವರಹರೂಪಂ ಸಾಂಗ್' ವಿವಾದಕ್ಕೆ ಸಿಲುಕಿತ್ತು. ಇದು ಮಲಯಾಳಂ ಮ್ಯೂಸಿಕ್ ಅಲ್ಬಂ 'ನವರಸಂ' ನಿಂದ ಕಾಪಿ ಮಾಡಲಾಗಿದೆ ಎಂದು ಹೇಳಲಾಗಿತ್ತು. ಅದ್ಯಾವಾಗ 'ಕಾಂತಾರ' ಮಲಯಾಳಂಗೆ ಡಬ್ ಆಗಿ ರಿಲೀಸ್ ಆಯ್ತೋ, ಆಗ ಒರಿಜಿನಲ್ ಮ್ಯೂಸಿಕ್ ಹಕ್ಕುಗಳನ್ನು ಹೊಂದಿರುವ ಥೈಕ್ಕುಡಂ ಬ್ರಿಡ್ಜ್ ಮ್ಯೂಸಿಕ್ ಬ್ಯಾಂಡ್ ಕೂಡ ನಕಲು ಮಾಡಿರುವ ಆರೋಪ ಮಾಡಿ, ಕೇಸ್ ದಾಖಲಿಸುವುದಾಗಿ ಹೇಳಿತ್ತು. ಈಗ ಕೇರಳ ಕೋರ್ಟ್ ವರಹ ರೂಪಂ ಸಾಂಗ್‌ನಲ್ಲಿ ಪ್ಲೇ ಮಾಡದಂತೆ ತಡೆಯಾಜ್ಞೆ ನೀಡಿದೆ.

    ಕೇರಳ ಕೋರ್ಟ್ ಹೇಳಿದ್ದೇನು?

    ಕೇರಳ ಕೋರ್ಟ್ ಹೇಳಿದ್ದೇನು?

    ಥೈಕ್ಕುಡಂ ಬ್ರಿಡ್ಜ್ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಕೇರಳದ ಕೋಳಿಕೊಡೆ ನ್ಯಾಯಾಲಯ ನೀಡಿದ ನೊಟೀಸ್‌ನ ಸಾರಾಂಶವನ್ನು ಪೋಸ್ಟ್ ಮಾಡಿದೆ. ಈ ಪೋಸ್ಟ್ ಪ್ರಕಾರ, " ಕೋಳಿಕೊಡೆಯ ಪ್ರಿನ್ಸಿಪಲ್ ಡಿಸ್ಟ್ರಿಕ್ಟ್ ಹಾಗೂ ಸೆಷನ್ ಕೋರ್ಟ್ ನಿರ್ಮಾಪಕ, ನಿರ್ದೇಶಕ, ಸಂಗೀತ ನಿರ್ದೇಶಕ, ಅಮೆಜಾನ್, ಯೂಟ್ಯೂಬ್, ಸ್ಪೊಟಿಪೈ, ವೈಂಕ್ ಮ್ಯೂಸಿಕ್, ಜಿಯೋಸಾವನ್ ಸೇರಿದಂತೆ ಉಳಿದೆಡೆ 'ಕಾಂತಾರ' ಸಿನಿಮಾದ ವರಹರೂಪಂ ಹಾಡನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ನೀಡಿದೆ. ಥೈಕ್ಕುಡಂ ಬ್ರಿಡ್ಜ್ ಪರವಾಗಿ ಸುಪ್ರೀಂ ಕೋರ್ಟ್‌ನ ವಕೀಲರಾದ ಸತೀಶ್ ಮೂರ್ತಿ ಎಂಬುವವರು ತಡೆಯಾಜ್ಞೆಯನ್ನು ಕೋರಿ ಅರ್ಜಿ ಸಲ್ಲಿಸಿದ್ದರು." ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದೆ.

    ಸಿನಿಮಾದಲ್ಲಿ ಈ ಹಾಡಿನ ಇರುತ್ತಾ?

    ಸಿನಿಮಾದಲ್ಲಿ ಈ ಹಾಡಿನ ಇರುತ್ತಾ?

    ನ್ಯಾಯಾಲಯದ ಆದೇಶದಂತೆ 'ಕಾಂತಾರ' ಸಿನಿಮಾದಿಂದ 'ವರಹರೂಪಂ' ಸಾಂಗ್ ಅನ್ನು ತೆಗೆಯಬೇಕಾದ ಅನಿವಾರ್ಯತೆ ಎದುರಾಗಬಹುದು. ಆದರೆ, ಚಿತ್ರತಂಡ ಹಾಗೂ ಅವರ ವಕೀಲರ ಮುಂದಿನ ಹೆಜ್ಜೆ ಮೇಲೆ ಹಾಡಿನ ಭವಿಷ್ಯ ನಿಂತಿದೆ. ಆದರೆ, ಸದ್ಯಕ್ಕೆ ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಅಥವಾ ಚಿತ್ರತಂಡ ಪ್ರತಿಕ್ರಿಯೆ ನೀಡಿಲ್ಲ.

    ಗಲ್ಲಾಪೆಟ್ಟಿಗೆಯಲ್ಲಿ 'ಕಾಂತಾರ' ಸದ್ದು ನಿಂತಿಲ್ಲ

    ಗಲ್ಲಾಪೆಟ್ಟಿಗೆಯಲ್ಲಿ 'ಕಾಂತಾರ' ಸದ್ದು ನಿಂತಿಲ್ಲ

    'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದನ್ನು ಇನ್ನು ನಿಲ್ಲಿಸಿಲ್ಲ. 15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಅಲ್ಲದೆ ಬಿಡುಗಡೆಯಾಗಿ ಒಂದು ತಿಂಗಳಾಗಿದ್ದರೂ, ಇನ್ನೂ ಥಿಯೇಟರ್‌ಗಳಲ್ಲಿ ಜನರ ನುಗ್ಗುತ್ತಲೇ ಇದ್ದಾರೆ. ಈ ಮಧ್ಯೆ 'ವರಹರೂಪಂ' ಹಾಡು ವಿವಾದಕ್ಕೆ ಸಿಕ್ಕಿಕೊಂಡಿದ್ದು, ಚಿತ್ರತಂಡಕ್ಕೆ ತಲೆ ನೋವಾಗಿ ಪರಿಣಮಿಸಿದೆ.

    English summary
    Keral Kozhikode Court Issued Notice to Stop Playing Kantara Varaha Roopam Song, Know More.
    Friday, October 28, 2022, 20:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X