»   » ಕನ್ನಡ ಚಿತ್ರರಂಗದ ವಿರುದ್ಧ ಕೆರಳಿದ ಕನ್ನಡ ಗ್ರಾಹಕರ ಕೂಟ: ಟ್ವಿಟ್ಟರ್ ನಲ್ಲಿ ಕನ್ನಡ ದ್ರೋಹ ಅಭಿಯಾನ

ಕನ್ನಡ ಚಿತ್ರರಂಗದ ವಿರುದ್ಧ ಕೆರಳಿದ ಕನ್ನಡ ಗ್ರಾಹಕರ ಕೂಟ: ಟ್ವಿಟ್ಟರ್ ನಲ್ಲಿ ಕನ್ನಡ ದ್ರೋಹ ಅಭಿಯಾನ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ವಿರುದ್ಧ ಕನ್ನಡ ಗ್ರಾಹಕರ ಕೂಟ (ನೋಂ) ಹಾಗೂ ಬನವಾಸಿ ಬಳಗ ಕೆರಳಿದೆ. ಕನ್ನಡ ಚಿತ್ರರಂಗಕ್ಕೆ 'ಡಬ್ಬಿಂಗ್' ಮಾರಕ ಎಂದು ಹೇಳಿ, ಪರಭಾಷೆ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಿರುವ ಕನ್ನಡ ಚಿತ್ರರಂಗದವರ ವಿರುದ್ಧ ಕನ್ನಡ ಗ್ರಾಹಕರ ಕೂಟ ಮತ್ತು ಬನವಾಸಿ ಬಳಗ ಗುಟುರು ಹಾಕಿದೆ.

'ಡಬ್ಬಿಂಗ್' ತಡೆದು ಪರಭಾಷೆಯ ಸಿನಿಮಾಗಳಿಗೆ ಮಣೆ ಹಾಕುತ್ತಿರುವ ಕನ್ನಡ ಚಿತ್ರರಂಗದ ವಿರುದ್ಧ ಕನ್ನಡ ಗ್ರಾಹಕರ ಕೂಟ ಮತ್ತು ಬನವಾಸಿ ಬಳಗ ಇಂದು ಸಂಜೆ ಟ್ವಿಟ್ಟರ್ ನಲ್ಲಿ #KFIKannadaDroha ಅಡಿಯಲ್ಲಿ ಅಭಿಯಾನ ಆರಂಭಿಸಲಿದೆ.

ಡಬ್ಬಿಂಗ್ ಬೇಡ ಅಂತಾರೆ, ಪರಭಾಷೆ ಸಿನಿಮಾ ಬೆಂಬಲಿಸ್ತಾರೆ: ಇದು ಕನ್ನಡ ದ್ರೋಹ ಅಲ್ಲವೇ?

ಇಂದು ಕರ್ನಾಟಕದ ಹಲವು ಕಡೆ ತೆಲುಗಿನ 'ಸ್ಪೈಡರ್' ಚಿತ್ರ ಬೇರೆ ಬಿಡುಗಡೆ ಆಗಿದೆ. ಇದು ಕನ್ನಡ ಗ್ರಾಹಕರ ಕೂಟವನ್ನ ಮತ್ತಷ್ಟು ಕೆರಳಿಸಿದೆ. ಮುಂದೆ ಓದಿರಿ...

ಪರಭಾಷೆಯ ಚಿತ್ರಗಳಿಗೆ ಕನ್ನಡ ಚಿತ್ರರಂಗದ ಪ್ರೋತ್ಸಾಹ

ತೆಲುಗು ನಟ ಮಹೇಶ್ ಬಾಬು ನಟಿಸಿರುವ 'ಸ್ಪೈಡರ್' ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಕನ್ನಡ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕಾಣಿಸಿಕೊಂಡಿದ್ದರು. ತೆಲುಗಿನ 'ಸ್ಪೈಡರ್' ಚಿತ್ರಕ್ಕೆ ಯಶಸ್ಸು ಸಿಗಲಿ ಎಂದಿರುವ ರಾಕ್ ಲೈನ್ ವೆಂಕಟೇಶ್ ಹಿಂದೊಮ್ಮೆ ಡಬ್ಬಿಂಗ್ ವಿರುದ್ಧ ಮಾತನಾಡಿದ್ದರು. ಡಬ್ಬಿಂಗ್ ವಿರುದ್ಧ ಪ್ರತಿಭಟನೆ ಮಾಡಿದ ರಾಕ್ ಲೈನ್ ವೆಂಕಟೇಶ್ ಈಗ ಪರಭಾಷೆಯ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಬನವಾಸಿ ಬಳಗ ಹಾಗೂ ಕನ್ನಡ ಗ್ರಾಹಕರ ಕೂಟದವರ ಕೆಂಗಣ್ಣಿಗೆ ಕಾರಣವಾಗಿದೆ.

ಸಹಕಾರ ಇಲ್ಲದೇ ಹೇಗೆ ಸಾಧ್ಯ.?

''ಕನ್ನಡ ನಾಡಿನ ಉದ್ದಗಲಕ್ಕೂ ತೆಲುಗು ಚಿತ್ರಗಳು ಬಿಡುಗಡೆ ಆಗುತ್ತಿವೆ. ನಮ್ಮ ಕನ್ನಡ ಚಿತ್ರರಂಗದ ಸಹಕಾರ ಇಲ್ಲದೇ ಹೀಗಾಗಲು ಸಾಧ್ಯವೇ.?'' ಕನ್ನಡಿಗರು ಟ್ವಿಟ್ಟರ್ ನಲ್ಲಿ ಪ್ರಶ್ನಿಸುತ್ತಿದ್ದಾರೆ.

ನಂದೆ ಹವಾ ಅಂದ್ರೆ ಸಾಲದು.!

ಸಿನಿಮಾ ನಟರು ತೆರೆಮೇಲೆ ಮಾತ್ರ 'ನಂದೆ ಹವಾ' ಅಂದ್ರೆ ಸಾಲದು, ಪರಭಾಷೆಯ ಸಿನಿಮಾಗಳ ಹಾವಳಿ ವಿರುದ್ಧ ಹೋರಾಡಬೇಕು ಎಂಬರ್ಥದಲ್ಲಿ ಚಂದ್ರಶೇಖರ್ ಎಂಬುವರು ಮಾಡಿರುವ ಟ್ವೀಟ್ ನೋಡಿ....

ಬೆಂಕಿ ಹಚ್ಚೋರು ಯಾರೋ.?

''ಪರಭಾಷೆಯ ಚಿತ್ರ 300 ಥಿಯೇಟರ್ ನಲ್ಲಿ ರಿಲೀಸ್ ಆಗಲಿ, ಆದರೆ ಚಿತ್ರ ಡಬ್ ಆಗಿ ಕನ್ನಡದಲ್ಲೇ ಬರೋ ಹಾಗಿಲ್ಲ. ಬೆಂಕಿ ಹಚ್ಚೋ ಮಂದಿ ಎಲ್ಲಿದ್ದಾರೋ.!'' - ಸಂಜಯ್ ಹೊಯ್ಸಳ

ನಟರು-ನಿರ್ದೇಶಕರು ವಿಫಲ.?!

ಕರ್ನಾಟಕದ ಹೊರಗೆ ಕನ್ನಡ ಚಿತ್ರಗಳ ಮಾರ್ಕೆಟ್ ಸೃಷ್ಟಿಸಲು ನಟರು ಹಾಗೂ ನಿರ್ದೇಶಕರು ವಿಫಲರಾಗಿದ್ದಾರೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ.

ಕನ್ನಡದಲ್ಲೇ ಜನ ನೋಡುತ್ತಿದ್ದರು

''250 ರಲ್ಲಿ 100 ಥಿಯೇಟರ್ ಗಳಲ್ಲಾದರೂ ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಿದ್ದರೆ ಕನ್ನಡನಾದ್ರೂ ಉಳಿತಿತ್ತು. ಜನರು ಕನ್ನಡದಲ್ಲೇ ನೋಡುತ್ತಿದ್ದರು'' ಎಂಬ ವಾದ ಕನ್ನಡ ಗ್ರಾಹಕರ ಕೂಟದ್ದು.

ನೀವೇನಂತೀರಾ.?

ಪರಭಾಷೆಯ ಸಿನಿಮಾಗಳ ಹಾವಳಿ ವಿರುದ್ಧ ಹಾಗೂ ಡಬ್ಬಿಂಗ್ ಪರ ಕನ್ನಡ ಗ್ರಾಹಕರ ಕೂಟ ಮತ್ತು ಬನವಾಸಿ ಬಳಗ ದನಿ ಎತ್ತಿದೆ. ಇದಕ್ಕೆ ನೀವೇನಂತೀರಾ.? ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ...

English summary
#KFIKannadaDroha twitter campaign by Banavasi Balaga today from 6PM.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada