For Quick Alerts
  ALLOW NOTIFICATIONS  
  For Daily Alerts

  4 ತಿಂಗಳ ಹಿಂದೆ ಬೆಂಜ್ ಕಾರು ಆಕ್ಸಿಡೆಂಟ್.. BMW ಏರಿದ 'KGF' ಆ್ಯಂಡ್ರೂಸ್: ಬೆಲೆ ಎಷ್ಟು ಗೊತ್ತಾ?

  |

  'KGF' ಸರಣಿ ಸಿನಿಮಾಗಳಲ್ಲಿ ಒಂದಕ್ಕಿಂತ ಒಂದು ಅದ್ಭುತ ಪಾತ್ರವನ್ನು ನಿರ್ದೇಶಕ ಪ್ರಶಾಂತ್ ನೀಲ್ ಡಿಸೈನ್ ಮಾಡಿದ್ದರು. ಚಿತ್ರದಲ್ಲಿ ಆ್ಯಂಡ್ರೂಸ್ ಆಗಿ ನೆಗೆಟಿವ್ ರೋಲ್‌ನಲ್ಲಿ ನಟಿಸಿದ್ದ ಬಿ. ಎಸ್ ಅವಿನಾಶ್ ರಾತ್ರೋ ರಾತ್ರಿ ಫೇಮಸ್ ಆಗಿಬಿಟ್ಟಿದ್ದರು. ಈ ಸಿನಿಮಾ ನಂತರ ಸಾಕಷ್ಟು ಅವಕಾಶಗಳು ಅವರನ್ನು ಹುಡುಕಿ ಬರುತ್ತಿದೆ. ಸದ್ಯ ಅವಿನಾಶ್ BMW ಕಾರ್ ಖರೀದಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  4 ತಿಂಗಳ ಹಿಂದೆ ಅವಿನಾಶ್ ಅವರು ಪ್ರಯಾಣಿಸುತ್ತಿದ್ದ ಬೆಂಜ್ ಕಾರಿಗೆ ಕಂಟೇನರ್ ಡಿಕ್ಕಿ ಹೊಡೆದು ಕಾರು ನಜ್ಜು ಗುಜ್ಜಾಗಿತ್ತು. ಸಣ್ಣಪುಟ್ಟ ಪೆಟ್ಟಾಗಿ ನಟ ಅವಿನಾಶ್ ಚೇತರಿಸಿಕೊಂಡಿದ್ದರು. ಇದೀಗ ಕಪ್ಪು ಬಣ್ಣದ ಹೊಸ BMW ಕಾರನ್ನು ನಟ ಅವಿನಾಶ್ ಕೊಂಡುಕೊಂಡಿದ್ದಾರೆ. 'KGF' ಚಿತ್ರದ ಬಿಜಿಎಂ ಸಮೇತ ವಿಡಿಯೋ ಶೇರ್ ಮಾಡಿ ಪವರ್‌ಫುಲ್ ಪೀಪಲ್ ಡ್ರೈವ್ ಪವರ್‌ಫುಲ್ ಕಾರ್ಸ್‌ ಎಂದು ಬರೆದುಕೊಂಡಿದ್ದಾರೆ. 'KGF' ಚಿತ್ರದ ಆ್ಯಂಡ್ರೂಸ್ ಪಾತ್ರದಿಂದ ಅವಿನಾಶ್ ಜನಪ್ರಿಯರಾಗಿದ್ದಾರೆ. ಇವರು ಮೂಲತಃ ಹೋಟೆಲ್ ಉದ್ಯಮಿ. ಭುವನ್ ಗೌಡ ಮಾಡಿದ ಅದೊಂದು ಫೋಟೊಶೂಟ್‌ನಿಂದ ಅವಿನಾಶ್‌ಗೆ ಈ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು.

  ಸತತ ಟ್ರೋಲ್: ನಟಿಯಾಗಿದ್ದಕ್ಕೆ ಬೆಲೆ ತೆರುತ್ತಿದ್ದೇನೆ ಎಂದ ರಶ್ಮಿಕಾ ಮಂದಣ್ಣಸತತ ಟ್ರೋಲ್: ನಟಿಯಾಗಿದ್ದಕ್ಕೆ ಬೆಲೆ ತೆರುತ್ತಿದ್ದೇನೆ ಎಂದ ರಶ್ಮಿಕಾ ಮಂದಣ್ಣ

  ಕಾಲೇಜು ದಿನಗಳಿಂದಲೂ ಫಿಟ್‌ನೆಟ್‌ ಬಗ್ಗೆ ಸಿಕ್ಕಾಪಟ್ಟೆ ಗಮನ ಹರಿಸಿದ್ದ ಅವಿನಾಶ್ 45ರ ವಯಸ್ಸಿನಲ್ಲೂ ಸಿಕ್ಸ್‌ಪ್ಯಾಕ್ ಮಾಡಿ ಹುಬ್ಬೇರಿಸಿದ್ದಾರೆ. ಅವರ ಫಿಟ್‌ನೆಸ್, ಲುಕ್ ನೋಡಿ ಪ್ರಶಾಂತ್ ನೀಲ್ 'KGF' ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಅವರ ಲೆಕ್ಕಾಚಾರ ಪಕ್ಕಾ ಇತ್ತು. ಆ್ಯಂಡ್ರೂಸ್ ಪಾತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಅವಿನಾಶ್ ಮತ್ತಷ್ಟು ಸಿನಿಮಾಗಳಲ್ಲಿ ನಟಿಸುವ ಮನಸ್ಸು ಮಾಡಿದ್ದಾರೆ.

  ಆ್ಯಂಡ್ರೂಸ್ ಹೊಸ ಕಾರಿನ ಬೆಲೆ ಎಷ್ಟು?

  ಆ್ಯಂಡ್ರೂಸ್ ಹೊಸ ಕಾರಿನ ಬೆಲೆ ಎಷ್ಟು?

  ಬೆಂಗಳೂರಿನ BMW ಕಾರ್‌ ಶೋರೂಂನಲ್ಲಿ BMW ‍‍X5 ಮಾಡೆಲ್ ಕಾರನ್ನು ಅವಿನಾಶ್ ಖರೀದಿಸಿದ್ದಾರೆ. ಪತ್ನಿ ಸಮೇತ ಹೋಗಿ ಕಪ್ಪು ಬಣ್ಣದ ಐಷಾರಾಮಿ ಕಾರನ್ನು ಮನೆಗೆ ತಂದಿದ್ದಾರೆ. ಬೆಂಗಳೂರಿನಲ್ಲಿ BMW ‍‍X5 ಮಾಡೆಲ್ ಕಾರಿನ ಬೆಲೆ 1 ಕೋಟಿ ರೂಪಾಯಿಯಿಂದ ಆರಂಭವಾಗುತ್ತದೆ. ಕಾರಿನ ಬೆಲೆ ಕೇಳಿ ಕೆಲವರು ಹುಬ್ಬೇರಿಸಿದ್ದಾರೆ.

  ಡಾಲಿ ಎದುರು ಆಂಡ್ರೂಸ್ ಹವಾ

  ಡಾಲಿ ಎದುರು ಆಂಡ್ರೂಸ್ ಹವಾ

  'KGF' ಸೀಕ್ವೆಲ್ ನಂತರ ಅವಿನಾಶ್ 'ಹೊಯ್ಸಳ' ಚಿತ್ರದಲ್ಲಿ ಮತ್ತೆ ಖಳ ನಟನಾಗಿ ಅಬ್ಬರಿಸುತ್ತಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ ಪೊಲೀಸ್ ಆಫೀಸರ್ ರೋಲ್‌ನಲ್ಲಿ ಮಿಂಚಿದ್ದು, ಅವಿನಾಶ್ ಉತ್ತರ ಕರ್ನಾಟಕದ ಖಡಕ್ ಪಾತ್ರದಲ್ಲಿ ನಟಿಸಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ 'ಹೊಯ್ಸಳ' ಚಿತ್ರಕ್ಕೆ ವಿಜಯ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  ಅವಿನಾಶ್‌ಗೆ ಚಿರು ಸರ್ಜಾ ಸಹಾಯ

  ಅವಿನಾಶ್‌ಗೆ ಚಿರು ಸರ್ಜಾ ಸಹಾಯ

  ಚಿಕ್ಕಂದಿನಿಂದಲೂ ಅವಿನಾಶ್ ಅವರಿಗೆ ಸಿನಿಮಾದಲ್ಲಿ ನಟಿಸುವ ಹಂಬಲ ಇತ್ತು. ಆದರೆ ಬ್ಯುಸಿನೆಸ್‌ ಕಡೆ ಮುಖ ಮಾಡಿದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಜಿಮ್‌ನಲ್ಲಿ ನಟ ಚಿರಂಜೀವಿ ಸರ್ಜಾ ಪರಿಚಯವಾಗಿತ್ತು. ಅವರು ಅವಿನಾಶ್‌ಗೆ ಪನ್ನಗ ಭರಣ ಭೇಟಿ ಮಾಡಿಸಿದ್ದರು. ಪನ್ನಗ ಆಕ್ಟಿಂಗ್ ವರ್ಕ್ಸ್‌ಶಾಪ್‌ಗೆ ಸೇರಿಸಿದರು. ನಟನೆಯ ಪಟ್ಟುಗಳನ್ನು ಕಲಿತ ಮೇಲೆ ಟಿ. ಎಸ್ ನಾಗಾಭರಣ ಪರಿಚಯವಾಗಿ 'ಅಲ್ಲಮ' ಚಿತ್ರದ ಪಾತ್ರವೊಂದಕ್ಕೆ ಆಯ್ಕೆ ಆಗಿದ್ದರು.

  ಅವಿನಾಶ್ ಬೆನ್ಜ್ ಕಾರು ಅಪಘಾತ

  ಅವಿನಾಶ್ ಬೆನ್ಜ್ ಕಾರು ಅಪಘಾತ

  ಕೆಲ ದಿನಗಳ ಹಿಂದೆ ಆ್ಯಡ್ರೂಸ್ ಅಲಿಯಾಸ್ ಬಿ ಎಸ್ ಅವಿನಾಶ್ ಅವರ ಬೆನ್ಜ್ ಕಾರು ಅಪಘಾತಕ್ಕೀಡಾಗಿತ್ತು. ಎಂಜಿ ರಸ್ತೆಯ ಅನಿಲ್ ಕುಂಬ್ಳೆ ವೃತ್ತದ ಬಳಿ ಈ ಘಟನೆ ನಡೆದಿತ್ತು. ಅದೃಷ್ಟವಶಾತ್ ನಟನಿಗೆ ಯಾವುದೇ ತೊಂದರೆ ಆಗಿರಲಿಲ್ಲ. ಕ್ಯಾಂಟರ್ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದ್ದಾಗಿ ವರದಿ ಆಗಿತ್ತು. ನಟ ಅವಿನಾಶ್ ಜಿಮ್‌ಗೆ ಹೋಗುವ ಸಮಯದಲ್ಲಿ ಈ ಘಟನೆ ನಡೆದಿತ್ತು. ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿ ಕ್ಯಾಂಟರ್ ಚಾಲಕ ಶಿವನಗೌಡ ಎಂಬುವವನನ್ನು ಬಂಧಿಸಲಾಗಿತ್ತು.

  English summary
  KGF Actor Avinash Buys a brand new BMW X5 luxury SUV; Know Price. Video of the actor taking delivery of his BMW along with his Wife has already surfaced online. Know More.
  Wednesday, November 9, 2022, 14:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X