Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Yash 19 : ಮುಂದಿನ ಸಿನಿಮಾ ಜಾನರ್ ಬಗ್ಗೆ ಯಶ್ ಸುಳಿವು: ಯಶ್19 ಬಗ್ಗೆ ರಾಕಿಂಗ್ ಸ್ಟಾರ್ ಹೇಳಿದ್ದಿಷ್ಟು!
'KGF- 2' ನಂತರ ವಾಟ್ ನೆಕ್ಸ್ಟ್ ಎಂದು ಅಭಿಮಾನಿಗಳು ಕೇಳುತ್ತಲೇ ಇದ್ದಾರೆ. ಆದರೆ ಈ ಪ್ರಶ್ನೆಗೆ ಇನ್ನು ಯಶ್‌ಗೂ ಉತ್ತರ ಸಿಕ್ಕಿದಂತೆ ಕಾಣ್ತಿಲ್ಲ. ಆದರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ರಾಕಿಂಗ್ ಸ್ಟಾರ್ ತಮ್ಮ ಮುಂದಿನ ಸಿನಿಮಾ ಕಥೆ ಬಗ್ಗೆ ಸುಳಿವು ಕೊಟ್ಟಿದ್ದಾರೆ.
ಯಶ್19 ಸಿನಿಮಾ ಜನವರಿ 8ಕ್ಕೆ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಘೋಷಣೆ ಆಗುವ ಸಾಧ್ಯತೆಯಿದೆ. ಆದರೆ ಸಿನಿಮಾ ಯಾವ್ದು? ನಿರ್ದೇಶಕರು ಯಾರು? ಕಥೆಯೇನು? ಎನ್ನುವ ಚರ್ಚೆ ಬಹಳ ದಿನಗಳಿಂದಲೇ ನಡೆಯುತ್ತಲೇ ಇದೆ. ಬಾಲಿವುಡ್ ಮಂದಿ ಕೂಡ ಯಶ್ ಮುಂದಿನ ಸಿನಿಮಾ ಮಾಹಿತಿಗಾಗಿ ಕಾಯುವಂತಾಗಿದೆ. ಫಿಲ್ಮ್ ಕಂಪಾನಿಯನ್ 'ಎಫ್‌ಸಿ ಫಸ್ಟ್ ರಾ' ಸಂದರ್ಶನ ಕಾರ್ಯಕ್ರಮದಲ್ಲಿ ಯಶ್ ಭಾಗಿಯಾಗಿದ್ದರು. ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಈ ಕಾರ್ಯಕ್ರಮ ಚಿತ್ರೀಕರಣ ನೆರವೇರಿದೆ.
ರಾಕಿಂಗ್
ಫ್ಯಾಮಿಲಿ
ರಾಕಿಂಗ್
ದೀಪಾವಳಿ
ಪೋಸ್ಟ್
ದಾಖಲೆ:
ಇನ್ನು
'ಯಶ್19'
ಅಪ್‌ಡೇಟ್
ಸಿಕ್ಕರೆ?
ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ನಿರೂಪಕಿ ಅನುಪಮಾ ಚೋಪ್ರಾ, ನಟ ಯಶ್ ಸಂದರ್ಶನ ನಡೆಸಿದ್ದಾರೆ. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಯಶ್ ಮಾತನಾಡಿದ್ದಾರೆ. ಇದರಲ್ಲಿ ಯಶ್19 ಸಿನಿಮಾ ಕಥೆ ಬಗ್ಗೆ ಕೂಡ ಚರ್ಚೆ ಆಗಿದೆ.

ಗೇಮ್ ಚೇಂಜರ್ ಆಫ್ ಇಂಡಿಯನ್ ಸಿನಿಮಾ
ಫಿಲ್ಮ್ ಕಂಪಾನಿಯನ್ ತಮ್ಮ 2ನೇ ಆನಿವರ್ಸರಿ ವಿಶೇಷವಾಗಿ ಯಶ್ ಸಂದರ್ಶನ ಮಾಡಿದೆ. "ರಾಕಿಂಗ್ ಸ್ಟಾರ್: ಗೇಮ್ ಚೇಂಜರ್ ಆಫ್ ಇಂಡಿಯನ್ ಸಿನಿಮಾ" ಹೆಸರಿನಲ್ಲಿ ಈ ಸಂವಾದ ಕಾರ್ಯಕ್ರಮ ನೆರವೇರಿದೆ. ನೂರಾರು ಅಭಿಮಾನಿಗಳ ಸಮ್ಮುಖದಲ್ಲಿ ಯಶ್ ಕಾರ್ಯಕ್ರಮ ನಡೆದ ಕಾರ್ಯಕ್ರಮದಲ್ಲಿ ಯಶ್ ತಮ್ಮ ಮುಂದಿನ ನಡೆ ಹಾಗೂ ಸಿನಿಮಾಗಗಳ ಬಗ್ಗೆ ಮಾತನಾಡಿದ್ದಾರೆ. ಶೀಘ್ರದಲ್ಲೇ ಈ ಕಾರ್ಯಕ್ರಮ ಪ್ರಸಾರ ಆಗಲಿದೆ.

ಸೈಫೈ- ಆಕ್ಷನ್ ಚಿತ್ರದ ಒಲವು
ಅನುಪಮಾ ಚೋಪ್ರಾ ಅವರ ಪ್ರಶ್ನೆಗಳಿಗೆ ಯಶ್ ಉತ್ತರ ಕೊಟ್ಟಿದ್ದಾರೆ. ಯಶ್19 ಬಗ್ಗೆ ಎದುರಾದ ಪ್ರಶ್ನೆಗೆ ನೇರವಾದ ಉತ್ತರ ಸಿಕ್ಕಿಲ್ಲ. ಕಥೆಯ ಬಗ್ಗೆ ಯಾವುದೇ ವಿಚಾರವನ್ನು ಯಶ್ ಹೇಳಿಲ್ಲ. ಆದರೆ ಸೈನ್‌ಫಿಕ್ಷನ್ ಅಥವಾ ಆಕ್ಷನ್ ಸಿನಿಮಾ ಮಾಡುವ ಒಲವು ವ್ಯಕ್ತಪಡಸಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಯಶ್ ಮಾತುಗಳನ್ನು ಕೇಳುತ್ತಿದ್ದರೆ ಮುಂದಿನ ಸಿನಿಮಾ ಬಗ್ಗೆ ಬಹಳ ದೊಡ್ಡದಾಗಿ ಪ್ಲ್ಯಾನ್ ಮಾಡಿರುವುದು ಗೊತ್ತಾಗುತ್ತಿದೆ.

ಹಾಲಿವುಡ್ ರೇಂಜ್ ಸಿನಿಮಾ
'KGF- 2' ಹಾಲಿವುಡ್ ಸಿನಿಮಾಗಳನ್ನು ನೆನಪಿಸಿತ್ತು. ಯಶ್ ತಮ್ಮ ಮುಂದಿನ ಚಿತ್ರವನ್ನು ಹಾಲಿವುಡ್ ಸಿನಿಮಾಗಳ ರೇಂಜ್‌ನಲ್ಲಿ ತೆರೆಗೆ ತರುವ ಮನಸ್ಸು ಮಾಡಿರುವುದಾಗಿ ಹೇಳಿದ್ದಾರೆ. ಇದಕ್ಕಾಗಿ ಸಾಕಷ್ಟು ಜನರನ್ನು ಭೇಟಿ ಮಾಡುತ್ತಿದ್ದಾರಂತೆ. ಕನ್ನಡದಲ್ಲೇ ಈ ಸಿನಿಮಾ ಮೂಡಿ ಬರುತ್ತದೆ ಎನ್ನುವ ಸುಳಿವು ಕೊಟ್ಟಿದ್ದಾರೆ. ಯಶ್ ಕೆಲ ದಿನಗಳ ಹಿಂದೆ ಹಾಲಿವುಡ್ ನಟ, ನಿರ್ದೇಶಕ ಜೆಜೆ ಪೆರ್ರಿ ಅವರನ್ನು ಭೇಟಿ ಮಾಡಿದ್ದರು.

ಕುತೂಹಲ ಕೆರಳಿಸಿದ ಯಶ್19
ಒಟ್ನಲ್ಲಿ ಯಶ್ ಮಾತುಗಳನ್ನು ಕೇಳುತ್ತಿದ್ದರೆ ಮತ್ತೊಂದು ಅದ್ಭುತ ಚಿತ್ರಕ್ಕೆ ವೇದಿಕೆ ಸಿದ್ಧವಾಗುತ್ತಿರುವುದು ಗೊತ್ತಾಗುತ್ತಿದೆ. ಈ ಹಿಂದೆ ನರ್ತನ್ ನಿರ್ದೇಶನದಲ್ಲಿ ಯಶ್ ನಟಿಸ್ತಾರೆ ಎನ್ನಲಾಗಿತ್ತು. ನರ್ತನ್ ಇನ್ನು ಕಥೆಯನ್ನು ತಿದ್ದಿತೀಡುವ ಕೆಲಸದಲ್ಲಿದ್ದಾರೆ. ಆದಷ್ಟು ಬೇಗ ಯಶ್19 ಅಪ್‌ಡೇಟ್ ಕೊಡುವಂತೆ ಅಭಿಮಾನಿಗಳು ಕೇಳುತ್ತಿದ್ದಾರೆ. ಶೀಘ್ರದಲ್ಲೇ ಬ್ರೇಕಿಂಗ್ ನ್ಯೂಸ್ ಸಿಗುವ ಸುಳಿವು ಸಿಗುತ್ತಿದೆ.