For Quick Alerts
  ALLOW NOTIFICATIONS  
  For Daily Alerts

  ರಾಕಿ ಭಾಯ್ ಫುಲ್ ಟ್ರೆಂಡಿಂಗ್‌: ಮತ್ತೆ ಹೆಚ್ಚಾಯ್ತು ಅಭಿಮಾನಿಗಳ ನಿರೀಕ್ಷೆ!

  |

  'ಕೆಜಿಎಫ್ 2' ಕನ್ನಡ ಚಿತ್ರರಂಗದ ದಿಕ್ಕನ್ನು ಬದಲಿಸಿದ ಸಿನಿಮಾ. ಈ ಸಿನಿಮಾ ಮೂಲಕ ರಾಕಿಂಗ್‌ ಸ್ಟಾರ್ ಆಗಿದ್ದ ರಾಕಿ ಭಾಯ್ ನ್ಯಾಷನಲ್‌ ಸ್ಟಾರ್ ಆಗಿ ಪ್ರಮೋಟ್ ಆಗಿದ್ದಾರೆ. ಈಗ ಯಶ್ ಕೇವಲ ಕರ್ನಾಟಕಕ್ಕೆ ಅಷ್ಟೇ ಅಲ್ಲ, ವಿಶ್ವದ ಮೂಲೆ ಮೂಲೆಯಲ್ಲಿರೋ ಭಾರತೀಯರಿಗೂ ಚಿರಪರಿಚಿತ.

  'ಕೆಜಿಎಫ್ 2' ಬಳಿಕ ಯಶ್ ಸೈಲೆಂಟ್ ಆಗಿರೋದು ಅಭಿಮಾನಿಗಳ ನಿದ್ದೆ ಕೆಡಿಸಿದೆ. ಯಾಕಂದ್ರೆ ಯಶ್ ಹೊಸ ಸಿನಿಮಾದ ಬಗ್ಗೆ ಇದೂವರೆಗೂ ಒಂದೇ ಒಂದು ಸುಳಿವು ಕೂಡ ನೀಡಿಲ್ಲ. ಹೀಗಾಗಿ ಯಶ್ ಫ್ಯಾನ್ಸ್ ಹೊಸ ಸಿನಿಮಾದ ಘೋಷಣೆಗಾಗಿ ತುದಿಗಾಲಲ್ಲಿ ನಿಂತಿದ್ದಾರೆ.

  ಹೆಸರು ಬದಲಿಸಿಕೊಂಡರೆ ಯಶಸ್ಸು ಸಿಗುತ್ತಾ? ಕನ್ನಡ ಈ ಸ್ಟಾರ್ ನಟರ ಮೊದಲ ಹೆಸರೇನು?ಹೆಸರು ಬದಲಿಸಿಕೊಂಡರೆ ಯಶಸ್ಸು ಸಿಗುತ್ತಾ? ಕನ್ನಡ ಈ ಸ್ಟಾರ್ ನಟರ ಮೊದಲ ಹೆಸರೇನು?

  ರಾಕಿಂಗ್ ಸ್ಟಾರ್ ಯಶ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ. ರಾಕಿ ಭಾಯ್ ಅಭಿಮಾನಿಗಳು ಟ್ವಿಟರ್‌ನಲ್ಲಿ ತಮ್ಮ ಮೆಚ್ಚಿನ ನಟನನ್ನು ಟ್ರೆಂಡ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅಸಲಿಗೆ ಯಶ್ ಟ್ರೆಂಡ್ ಆಗುತ್ತಿರೋದು ಯಾಕೆ? ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಟ್ರೆಂಡ್ ಮಾಡುತ್ತಿರೋದು ಯಾಕೆ? ಅನ್ನೋದನ್ನು ತಿಳಿಯೋದಕ್ಕೆ ಮುಂದೆ ಓದಿ.

  ಯಶ್ ಫುಲ್ ಟ್ರೆಂಡಿಂಗ್

  ಯಶ್ ಫುಲ್ ಟ್ರೆಂಡಿಂಗ್

  ಯಶ್ ಹೊಸ ಸಿನಿಮಾ ಈಗಾಗಲೇ ಸಾಕಷ್ಟು ಸುದ್ದಿಗಳು ಚಾಲ್ತಿಯಲ್ಲಿವೆ. ಆದರೆ, ಅವುಗಳಲ್ಲಿ ಯಾವುದು ಸತ್ಯ ಅನ್ನೋದು ಮಾತ್ರ ಇನ್ನೂ ನಿಗೂಢವಾಗಿಯೇ ಇದೆ. ಆದ್ರೀಗ ಅವರ ಅಭಿಮಾನಿಗಳು ಹೊಸ ಸುದ್ದಿಯೊಂದು ಸಿಕ್ಕಿದೆ. ಯಶ್ ತಮ್ಮ ಹೊಸ ಸಿನಿಮಾವನ್ನು ಡಿಸೆಂಬರ್ ತಿಂಗಳಲ್ಲಿ ಅನೌನ್ಸ್ ಮಾಡಲಿದ್ದಾರಂತೆ. ಹಾಗೇ ಫಸ್ಟ್ ಲುಕ್ ಅನ್ನು ಜನವರಿಯಲ್ಲಿ ಅವರ ಹುಟ್ಟುಹಬ್ಬದಂದು ಬಿಡುಗಡೆ ಮಾಡುತ್ತಾರೆ ಅಂತ ಟ್ರೆಂಡ್ ಮಾಡುತ್ತಿದ್ದಾರೆ.

  ಯಶ್ ಹುಟ್ಟುಹಬ್ಬಕ್ಕೆ ಇನ್ನು 53 ದಿನ

  ಯಶ್ ಹುಟ್ಟುಹಬ್ಬಕ್ಕೆ ಇನ್ನು 53 ದಿನ

  ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಏನಾದರೂ ಒಂದು ಹೊಸ ಸುದ್ದಿ ಕೊಟ್ಟೇ ಕೊಡುತ್ತಾರೆ ಅನ್ನೋ ನಂಬಿಕೆ ಅಭಿಮಾನಿಗಳದ್ದು. ಈ ಕಾರಣಕ್ಕೆ ಡಿಸೆಂಬರ್‌ನಲ್ಲಿ ಹೊಸ ಸಿನಿಮಾ ಬಗ್ಗೆ ಘೋಷಣೆ ಆಗೋದು ಖಚಿತ ಅನ್ನೋದು ಅಭಿಮಾನಿಗಳ ಲೆಕ್ಕಾಚಾರ. ಅಂದ್ಹಾಗೆ ಯಶ್ ಜನವರಿ 8ರಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈ ಕಾರಣಕ್ಕೆ ರಾಕಿಂಗ್ ಫೆಸ್ಟಿವಲ್‌ಗೆ ಇನ್ನು 53 ದಿನ ಬಾಕಿ ಅಂತ ಅಭಿಯಾನವನ್ನು ಶುರು ಮಾಡಿದ್ದಾರೆ.

  ಯಶ್‌ ಅನ್ನು ಧೋನಿಗೆ ಹೋಲಿಸಿದ ಅಭಿಮಾನಿಗಳು

  ಯಶ್‌ ಅನ್ನು ಧೋನಿಗೆ ಹೋಲಿಸಿದ ಅಭಿಮಾನಿಗಳು

  'ಕೆಜಿಎಫ್ 2' ಕನ್ನಡ ಚಿತ್ರರಂಗವನ್ನು ರಾಷ್ಟ್ರಕ್ಕಷ್ಟೇ ತೆಗೆದುಕೊಂಡು ಹೋಗಿಲ್ಲ. ಬದಲಾಗಿ ವಿಶ್ವ ಮಟ್ಟದಲ್ಲಿ ಗರ್ವ ಪಡುವಂತೆ ಮಾಡಿದೆ. ಅದೇ ರೀತಿ ಮಹೇಂದ್ರ ಸಿಂಗ್ ಧೋನಿ 28 ವರ್ಷಗಳ ಬಳಿಕ ಭಾರತಕ್ಕೆ ಮತ್ತೆ ವಿಶ್ವಕಪ್ ಅನ್ನು ಗೆಲ್ಲಿಸಿಕೊಟ್ಟಿದ್ದರು. ಈ ಕಾರಣಕ್ಕೆ ನೆಟ್ಟಿಗರು 2011ರಲ್ಲಿ ಎಂ ಎಸ್‌ ಧೋನಿ ವಿಶ್ವಕಪ್ ಗೆಲ್ಲಿಸಿಕೊಟ್ಟಂತೆ, 'ಕೆಜಿಎಫ್ 2' ಮೂಲಕ ಭಾರತೀಯ ಚಿತ್ರರಂಗದ ಬಾಕ್ಸಾಫೀಸ್‌ಗೆ ಗೆಲುವು ತಂದುಕೊಟ್ಟಿದ್ದು ಯಶ್ ಎಂದು ಹೇಳುತ್ತಿದ್ದಾರೆ. ಕಳೆದೆರಡು ದಿನಗಳಿಂದ ಇದೂ ಕೂಡ ಟ್ರೆಂಡ್ ಆಗುತ್ತಿದೆ.

  ಏನನ್ನೂ ನಂಬಬೇಡಿ

  ಏನನ್ನೂ ನಂಬಬೇಡಿ

  'ಕೆಜಿಎಫ್ 2' ಯಶ್ ಹೊಸ ಸಿನಿಮಾ ಬಗ್ಗೆ ಗೌಪ್ಯತೆಯನ್ನು ಹಾಗೇ ಉಳಿಸಿಕೊಂಡಿದ್ದಾರೆ. ಅದೇ ಇನ್ನೊಂದು ಕಡೆ ಸೋಶಿಯಲ್ ಮೀಡಿಯಾಗಳಲ್ಲಿ ಯಶ್ ಮುಂದಿನ ಬಗ್ಗೆ ಹಲವು ಲೆಕ್ಕಾಚಾರಗಳು ಹಾಕಲಾಗಿದೆ. ಇದರ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಲೇ ಇದೆ. ಅದಕ್ಕೆ ಯಶ್ ಏನನ್ನೂ ನಂಬಬೇಡಿ "ಏನೇ ಇದ್ದರೂ ನಾನೇ ಹೇಳುತ್ತೇ. ಶೀಘ್ರದಲ್ಲಿಯೇ ಹೊಸ ಸಿನಿಮಾ ಅನೌನ್ಸ್ ಮಾಡುತ್ತೇನೆ" ಎಂದು ಇತ್ತೀಚೆಗೆ ಹೇಳಿದ್ದರು. ಅಲ್ಲದೆ 'ಕೆಜಿಎಫ್ 3' ಈಗಲೇ ಸೆಟ್ಟೇರುವುದಿಲ್ಲ ಅನ್ನೋದನ್ನು ಕನ್ಫರ್ಮ್‌ ಮಾಡಿದ್ದರು.

  ಶಂಕರ್ ₹1000 ಕೋಟಿ ಬಜೆಟ್‌ ಸಿನಿಮಾದಲ್ಲಿ ಯಶ್, ರಣ್‌ವೀರ್, ರಾಮ್‌ಚರಣ್, ಸೂರ್ಯ?ಶಂಕರ್ ₹1000 ಕೋಟಿ ಬಜೆಟ್‌ ಸಿನಿಮಾದಲ್ಲಿ ಯಶ್, ರಣ್‌ವೀರ್, ರಾಮ್‌ಚರಣ್, ಸೂರ್ಯ?

  English summary
  KGF 2 Star Yash Trending On Twitter Regarding His New Movie And Birthday, Know More.
  Tuesday, November 15, 2022, 20:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X