»   » RJ Rapid ರಶ್ಮಿ ಶೋಗೆ ಯಾರೂ ಹೋಗಬೇಡಿ, ಎಲ್ಲರೂ ಬಹಿಷ್ಕಾರ ಹಾಕಿ.!

RJ Rapid ರಶ್ಮಿ ಶೋಗೆ ಯಾರೂ ಹೋಗಬೇಡಿ, ಎಲ್ಲರೂ ಬಹಿಷ್ಕಾರ ಹಾಕಿ.!

Posted By:
Subscribe to Filmibeat Kannada

ಪಟ ಪಟ ಅಂತ ಅರಳು ಹುರಿದ ಹಾಗೆ ಮಾತನಾಡುವ ''RJ Rapid ರಶ್ಮಿ ನಿರೂಪಣೆ ಮಾಡುವ ಕಾರ್ಯಕ್ರಮಕ್ಕೆ ಯಾರೂ ಹೋಗಬಾರದು... ಎಲ್ಲರೂ ಬಹಿಷ್ಕಾರ ಹಾಕಿ..!'' - ಹೀಗಂತ ಎಲ್ಲ ನಿರ್ಮಾಪಕರಿಗೂ ಕರೆ ನೀಡಿದವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು.

ಕಳೆದ ಎರಡು ದಿನಗಳಿಂದ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ನಟ ನಿರೂಪ್ ಭಂಡಾರಿ ವಿವಾದಕ್ಕೆ ಗ್ರಾಸವಾಗಿರುವುದು Rapid ರಶ್ಮಿ ಕೇಳಿದ ಒಂದೇ ಒಂದು ಪ್ರಶ್ನೆಯಿಂದ.!

ಫಿಲ್ಟರ್ ಇಲ್ಲದೆ Rapid ರಶ್ಮಿ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಶ್ಮಿ ಕೇಳಿದ ''ರಾಜರಥ ಸಿನಿಮಾ ನೋಡದವರು ....'' ಎಂಬ ಬಿಟ್ಟ ಸ್ಥಳ ತುಂಬಿರಿ ಪ್ರಶ್ನೆಗೆ ಉತ್ತರಿಸಲು ಹೋಗಿ 'ಕಚಡಾ, ಲೋಫರ್ ನನ್ ಮಕ್ಳು' ಅಂತ್ಹೇಳಿ ಭಂಡಾರಿ ಸಹೋದರರು ವಿವಾದವನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ.

ಭಂಡಾರಿ ಬ್ರದರ್ಸ್ ಬಾಯಿಂದ ಇಂತಹ ಮಾತು ಬಂದಿದ್ದು ತಪ್ಪು ನಿಜ. ಹಾಗೇ, ಇಂತಹ ವಿವಾದಾತ್ಮಕ ಪ್ರಶ್ನೆ ಕೇಳಿ ದೊಡ್ಡ ರಾದ್ಧಾಂತಕ್ಕೆ ನಾಂದಿ ಹಾಡುವಲ್ಲಿ ರಶ್ಮಿ ಪಾತ್ರವೂ ಇದೆ. ಹೀಗಾಗಿ, ನಿನ್ನೆ ಸಂಜೆ ನಡೆಸಿದ ಪ್ರತಿಕಾಗೋಷ್ಟಿಯಲ್ಲಿ Rapid ರಶ್ಮಿ ವಿರುದ್ಧ ಸಾ.ರಾ.ಗೋವಿಂದು ಗುಡುಗಿದರು. ಮುಂದೆ ಓದಿರಿ....

ಇದು ವಿಪರ್ಯಾಸ ಎಂದ ಸಾ.ರಾ.ಗೋವಿಂದು

''ಅನೂಪ್ ಹಾಗೂ ನಿರೂಪ್ ಭಂಡಾರಿ ರಶ್ಮಿ ಕಾರ್ಯಕ್ರಮದಲ್ಲಿ ಮಾತನಾಡಿರುವುದು ಸಿನಿಮಾ ಬಿಡುಗಡೆ ಆಗುವುದಕ್ಕೂ ಮುನ್ನ. ಚಿತ್ರಮಂದಿರಕ್ಕೆ ಸಿನಿಮಾ ಬರುವುದಕ್ಕೂ ಮುಂಚೆಯೇ ಮಾತನಾಡಿದ್ದಾರೆ. ವಿಡಿಯೋ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ವಿಪರ್ಯಾಸ'' ಎಂದರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು

ರಶ್ಮಿ ಕೇಳುವ ಪ್ರಶ್ನೆಗಳಿಗೆ ಕೋಪ ಬರುತ್ತೆ

''Rapid ರಶ್ಮಿ ಕೇಳುವಂತಹ ಪ್ರಶ್ನೆಗಳನ್ನು ನೋಡಿದಾಗ ನಮಗೆ ಕೋಪ ಬರುತ್ತದೆ... ಅವರು ನಮ್ಮನ್ನ ಉದ್ರೇಕಗೊಳಿಸುತ್ತಾರೆ... ನೀವು ಸಾಫ್ಟ್, ನೀವು ಹೀಗೆ ಮಾತನಾಡಬಾರದು ಅಂತ ಹೇಳಿ ಮಾತನಾಡಿಸುತ್ತಾರೆ'' ಎಂದು ರಶ್ಮಿ ವಿರುದ್ದ ಸಾ.ರಾ.ಗೋವಿಂದು ಹರಿಹಾಯ್ದರು.

ಭಂಡಾರಿ ಬ್ರದರ್ಸ್ ವಿವಾದ : 'ರಾಜರಥ' ಚಿತ್ರ ನೋಡದಿದ್ದವರು 'ಕಚಡ ಲೋಫರ್ ನನ್ ಮಕ್ಳು'

ಪ್ರೊವೋಕ್ ಮಾಡ್ತಾರೆ ರಶ್ಮಿ!

''ರಶ್ಮಿ ಅನ್ನೋ ಹುಡುಗಿ ಪ್ರೊವೋಕ್ ಮಾಡ್ತಾರೆ. ಇವರು ಉತ್ತರ ಕೊಟ್ಟ ಮೇಲೆ ರಶ್ಮಿ ಚಪ್ಪಾಳೆ ತಟ್ಟುತ್ತಾರೆ. ಅನೂಪ್ ಹಾಗೂ ನಿರೂಪ್ ಗೂ ಮುನ್ನ ರಶ್ಮಿ ಮೇಲೆ ಕ್ರಮ ಕೈಗೊಳ್ಳಬೇಕು'' ಎಂದು ಪತ್ರಿಕಾಗೋಷ್ಟಿಯಲ್ಲಿ ಸಾ.ರಾ.ಗೋವಿಂದು ಗುಡುಗಿದರು.

ಅನೂಪ್-ನಿರೂಪ್ ವಿರುದ್ಧ ಕನ್ನಡಿಗರ ಆಕ್ರೋಶ: ಕಲಕಿದ ನೆಟ್ಟಿಗರ ಹೃದಯ ಸಮುದ್ರ!

ರಶ್ಮಿ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿ

''ರಶ್ಮಿ ಮಾಡುವಂತಹ ಯಾವುದೇ ಕಾರ್ಯಕ್ರಮಕ್ಕೆ ಯಾರೂ ಹೋಗಬಾರದು, ಎಲ್ಲರೂ ಬಹಿಷ್ಕಾರ ಹಾಕಬೇಕು ಅಂತ ಎಲ್ಲ ನಿರ್ಮಾಪಕರಿಗೆ ನಾನು ಕರೆ ಕೊಡುತ್ತೇನೆ. ಯಾಕಂದ್ರೆ, ನಾಳೆ ನಿಮಗೂ ಕೂಡ ಇದೇ ಪರಿಸ್ಥಿತಿ ಬರುತ್ತದೆ'' - ಸಾ.ರಾ.ಗೋವಿಂದು

ಪ್ರಶ್ನೆ ಕೇಳಿದ್ದು ತಪ್ಪಾ ಅಥವಾ ಉತ್ತರ ಕೊಟ್ಟಿದ್ದು ತಪ್ಪಾ.?

ಚಿತ್ರರಂಗದ ಮಾನ ಮರ್ಯಾದೆ ತೆಗೆಯುತ್ತಿರುವ ರಶ್ಮಿ

''ತಪ್ಪು ತಪ್ಪು ಕನ್ನಡ ಮಾತನಾಡುತ್ತಾರೆ. ಕೆಟ್ಟ ಪದ ಬಳಕೆ ಮಾಡ್ತಾರೆ. ಕನ್ನಡ ಚಿತ್ರರಂಗದ ಮಾನ ಮರ್ಯಾದೆ ತೆಗೆಯಲು ಪ್ರಯತ್ನ ಮಾಡುತ್ತಿದ್ದಾರೆ. ಅವರೇನು ಬಿಟ್ಟಿಯಾಗಿ ಕಾರ್ಯಕ್ರಮ ಮಾಡುವುದಿಲ್ಲ. ಅದಕ್ಕೂ ದುಡ್ಡು ಕೊಡಬೇಕು'' - ಸಾ.ರಾ.ಗೋವಿಂದು

ಫಿಲ್ಮ್ ಚೇಂಬರ್ ಸುದ್ದಿಗೋಷ್ಠಿಯಲ್ಲಿ ಕನ್ನಡಿಗರಿಗೆ ತಲೆ ಬಾಗಿದ ಭಂಡಾರಿ ಬ್ರದರ್ಸ್

ಆಕೆಯ ಸಂಸ್ಕೃತಿ ಏನು.?

''ಕಚಡ ನನ್ನ ಮಗ ಅಂತ ಹೇಳಿದಾಗ ಆಕೆ ನಗುತ್ತಾರೆ. ಕನ್ನಡದ ಹೆಣ್ಣುಮಗಳಾಗಿ ಆಕೆಯ ಸಂಸ್ಕೃತಿ ಏನು.?'' - ಸಾ.ರಾ.ಗೋವಿಂದು.

'ರಾಜರಥ' ವಿವಾದದ ಬಗ್ಗೆ ಬಾಯ್ಬಿಟ್ಟ RJ ರಶ್ಮಿ: ಫೇಸ್ ಬುಕ್ ನಲ್ಲಿ ಕೊಟ್ರು ಟ್ವಿಸ್ಟ್.!

English summary
KFCC President Sa Ra Govindu lashes out against RJ Rapid Rashmi for asking controversial question to Anup Bhandari and Nirup Bhandari

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X