Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ನಮ್ಮ ಹುಡುಗರು ಅಲ್ಲವಾ" ಎಂದು ಅಭಿಮಾನಿಗಳ ಪಕ್ಕ 2 ಗಂಟೆ ನಿಂತ ಯಶ್: ಅಭಿಮಾನಿಗಳು ದಿಲ್‌ಖುಷ್
ನೆಚ್ಚಿನ ನಟನ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಆಸೆ ಯಾವ ಅಭಿಮಾನಿಗೆ ಇರುವುದಿಲ್ಲ ಹೇಳಿ. ರಾಕಿಂಗ್ ಸ್ಟಾರ್ ಜೊತೆ ಫೋಟೊ ಅಂದರೆ ತಮಾಷೆನಾ? ಅಲ್ಲವೇ ಅಲ್ಲ. ಅಂತಾದೊಂದು ಸುವರ್ಣಾವಕಾಶ ನೂರಾರು ಅಭಿಮಾನಿಗಳಿಗೆ ಏಕಕಾಲದಲ್ಲಿ ಸಿಕ್ಕಿದೆ. ಫೋಟೊ ಕ್ಲಿಕ್ಕಿಸಿಕೊಂಡವರು ವಾಟ್ಸಾಪ್ ಸ್ಟೇಟಸ್, ಫೇಸ್ಬುಕ್, ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿ ಕಾಲರ್ ಎಗರಿಸಿದ್ದಾರೆ.
ಹೌದು ನೂರಾರು ರಾಕಿಂಗ್ ಅಭಿಮಾನಿಗಳಿಗೆ ನೆಚ್ಚಿನ ನಟನ ಜೊತೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಸುವರ್ಣಾವಕಾಶ ಸಿಕ್ಕಿತ್ತು. ಯಶ್ ಜೊತೆ ಫೋಟೊಗೆ ಪೋಸ್ ಕೊಡುವ ಅವಕಾಶ ಸಿಕ್ಕಿತ್ತು ಎನ್ನುವುದಕ್ಕಿಂತ ಸ್ವತಃ ಯಶ್ ಕೊಟ್ಟರು ಎನ್ನುವುದು ವಿಶೇಷ. ಅಂಬೇಡ್ಕರ್ ಭವನದಲ್ಲಿ ನಡೆದ ಫಿಲ್ಮ್ ಕಂಪಾನಿಯನ್ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ನಿನ್ನೆ(ಡಿಸೆಂಬರ್ 15) ಯಶ್ ಭಾಗಿ ಆಗಿದ್ದರು. ಕಾರ್ಯಕ್ರಮ ಮುಗಿದ ನಂತರ ಅಲ್ಲಿ ನೆರೆದಿದ್ದ ಅಭಿಮಾನಿಗಳ ಜೊತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ಮುಂದಿನ
ಸಿನಿಮಾ
ಜಾನರ್
ಬಗ್ಗೆ
ಯಶ್
ಸುಳಿವು:
ಯಶ್19
ಬಗ್ಗೆ
ರಾಕಿಂಗ್
ಸ್ಟಾರ್
ಹೇಳಿದ್ದಿಷ್ಟು!
ರಾಕಿಂಗ್ ಸ್ಟಾರ್ ಯಶ್ ಬಹಳ ದಿನಗಳ ನಂತರ ನೇರವಾಗಿ ಅಭಿಮಾನಿಗಳಿಗೆ ದರ್ಶನ್ ಕೊಟ್ಟಿದ್ದರು. ವಿಶೇಷ ಸಂವಾದ ಕಾರ್ಯಕ್ರಮ ಚಿತ್ರೀಕರಣ ವೀಕ್ಷಿಸುವ ಅವಕಾಶವೂ ಅಭಿಮಾನಿಗಳಿಗೆ ಸಿಕ್ಕಿತ್ತು. ಜೊತೆಗೆ ಬೋನಸ್ ಎನ್ನುವಂತೆ ಪ್ರತಿಯೊಬ್ಬರಿಗೂ ಯಶ್ ಜೊತೆ ಫೋಟೊ ತೆಗೆಸಿಕೊಂಡು ಖುಷಿಪಟ್ಟರು.

ಯಶ್ ಮಾತಿಗೆ ಆಯೋಜಕರು ಶಾಕ್
ಅನುಪಮಾ ಚೋಪ್ರಾ ನಡೆಸಿಕೊಟ್ಟ ಸಂವಾದ ಕಾರ್ಯಕ್ರಮ ನಂತರ ಆಯೋಜಕರು ಗ್ರೂಪ್ ಸೆಲ್ಫಿ ತೆಗೆಯಲು ಮುಂದಾಗಿದ್ದರು. ಆದರೆ ಅಲ್ಲಿ ನೆರದಿದ್ದ ಪ್ರತಿಯೊಬ್ಬ ಅಭಿಮಾನಿಗೂ, ಕಾರ್ಯಕ್ರಮ ಆಯೋಜಿಸಿದ ಸಿಬ್ಬಂದಿಗೂ ಯಶ್ ಅವರೊಟ್ಟಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಆಸೆ ಇತ್ತು. ಹಾಗಾಗಿ ಯಶ್ "ನಮ್ಮ ಹುಡುಗರು ಅಲ್ಲವಾ" ಎಂದು ಹೇಳಿ ಪ್ರತಿಯೊಬ್ಬರ ಜೊತೆ ಫೋಟೊ ತೆಗೆಸಿಕೊಳ್ಳುವುದಾಗಿ ಹೇಳಿದ್ದಾರೆ. ಇದನ್ನು ಕೇಳಿ ಆಯೋಜಕರೇ ಶಾಕ್ ಆಗಿದ್ದರು.

2 ಗಂಟೆ ನಿಂತು ಪೋಸ್
ಸುಮಾರು 500 ಜನ ಅಭಿಮಾನಿಗಳು. ಪ್ರತಿಯೊಬ್ಬರ ಜೊತೆಗೂ ಒಂದೊಂದು ಫೋಟೊ ಅಂದರೆ ತಮಾಷೆ ಮಾತಲ್ಲ. ಆದರೆ ಯಶ್ ಎಲ್ಲರೊಟ್ಟಿಗೂ ನಗುನಗುತ್ತಾ ಪೋಸ್ಟ್ ಕೊಟ್ಟರು. ಅಭಿಮಾನಿಗಳು ಸಾಲಾಗಿ ಬಂದು ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಸಾಲಿನಲ್ಲಿ ಮುಂದೆ ಇದ್ದವರಿಗೆ ಬೇಗ ನೆಚ್ಚಿನ ನಟನ ಕೈಕುಲುಕಿ ಫೋಟೊಗೆ ಪೋಸ್ ಕೊಡುವ ಆಸೆ. ಸಾಲಿನ ಕೊನೆಯಲ್ಲಿ ಇದ್ದವರಿಗೆ ಅಯ್ಯೋ ಯಶ್ ನನಗೆ ಕೊಡದೇ ಹೋಗಿಬಿಟ್ಟರೆ ಎನ್ನುವ ಭಯ. ಆದರೆ ಯಶ್ ಮಾತ್ರ ಒಂದೂವರೆ ಗಂಟೆ ನಿಂತೇ ಎಲ್ಲರಿಗೂ ಫೋಟೊ ಕೊಟ್ಟು ಖುಷಿಪಡಿಸಿದರು.

ಮಾತು ತಪ್ಪದ ಯಶ್
500 ಜನಕ್ಕೆ ಫೋಟೊ ಕೊಡಬೇಕು ಎಂದರೆ ಯಶ್ ಒಂದೂವರೆ ಗಂಟೆ ನಿಲ್ಲಬೇಕಿತ್ತು. ಯಶ್‌ಗೆ ಸಾಕು ಎನಿಸಿದರೆ ಅರ್ಧಕ್ಕೆ ಹೊರಟುಬಿಡಬಹುದಿತ್ತು. ಆದರೆ ರಾಕಿಂಗ್ ಸ್ಟಾರ್ ಹಾಗೆ ಮಾಡಲಿಲ್ಲ. ಕೊಟ್ಟ ಮಾತಿನಂತೆ ಪ್ರತಿಯೊಬ್ಬರ ಜೊತೆಗೂ ಫೋಟೊ ಕ್ಲಿಕ್ಕಿಸಿಕೊಂಡರು. ಕೆಲವರು ಗ್ಯಾಪ್‌ನಲ್ಲಿ ಸೆಲ್ಫಿ ಕೂಡ ಕ್ಲಿಕ್ಕಿಸಿಕೊಂಡು ಥ್ರಿಲ್ಲಾಗಿದ್ದಾರೆ. ಒಟ್ನಲ್ಲಿ ಬಂದಿದ್ದ ಎಲ್ಲರನ್ನು ಯಶ್ ಖುಷಿಪಡಿಸಿ ಅಲ್ಲಿಂದ ಹೊರಟಿದ್ದಾರೆ.

ಶೀಘ್ರದಲ್ಲೇ ಶೋ ಪ್ರಸಾರ
ಇನ್ನು "ರಾಕಿಂಗ್ ಸ್ಟಾರ್: ಗೇಮ್ ಚೇಂಜರ್ ಆಫ್ ಇಂಡಿಯನ್ ಸಿನಿಮಾ" ಹೆಸರಿನಲ್ಲಿ ನಡೆದ ಈ ಸಂವಾದ ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬಂದಿದೆ. ಯಶ್ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಕಾರ್ಯಕ್ರಮ ಫಿಲ್ಮ್ ಕಂಪಾನಿಯನ್ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಆಗಲಿದೆ.