For Quick Alerts
  ALLOW NOTIFICATIONS  
  For Daily Alerts

  ಮೈಸೂರಿನ ಇನ್ಫೋಸಿಸ್ನಲ್ಲಿ ಕೆಜಿಎಫ್ ಚಾಪ್ಟರ್ 2 ಶೂಟಿಂಗ್

  |
  KGF2 in Infosys : ಮೈಸೂರಿನ ಇನ್ಫೋಸಿಸ್ನಲ್ಲಿ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ | Yash | Filmibeat Kannada

  ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಇದೇ ವರ್ಷದಲ್ಲಿ ತೆರೆಗೆ ಬರಲು ಸಜ್ಜಾಗುತ್ತಿರುವ ಈ ಚಿತ್ರ ಭರದಿಂದ ಶೂಟಿಂಗ್ ಮಾಡುತ್ತಿದೆ. ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಸದ್ಯಕ್ಕೆ ಮೈಸೂರಿನಲ್ಲಿ ಬೀಡುಬಿಟ್ಟಿದೆ.

  ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಕೆಲವು ದೃಶ್ಯಗಳ ಚಿತ್ರೀಕರಣ ಮಾಡಲಾಗಿದೆ. ಇನ್ಫೋಸಿಸ್ ಆವರಣದಲ್ಲಿ ಯಶ್ ಅವರ ಭಾಗದ ದೃಶ್ಯಗಳ ಚಿತ್ರೀಕರಣ ಮಾಡಲಾಗಿದೆ. ಕೆಲವು ಫೋಟೋಗಳು ಬಹಿರಂಗವಾಗಿದೆ.

  ಕೊನೆಯ ಹಂತಕ್ಕೆ ತಲುಪಿದ 'ಕೆಜಿಎಫ್-2' ಚಿತ್ರೀಕರಣ: ಹೈದರಾಬಾದ್ ಗೆ ಹೊರಡಲಿದೆ ಚಿತ್ರತಂಡಕೊನೆಯ ಹಂತಕ್ಕೆ ತಲುಪಿದ 'ಕೆಜಿಎಫ್-2' ಚಿತ್ರೀಕರಣ: ಹೈದರಾಬಾದ್ ಗೆ ಹೊರಡಲಿದೆ ಚಿತ್ರತಂಡ

  ಇದಕ್ಕೂ ಮುಂಚೆ ಮೈಸೂರಿನ ಲಲಿತ್ ಮಹಲ್ ನಲ್ಲಿ ಕೆಲವು ದೃಶ್ಯ ಶೂಟ್ ಮಾಡಲಾಗಿತ್ತು. ನಾಯಕಿ ಶ್ರೀನಿಧಿ ಶೆಟ್ಟಿ ಮತ್ತು ಯಶ್ ಭಾಗದ ದೃಶ್ಯಗಳನ್ನು ಅಲ್ಲಿ ಚಿತ್ರೀಕರಿಸಲಾಗಿತ್ತು. ಮೈಸೂರಿನಲ್ಲಿ ಮುಗಿಯುತ್ತಿದ್ದಂತೆ ಹೈದರಾಬಾದ್ ಗೆ ಹಾರಲಿದೆ ಚಿತ್ರತಂಡ.

  ಹೈದರಾಬಾದ್ ನಲ್ಲಿ ಕೆಜಿಎಫ್ ಚಾಪ್ಟರ್ 2 ಬಹುಮುಖ್ಯ ಚಿತ್ರಗಳ ಶೂಟಿಂಗ್ ಮಾಡಲಾಗಿದೆ. ಅದಾದ ಬಳಿಕ ಕೋಲಾರ ಮತ್ತು ಬೆಂಗಳೂರಿನಲ್ಲೂ ಬಾಕಿಯಿರುವ ಶೂಟಿಂಗ್ ಮಾಡಲು ನಿರ್ಧರಿಸದೆಯಂತೆ.

  ಕೆಜಿಎಫ್ ಟೀಸರ್ ಬಂದಿಲ್ಲ, ಆದರೆ ಭರ್ಜರಿ ಡೈಲಾಗ್ ಇಲ್ಲಿದೆ ನೋಡಿಕೆಜಿಎಫ್ ಟೀಸರ್ ಬಂದಿಲ್ಲ, ಆದರೆ ಭರ್ಜರಿ ಡೈಲಾಗ್ ಇಲ್ಲಿದೆ ನೋಡಿ

  ಬಾಲಿವುಡ್ ನಟ ಸಂಜಯ್ ದತ್, ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ಜೊತೆ ಶ್ರೀನಿಧಿ ಶೆಟ್ಟಿ, ಮಾಳವಿಕಾ ಅವಿನಾಶ್, ಅನಂತ್ ನಾಗ್, ವಸಿಷ್ಠ ಸಿಂಹ ಪಾತ್ರಗಳು ಮುಂದುವರಿಯಲಿದೆ. ರವಿ ಬಸ್ರೂರು ಸಂಗೀತ ಈ ಚಿತ್ರದಲ್ಲು ಇದೆ. ಪ್ರಶಾಂತ್ ನೀಲ್ ನಿರ್ದೇಶನ ಮತ್ತು ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಚಾಪ್ಟರ್ 2 ಬರಲಿದೆ.

  English summary
  Rocking star Yash starrer Kgf chapter 2 movie shooting going in mysore infosys campus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X