For Quick Alerts
  ALLOW NOTIFICATIONS  
  For Daily Alerts

  ಮೊದಲ ಬಾರಿ ತೆಲುಗು ಕಿರುತೆರೆಯಲ್ಲಿ ಕೆಜಿಎಫ್ ಪ್ರಸಾರ: ಟಿಆರ್‌ಪಿ ಬಂದಿದ್ದೆಷ್ಟು?

  |

  ದೇಶದ ಜನರ ಗಮನ ಸೆಳೆದ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 1 ಚಿತ್ರ ನೆರೆಯ ತೆಲುಗು ರಾಜ್ಯಗಳಲ್ಲಿ ಭರ್ಜರಿ ಹಿಟ್ ಆಗಿತ್ತು. ಚಿತ್ರಕ್ಕೆ ವ್ಯಾಪಕ ಪ್ರಶಂಸೆ ಕೂಡ ವ್ಯಕ್ತವಾಗಿತ್ತು. ಆದರೆ ಬಿಡುಗಡೆಯಾಗಿ ಒಂದೂವರೆ ವರ್ಷ ಕಳೆದರೂ ತೆಲುಗು ಕಿರುತೆರೆಯಲ್ಲಿ ಇದು ಪ್ರಸಾರ ಆಗಿರಲಿಲ್ಲ.

  Kannad Gothilla :ರಚಿತಾ ರಾಮ್ ಚಾನ್ಸ್ ಮಿಸ್ ಮಾಡ್ಕೊಂಡ್ರು ಹರಿಪ್ರಿಯಾ ಕ್ಯಾಚ್ ಹಾಕೊಂಡ್ರು |Mayuraa Raghavendra

  ಕಳೆದ ಭಾನುವಾರ ತೆಲುಗಿನ ಸ್ಟಾರ್ ಮಾ ಚಾನೆಲ್‌ನಲ್ಲಿ ಕೆಜಿಎಫ್ ಪ್ರಸಾರವಾಗಿತ್ತು. ಕೆಜಿಎಫ್ ಮೊದಲ ಬಾರಿಗೆ ಅಧಿಕೃತವಾಗಿ ತೆಲುಗು ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವುರಿಂದ ಸಹಜವಾಗಿಯೇ ಹೆಚ್ಚಿನ ಹೈಪ್ ಸಿಕ್ಕಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾದ ಚರ್ಚೆ ಜೋರಾಗಿ ನಡೆದಿತ್ತು. ಆಂಧ್ರಪ್ರದೇಶ ಮತ್ತು ತೆಲಂಗಾಣದ ಚಿತ್ರಮಂದಿರಗಳಲ್ಲಿ ಕೆಜಿಎಫ್ ಭರ್ಜರಿ ಪ್ರದರ್ಶನ ಕಂಡು ಉತ್ತಮ ಗಳಿಕೆ ಪಡೆದಿದ್ದರಿಂದ ಅದರ ಮೇಲಿನ ನಿರೀಕ್ಷೆಗಳು ಹೆಚ್ಚಾಗಿದ್ದವು. ಅಷ್ಟೇ ಅಲ್ಲ ಮಹೇಶ್ ಬಾಬು ನಟನೆಯ 'ಸರಿಲೇರು ನೀಕೆವ್ವರು' ಚಿತ್ರದ ಟಿಆರ್‌ಪಿಯನ್ನು ಹಿಂದಿಕ್ಕಲಿದೆ ಎಂದೇ ಹೇಳಲಾಗಿತ್ತು. ಮುಂದೆ ಓದಿ...

  ವ್ಯಾಪಕ ಪ್ರಚಾರ ಪಡೆದಿದ್ದ ಚಿತ್ರ

  ವ್ಯಾಪಕ ಪ್ರಚಾರ ಪಡೆದಿದ್ದ ಚಿತ್ರ

  ಜುಲೈ 5ರಂದು 'ಕೆಜಿಎಫ್ ಚಾಪ್ಟರ್ 1' ತೆಲುಗು ಆವೃತ್ತಿ ಸ್ಟಾರ್ ಮಾ ಚಾನೆಲ್‌ನಲ್ಲಿ ಪ್ರಸಾರವಾಗಿತ್ತು. ಅಂದು ಟಿವಿ ಮುಂದೆ ಹೆಚ್ಚು ಜನರು ಕೂರುವಂತೆ ಅವರನ್ನು ಸೆಳೆಯಲು ನಟ ಯಶ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್, ವಿಡಿಯೋಗಳನ್ನು ಕೂಡ ಮಾಡಿ ಪ್ರಚಾರ ನಡೆಸಿದ್ದರು.

  TRPಯಲ್ಲಿ ಮಹೇಶ್ ಬಾಬು 'ಸರಿಲೇರು ನೀಕೆವ್ವರು' ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡುತ್ತಾ ಯಶ್ 'ಕೆಜಿಎಫ್-1'?TRPಯಲ್ಲಿ ಮಹೇಶ್ ಬಾಬು 'ಸರಿಲೇರು ನೀಕೆವ್ವರು' ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡುತ್ತಾ ಯಶ್ 'ಕೆಜಿಎಫ್-1'?

  11.9 ಟಿಆರ್‌ಪಿ ಪಡೆದ ಕೆಜಿಎಫ್

  11.9 ಟಿಆರ್‌ಪಿ ಪಡೆದ ಕೆಜಿಎಫ್

  ಜುಲೈ 5ರ ಭಾನುವಾರ ಪ್ರಸಾರವಾದ ಕೆಜಿಎಫ್ 1ರ ತೆಲುಗು ಅವತರಣಿಕೆಯ ಟೆಲಿವಿಷನ್ ರೇಟಿಂಗ್ ಬಹಿರಂಗವಾಗಿದ್ದು, 11.9 ಟಿಆರ್‌ಪಿ ಪಡೆದುಕೊಂಡಿದೆ. ಇದು ಕಿರುತೆರೆಯ ಹಲವಾರು ಚಾನೆಲ್‌ಗಳ ನೂರಾರು ಕಾರ್ಯಕ್ರಮಗಳ ಮಧ್ಯೆ ಒಟ್ಟಾರೆ ಉತ್ತಮ ಗಳಿಕೆಯಾದರೂ, ನಿರೀಕ್ಷಿತ ಮಟ್ಟವನ್ನು ತಲುಪಿಲ್ಲ.

  ಸರಿಲೇರು ನೀಕೆವ್ವರು ದಾಖಲೆ

  ಸರಿಲೇರು ನೀಕೆವ್ವರು ದಾಖಲೆ

  ಮಹೇಶ್ ಬಾಬು ಅಭಿನಯದ 'ಸರಿಲೇರು ನೀಕೆವ್ವರು' ಚಿತ್ರ ಮೊದಲ ಬಾರಿಗೆ ಪ್ರಸಾರವಾದ ಸಂದರ್ಭದಲ್ಲಿ ತೆಲುಗು ಚಿತ್ರರಂಗದ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದು ಹಾಕಿ 23.4 ಟಿಆರ್‌ಪಿ ಪಡೆದು ದಾಖಲೆ ಸೃಷ್ಟಿಸಿತ್ತು. ಕೆಜಿಎಫ್‌ಗೆ ದೊರಕಿದ್ದ ಪ್ರಚಾರ ಮತ್ತು ಹೈಪ್ ಕಂಡು ಈ ದಾಖಲೆಯನ್ನು ಅದು ಮುರಿಯಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಅದು ಹುಸಿಯಾಗಿದೆ.

  ತೆಲುಗು ಸಿನಿಮಾ ಪ್ರೇಕ್ಷಕರಿಗೆ ಮನವಿ ಮಾಡಿದ ರಾಕಿಂಗ್‌ ಸ್ಟಾರ್ ಯಶ್ತೆಲುಗು ಸಿನಿಮಾ ಪ್ರೇಕ್ಷಕರಿಗೆ ಮನವಿ ಮಾಡಿದ ರಾಕಿಂಗ್‌ ಸ್ಟಾರ್ ಯಶ್

  ಟಿಆರ್‌ಪಿ ಕಡಿಮೆಯಾಗಲು ಕಾರಣ?

  ಟಿಆರ್‌ಪಿ ಕಡಿಮೆಯಾಗಲು ಕಾರಣ?

  ಬಿಡುಗಡೆಯಾಗಿ ಒಂದೂವರೆ ವರ್ಷದ ನಂತರ ಕಿರುತೆರೆಯಲ್ಲಿ ಪ್ರಸಾರವಾಗಿದೆ. ಅಲ್ಲದೆ, ಒಟಿಟಿ ಹಾಗೂ ಕಳ್ಳಮಾರ್ಗಗಳಲ್ಲಿ ಸಾವಿರಾರು ಮಂದಿ ಈ ಚಿತ್ರವನ್ನು ವೀಕ್ಷಿಸಿದ್ದಾರೆ. ಈ ಕಾರಣದಿಂದ ಅದಕ್ಕೆ ನಿರೀಕ್ಷಿತ ಟಿಆರ್‌ಪಿ ಸಿಕ್ಕಿಲ್ಲ. ಆದರೆ ಇದು ಕೂಡ ಉತ್ತಮ ಸಂಖ್ಯೆಯೇ ಎಂದು ಅಭಿಮಾನಿಗಳು ಸಮಾಧಾನಪಟ್ಟಿದ್ದಾರೆ.

  ಡಬ್ಬಿಂಗ್ ಚಿತ್ರಗಳ ಟಿಆರ್‌ಪಿ

  ಡಬ್ಬಿಂಗ್ ಚಿತ್ರಗಳ ಟಿಆರ್‌ಪಿ

  ತೆಲುಗು ಚಿತ್ರರಂಗದಲ್ಲಿ ಡಬ್ ಆದ ಸಿನಿಮಾಗಳ ಕಿರುತೆರೆ ಪ್ರಸಾರದಲ್ಲಿನ ದಾಖಲೆಯನ್ನು ಕೂಡ ಸರಿಗಟ್ಟಲು ಕೆಜಿಎಫ್ 1ಕ್ಕೆ ಸಾಧ್ಯವಾಗಿಲ್ಲ. ರೋಬೋ- 19.04 ಟಿಆರ್‌ಪಿ, ಬಿಚಗಾಡು- 18.76, ಕಬಾಲಿ- 14.52, ಕಾಂಚನಾ- 13.1 ಟಿಆರ್‌ಪಿ ಪಡೆದುಕೊಂಡಿದ್ದವು. ಈಗ ಕೆಜಿಎಫ್ ಚಾಪ್ಟರ್ 1 ಚಿತ್ರ 11.9 ರೇಟಿಂಗ್ ಗಳಿಸಿದೆ.

  ಕೆಜಿಎಫ್ 2 ಭಾರಿ ಡಿಮ್ಯಾಂಡ್: ಹಕ್ಕು ಖರೀದಿಗೆ ತೆಲುಗು ನಿರ್ಮಾಪಕರ ಸಾಲುಕೆಜಿಎಫ್ 2 ಭಾರಿ ಡಿಮ್ಯಾಂಡ್: ಹಕ್ಕು ಖರೀದಿಗೆ ತೆಲುಗು ನಿರ್ಮಾಪಕರ ಸಾಲು

  4.5 ಕೋಟಿಗೆ ಮಾರಾಟ

  4.5 ಕೋಟಿಗೆ ಮಾರಾಟ

  ಕೆಜಿಎಫ್‌ನ ತೆಲುಗು ಉಪಗ್ರಹ ಹಕ್ಕುಗಳನ್ನು ಸ್ಟಾರ್ ಮಾ ವಾಹಿನಿ 4.5 ಕೋಟಿ ರೂ.ಗೆ ಖರೀದಿಸಿತ್ತು. ಅದು ವಿನಿಯೋಗಿಸಿರುವ ಹಣಕ್ಕೇನೂ ಮೋಸವಾಗುವುದಿಲ್ಲ ಎನ್ನಲಾಗಿದೆ. ತೆಲುಗಿನ ಚಿತ್ರಮಂದಿರಗಳಲ್ಲಿ ಕೆಜಿಎಫ್ 23ಕೋಟಿ ಮತ್ತು ಹಿಂದಿ ಆವೃತ್ತಿಯಿಂದ 45 ಕೋಟಿ ರೂ ಗಳಿಕೆ ಕಂಡಿತ್ತು ಎನ್ನಲಾಗಿದೆ.

  English summary
  KGF Chapter 1 was telecasted on July 5th in Star Maa Tv has got 11.9 TRP in its television premier.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X