For Quick Alerts
  ALLOW NOTIFICATIONS  
  For Daily Alerts

  ಭುಗಿಲೆದ್ದ 'ರಿಯಾಲಿಟಿ ಶೋ' ವಿವಾದ: 'ಸ್ಟಾರ್'ಗಳ ವಿರುದ್ಧ ಸಾ.ರಾ.ಗೋವಿಂದು ಗರಂ

  By ಭರತ್ ಕುಮಾರ್
  |

  ''ಕನ್ನಡ ಮನರಂಜನಾ ವಾಹಿನಿಗಳು ಕನ್ನಡ ಚಿತ್ರಗಳ ಪ್ರಸಾರ ಹಕ್ಕುಗಳನ್ನು ಕೊಂಡುಕೊಳ್ಳುತ್ತಿಲ್ಲ. ಹೀಗಿದ್ದರೂ, ಅದೇ ವಾಹಿನಿಗಳ ರಿಯಾಲಿಟಿ ಶೋಗಳಲ್ಲಿ ಕನ್ನಡ ಸ್ಟಾರ್ ಗಳು ಭಾಗವಹಿಸುತ್ತಾರೆ. ಪ್ರೊಡ್ಯೂಸರ್ ಗಳು ಲಾಸ್ ನಲ್ಲಿದ್ದಾರೆ. ನಿರ್ಮಾಪಕರ ಕಷ್ಟಕ್ಕೆ ಕಲಾವಿದರು ಸ್ಪಂದಿಸುತ್ತಿಲ್ಲ'' ಎಂಬ ಕೂಗು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯಲ್ಲಿ ಕಳೆದ ವರ್ಷದಿಂದ ಕೇಳಿ ಬರುತ್ತಿದೆ.

  ಇದೇ ವಿಚಾರವಾಗಿ ನಿರ್ಮಾಪಕರು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರೂ, 'ನ್ಯಾಯ' ಸಿಕ್ಕಿರಲಿಲ್ಲ. ಬೂದಿ ಮುಚ್ಚಿದ ಕೆಂಡದಂತೆ ಇದ್ದ ಈ ವಿವಾದದ ಕಿಡಿ ಈಗ ಮತ್ತೆ ಹೊತ್ತಿಕೊಂಡಿದೆ. [ಈ ರೀಲ್ 'ಹೀರೋ'ಗಳೇ ನಿರ್ಮಾಪಕರಿಗೆ 'ವಿಲನ್'ಗಳು.!]

  ಪರಿಣಾಮ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿನ್ನೆ (ಅಕ್ಟೋಬರ್ 5) ತುರ್ತು ಸಭೆ ಕರೆಯಲಾಗಿತ್ತು. ಅಧ್ಯಕ್ಷ ಸಾ.ರಾ.ಗೋವಿಂದು, ಭಾ.ಮಾ.ಹರೀಶ್, ಭಾ.ಮಾ.ಗಿರೀಶ್, ಥಾಮಸ್ ಡಿಸೋಜಾ, ಎನ್.ಎಂ.ಸುರೇಶ್ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡು, ''ರಿಯಾಲಿಟಿ ಶೋ ಗಳಿಗೆ ಸ್ಟಾರ್ ಗಳು ಹೋಗಬಾರದು'' ಅಂತ ಆಗ್ರಹಿಸಿದರು. ನಂತರ ಪ್ರೆಸ್ ಮೀಟ್ ನಡೆಸಿದ ಸಾ.ರಾ.ಗೋವಿಂದು, ಏನೆಲ್ಲಾ ಹೇಳಿದರು ಅಂತ ಅವರ ಮಾತುಗಳಲ್ಲೇ ಓದಿರಿ, ಓವರ್ ಟು ಸಾ.ರಾ.ಗೋವಿಂದು...

  ರಿಯಾಲಿಟಿ ಶೋಗಳ ವಿರುಧ್ಧ ಸಾ.ರಾ.ಗೋವಿಂದು ಗರಂ

  ರಿಯಾಲಿಟಿ ಶೋಗಳ ವಿರುಧ್ಧ ಸಾ.ರಾ.ಗೋವಿಂದು ಗರಂ

  ''ಇವತ್ತು ಕನ್ನಡದ ಬಹುತೇಕ ಎಲ್ಲಾ ಚಾನೆಲ್‌ಗಳಲ್ಲೂ ರಿಯಾಲಿಟಿ ಶೋಗಳು ನಡೆಯುತ್ತಿದ್ದು, ಅದರಲ್ಲಿ ಕನ್ನಡದ ಜನಪ್ರಿಯ ಕಲಾವಿದರು ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮಗಳು ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವುದರಿಂದ ಮನೆಯಲ್ಲೇ ಪುಕ್ಕಟ್ಟೆ ಮನರಂಜನೆ ಸಿಗುತ್ತಿದೆ. ಆದ್ದರಿಂದ ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಒಮ್ಮೆ ಪ್ರಸಾರ ಮಾಡಿದ್ದು ಸಾಲದೆಂಬಂತೆ, ಮತ್ತೆ ಮತ್ತೆ ದಿನವೆಲ್ಲಾ ಮರು ಪ್ರಸಾರ ಮಾಡಲಾಗುತ್ತಿದೆ'' - ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

  ಸುದ್ದಿ ವಾಹಿನಿಗಳು ಕೂಡ ಪ್ರಸಾರ ಮಾಡುತ್ತೆ

  ಸುದ್ದಿ ವಾಹಿನಿಗಳು ಕೂಡ ಪ್ರಸಾರ ಮಾಡುತ್ತೆ

  ''ಖಾಸಗಿ ವಾಹಿನಿಗಳ ಜೊತೆ ಸುದ್ದಿ ವಾಹಿನಿಗಳು ಕೂಡ ರಿಯಾಲಿಟಿ ಶೋಗಳನ್ನ ಮರು ಪ್ರಸಾರ ಮಾಡುತ್ತಿವೆ. ಇದರಿಂದ ಚಿತ್ರರಂಗಕ್ಕೆ ಸಾಕಷ್ಟು ಸಮಸ್ಯೆ ಎದುರಾಗುತ್ತಿದೆ'' - ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ [ನಟ ರಮೇಶ್ ಅರವಿಂದ್ ವಿರುದ್ಧ ತಿರುಗಿಬಿದ್ದ ಕೃಷ್ಣೇಗೌಡ]

  ಇಡೀ ಚಿತ್ರರಂಗದ ನಿರ್ಧಾರ

  ಇಡೀ ಚಿತ್ರರಂಗದ ನಿರ್ಧಾರ

  ''ಇದು ನನ್ನೊಬ್ಬನ ನಿರ್ಧಾರವಲ್ಲ. ಇಡೀ ಚಿತ್ರರಂಗದ ನಿರ್ಧಾರ. ಇದರಿಂದ ನಿರ್ಮಾಪಕರಿಗೆ ತೊಂದರೆಯಾಗುತ್ತಿದೆ. ಅವರನ್ನ ಉಳಿಸುವ ಜವಾಬ್ದಾರಿ ಕಲಾವಿದರದ್ದು'' - ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

  ಚಿತ್ರಗಳ ಹಕ್ಕು ಪಡೆಯಿರಿ

  ಚಿತ್ರಗಳ ಹಕ್ಕು ಪಡೆಯಿರಿ

  ''ಎಲ್ಲಾ ಚಿತ್ರಗಳು ಒಂದೇ ರೀತಿ ನೋಡುವುದಕ್ಕಾಗುವುದಿಲ್ಲ. ಆಯಾ ಚಿತ್ರಗಳ ಯೋಗ್ಯತೆಗೆ ತಕ್ಕಂತೆ ವಾಹಿನಿಗಳು ದುಡ್ಡು ಕೊಟ್ಟು ತೆಗೆದುಕೊಂಡರೆ ಇದರಿಂದ ನಿರ್ಮಾಪಕರಿಗೂ ಅನುಕೂಲವಾಗುತ್ತದೆ. ಈ ತರಹ ಪ್ರತಿ ಚಾನಲ್‌ ವರ್ಷಕ್ಕೆ 25 ರಿಂದ 30 ಚಿತ್ರಗಳ ಹಕ್ಕುಗಳನ್ನ ಖರೀದಿಸಿದರೆ ನಿರ್ಮಾಪಕರಿಗೆ ಒಳ್ಳೆಯದಾಗುತ್ತದೆ'' - ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ [ನಿರ್ಮಾಪಕರ ಸರಣಿ ಉಪವಾಸ ಸತ್ಯಾಗ್ರಹ]

  ಹೊಸ ಸಮನ್ವಯ ಸಮಿತಿಗೆ ನಿರ್ಧಾರ

  ಹೊಸ ಸಮನ್ವಯ ಸಮಿತಿಗೆ ನಿರ್ಧಾರ

  ''ನಿರ್ಮಾಪಕರೆಲ್ಲಾ ಸೇರಿ ಪ್ರದರ್ಶಕರಿಗೆ ಶೇಕಡವಾರುವಿನಂತೆ ಪ್ರದರ್ಶನ ಮಾಡಲು ಮನವಿ ಮಾಡಿದ್ದಾರೆ. ಹಾಗೂ ಮೊದಲು ಸೆನ್ಸಾರ್ ಆದ ಚಿತ್ರ ಮೊದಲು ಬಿಡುಗಡೆ ಆಗಬೇಕು. ಈ ಬಗ್ಗೆ ಹೊಸ ಸಮನ್ವಯ ಸಮಿತಿ ಜಾರಿ ಮಾಡಲು ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ'' - ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

  ನಿರ್ಮಾಪಕರ ಹೋರಾಟ

  ನಿರ್ಮಾಪಕರ ಹೋರಾಟ

  ''ಕಳೆದ ಬಾರಿ ನಿರಂತರ ಹೋರಾಟ ಮಾಡಿದ್ದ ನಿರ್ಮಾಪಕರು ಮತ್ತೆ ಹೋರಾಟ ಮಾಡಲು ನಿರ್ಧರಿಸಿದ್ದಾರೆ. ಒಂದು ಪಕ್ಷ ಕಲಾವಿದರು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವುದನ್ನ ನಿಲ್ಲಿಸದೇ ಇದ್ದರೆ, ಅಕ್ಟೋಬರ್ 8 ರಂದು 'ಬಿಗ್ ಬಾಸ್' ರಿಯಾಲಿಟಿ ಶೋ ನಡೆಯುವ ಜಾಗಕ್ಕೆ ಹೋಗಿ ಹೋರಾಟ ನಡೆಸಲು ನಿರ್ಮಾಪಕರು ತೀರ್ಮಾನಿಸಿದ್ದಾರೆ'' - ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

  ನಮ್ಮನ್ನ ಸಾಯಿಸಿ ಭಾಗವಹಿಸಿ

  ನಮ್ಮನ್ನ ಸಾಯಿಸಿ ಭಾಗವಹಿಸಿ

  ''ಮೊದಲ ಹಂತವಾಗಿ ಅಕ್ಟೋಬರ್‌ 8 ರಂದು 'ಬಿಗ್ ಬಾಸ್' ರಿಯಾಲಿಟಿ ಶೋ ನಡೆಯುವ ಜಾಗದಲ್ಲಿ ಮಾನವ ಸರಪಳಿ ಮಾಡಿ ಪ್ರತಿಭಟನೆ ನಡೆಸಲಾಗುವುದು. ಕಲಾವಿದರು ನಮ್ಮನ್ನ ಬೇಕಾದ್ರೆ ಸಾಯಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲಿ'' - ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

  English summary
  KFCC President Sa.Ra.Govindu along with Kannada Film Producers have decided to protest against Kannada Stars who are taking part in Reality Shows.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X