For Quick Alerts
  ALLOW NOTIFICATIONS  
  For Daily Alerts

  ಹಳೇ ವೃತ್ತಿಗೆ ಮತ್ತೆ ಮರಳಿದ 'ಕೆಜಿಎಫ್' ಕ್ಯಾಮರಾ ಮ್ಯಾನ್ ಭುವನ್ ಗೌಡ

  |

  ಇದೇ ಕೆಲವು ವರ್ಷಗಳ ಹಿಂದೆ ಭುವನ್ ಗೌಡ ಹೆಸರಿನ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಯಾರೂ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಕೆಜಿಎಫ್ ಸಿನಿಮಾ ರಿಲೀಸ್ ಆಗಿದ್ದೇ ಆಗಿದ್ದು ಕರ್ನಾಟಕ ಅಷ್ಟೇ ಅಲ್ಲ. ಇಡೀ ದೇಶವೇ ಭುವನ್ ಗೌಡ ಛಾಯಾಗ್ರಾಹಣದ ಬಗ್ಗೆ ಮಾತಾಡುತ್ತಿದೆ. ಅದರಲ್ಲೂ 'ಕೆಜಿಎಫ್ 2' ಸಿನಿಮಾ ರಿಲೀಸ್ ಆದ ಮೇಲಂತೂ ಭುವನ್ ಗೌಡ ಛಾಯಾಗ್ರಹಣದ ಬಗ್ಗೆ ವಿಶೇಷ ಕುತೂಹಲ ಹೆಚ್ಚಾಗಿದೆ. ಮುಂಬರುವ ಸಿನಿಮಾಗಾಗಿ ಕಾದು ಕೂರುವಂತೆ ಮಾಡಿದೆ.

  ಪ್ರಶಾಂತ್ ನೀಲ್ ಹಾಗೂ ಭುವನ್ ಗೌಡ ಇಬ್ಬರ ಕಾಂಬಿನೇಷನ್ ವರ್ಕ್‌ಔಟ್ ಆಗಿದೆ. ಮೂರು ಸಿನಿಮಾಗಳು ಹಿಟ್ ಲಿಸ್ಟ್ ಸೇರಿವೆ. 'ಉಗ್ರಂ' ಸಿನಿಮಾದಿಂದ ಆರಂಭ ಆಗಿದ್ದ ಇವರಿಬ್ಬರ ಜರ್ನಿ ಇಂದು 'ಸಲಾರ್'ವರೆಗೂ ಬಂದು ನಿಂತಿದೆ. ಇವರಿಬ್ಬರೂ ಒಟ್ಟಿಗೆ ಸೇರಿದರೆ ವಿಜ್ಯುವಲ್ ಟ್ರೀಟ್ ಸಿಗುವುದು ಗ್ಯಾರಂಟಿ ಎಂದೇ ನಂಬಿಕೆ. ಈಗ ದೇಶದ ಅತ್ಯುತ್ತಮ ಛಾಯಾಗ್ರಾಹಕರಲ್ಲಿ ಭುವನ್ ಗೌಡ ಕೂಡ ನಿಲ್ಲುತ್ತಾರೆ.

  Exclusive: ನರ್ತನ್-ಯಶ್ ಸಿನಿಮಾ ಪೋಸ್ಟ್‌ಪೋನ್: ರಾಕಿ ಭಾಯ್ 19ನೇ ಸಿನಿಮಾದ ಕಥೆಯೇನು?Exclusive: ನರ್ತನ್-ಯಶ್ ಸಿನಿಮಾ ಪೋಸ್ಟ್‌ಪೋನ್: ರಾಕಿ ಭಾಯ್ 19ನೇ ಸಿನಿಮಾದ ಕಥೆಯೇನು?

  ಭುವನ್ ಗೌಡ ಸಿನಿಮಾಗಳಿಗೆ ಛಾಯಾಗ್ರಾಹಕರಾಗುವ ಮುನ್ನ ಸಿನಿಮಾ ತಾರೆಯರಿಗೆ ಫೋಟೊಶೂಟ್ ಮಾಡುತ್ತಿದ್ದರು. ರೂಪದರ್ಶಿಯರಿಗೂ ಅದ್ಭುತ ಫೋಟೊಗಳನ್ನು ಸೆರೆ ಹಿಡಿಯುತ್ತಿದ್ದರು. ಸಿನಿಮಾ ಎಂಟ್ರಿ ಕೊಡಬೇಕು ಎನ್ನುವಂತಹವರು. ಸಿನಿಮಾಗೆ ಎಂಟ್ರಿ ಕೊಟ್ಟವರಿಗೆ ಭುವನ್ ಗೌಡ ಫೋಟೊಶೂಟ್ ಮಾಡುತ್ತಿದ್ದರು. ಈಗ ಮತ್ತೆ ಅದೇ ವೃತ್ತಿಗೆ ಬಹಳ ದಿನಗಳ ಬಳಿಕ ಮರಳಿದ್ದಾರೆ. ಅವರೇ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೊಸ ಫೋಟೊಶೂಟ್ ಮಾಡಿದ್ದನ್ನು ಹಂಚಿಕೊಂಡಿದ್ದಾರೆ.

  ಭುವನ್ ಕಣ್ಣಲ್ಲಿ ಸೆರೆಯಾದ ಶಿಲ್ಪ ಶೆಟ್ಟಿ

  ಭುವನ್ ಕಣ್ಣಲ್ಲಿ ಸೆರೆಯಾದ ಶಿಲ್ಪ ಶೆಟ್ಟಿ

  ಹೌದು, ಬ್ಯುಸಿ ಶೆಡ್ಯೂಲ್‌ನಲ್ಲೂ ಭುವನ್ ಗೌಡ ಪೋರ್ಟ್‌ಫೊಲಿಯೋ ಶೂಟ್ ಮಾಡಿ ಮುಗಿಸಿದ್ದಾರೆ. ಇವರ ಕಣ್ಣಲ್ಲಿ ಸೆರೆಯಾಗಿದ್ದು ಮತ್ಯಾರೂ ಅಲ್ಲ ಸ್ಯಾಂಡಲ್‌ವುಡ್ ಹಾಗೂ ಕೋಸ್ಟಲ್‌ವುಡ್‌ನಲ್ಲಿ ಸೆಎರೆಯಾಗಿರುವ ಶಿಲ್ಪ ಶೆಟ್ಟಿ.

  ಈ ವರ್ಷದ ಟಾಪ್ 10 ಜನಪ್ರಿಯ ಭಾರತೀಯ ಸಿನಿಮಾಗಳಿವು: 'ಕೆಜಿಎಫ್ 2' ಎಷ್ಟನೇ ಸ್ಥಾನ?ಈ ವರ್ಷದ ಟಾಪ್ 10 ಜನಪ್ರಿಯ ಭಾರತೀಯ ಸಿನಿಮಾಗಳಿವು: 'ಕೆಜಿಎಫ್ 2' ಎಷ್ಟನೇ ಸ್ಥಾನ?

  ಹಳೇ ವೃತ್ತಿಗೆ ಮರಳಿದ ಭುವನ್

  ಹಳೇ ವೃತ್ತಿಗೆ ಮರಳಿದ ಭುವನ್

  ಶಿಲ್ಪ ಶೆಟ್ಟಿಯನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿರೋ ಭುವನ್ ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತೆ ಪೋರ್ಟ್‌ಫೊಲಿಯೋ ಶೂಟ್ ಮಾಡಿದ್ದಕ್ಕೆ ಹರ್ಷ ವ್ಯಕ್ತ ಪಡಿಸಿದ್ದಾರೆ. " ನಾನು ಪ್ರೀತಿಯಿಂದ
  ಆರಂಭಿಸಿ ವೃತ್ತಿಗೆ ಮತ್ತೆ ಮರಳಿದ್ದೇನೆ. ಬಹಳ ದಿನಗಳ ಬಳಿಕ ಇಲ್ಲಿದೆ ಪೋರ್ಟ್‌ಫೊಲಿಯೋ ಶೂಟ್ ಎಂದು ಬರೆದುಕೊಂಡಿದ್ದಾರೆ."

  ಸಿನಿಮಾಗಳಲ್ಲಿ ಬ್ಯುಸಿ ಶಿಲ್ಪ ಶೆಟ್ಟಿ

  ಸಿನಿಮಾಗಳಲ್ಲಿ ಬ್ಯುಸಿ ಶಿಲ್ಪ ಶೆಟ್ಟಿ

  ಭುವನ್ ಗೌಡ ಕ್ಯಾಮರಾದಲ್ಲಿ ಸೆರೆಯಾಗಿರುವ ಈ ಬ್ಯೂಟಿ ಶಿಲ್ಪ ಶೆಟ್ಟಿ ಅಭಿನಯದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.

  ತುಳು ಸಿನಿಮಾಗಳಲ್ಲೂ ನಟನೆ

  ತುಳು ಸಿನಿಮಾಗಳಲ್ಲೂ ನಟನೆ

  ಶಿಲ್ಪ ಶೆಟ್ಟಿ ಮೂಲ ಕರಾವಳಿ. ಹೀಗಾಗಿ ಕೋಸ್ಟಲ್‌ವುಡ್‌ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ ಹಾಗೂ ಕೋಸ್ಟಲ್‌ವುಡ್ ಎರಡೂ ಕಡೆ ಬ್ಯುಸಿಯಾಗಿರುವ ನಟಿ ಶಿಲ್ಪ ಶೆಟ್ಟಿ.

  ಭುವನ್ 'ಸಲಾರ್' ಸಿನಿಮಾದಲ್ಲಿ ಬ್ಯುಸಿ

  ಭುವನ್ 'ಸಲಾರ್' ಸಿನಿಮಾದಲ್ಲಿ ಬ್ಯುಸಿ

  ಭುವನ್ ಗೌಡ 'ಕೆಜಿಎಫ್ 2' ಸಿನಿಮಾದ ಬಳಿಕ 'ಸಲಾರ್'ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ನಟಿಸುತ್ತಿರುವ 'ಸಲಾರ್' ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲೂ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.

  ಶಿಲ್ಪ ಶೆಟ್ಟಿಯ ಶುಗರ್ ಫ್ಯಾಕ್ಟರಿ

  ಶಿಲ್ಪ ಶೆಟ್ಟಿಯ ಶುಗರ್ ಫ್ಯಾಕ್ಟರಿ

  ಡಾರ್ಲಿಂಗ್ ಕೃಷ್ಣ ಅಭಿನಯದ 'ಶುಗರ್ ಫ್ಯಾಕ್ಟರಿ'ಯಲ್ಲಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಸಿನಿಮಾದಲ್ಲಿರುವ ಇಬ್ಬರು ನಾಯಕಿಯರಲ್ಲಿ ಇವರೂ ಒಬ್ಬರು. 'ಶುಗರ್ ಫ್ಯಾಕ್ಟರಿ' ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

  English summary
  KGF 2 Cinematographer Bhuvan Gowda Latest Photoshoot With Shilpa Shetty, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X