For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆಗೂ ಮುನ್ನ ಮತ್ತೊಂದು ದಾಖಲೆ ಬರೆದ 'ಕೆಜಿಎಫ್ ಚಾಪ್ಟರ್ 2'

  |

  ದೇಶದಾದ್ಯಂತ ಸಿನಿಮಾ ಪ್ರೇಮಿಗಳಲ್ಲಿ ಕಾತರ ಮೂಡಿಸಿರುವ 'ಕೆಜಿಎಫ್ ಚಾಪ್ಟರ್ 2' ಈ ಹಿಂದೆ ನಿಗದಿಯಾದ ದಿನಾಂಕದಂದು ಬಿಡುಗಡೆಯಾಗುವುದು ಸಾಧ್ಯವೇ ಎಂಬ ಅನುಮಾನ ಮೂಡಿದೆ. ಅಕ್ಟೋಬರ್ 23ರಂದು ಸಿನಿಮಾ ಬಿಡುಗಡೆ ಮಾಡಲಾಗುವುದು ಎಂದು ಈ ಹಿಂದೆ ಚಿತ್ರತಂಡ ಘೋಷಿಸಿತ್ತು. ಕೊರೊನಾ ವೈರಸ್ ಲಾಕ್ ಡೌನ್ ಅವಧಿಯಲ್ಲಿ ಚಿತ್ರೀಕರಣ ಪೂರ್ಣಗೊಂಡಿರುವ ಭಾಗದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ನಡೆಸಲಾಗಿದೆ.

  ಆದರೆ ಇನ್ನೂ 25 ದಿನಗಳ ಚಿತ್ರೀಕರಣ ಬಾಕಿ ಇದ್ದು, ಇದಕ್ಕೆ ಸಾಕಷ್ಟು ತಯಾರಿ ನಡೆಯಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಚಿತ್ರೀಕರಣ ಆರಂಭಿಸುವುದು ಸಾಧ್ಯವಿಲ್ಲ. ಸರ್ಕಾರ ವಿಧಿಸಿರುವ ಷರತ್ತುಗಳಿಗೆ ಅನುಗುಣವಾಗಿ ಚಿತ್ರೀಕರಣ ನಡೆಸುವುದು ಕಷ್ಟ. ಏಕೆಂದರೆ ಚಿತ್ರೀಕರಣಕ್ಕೆ ಹೆಚ್ಚಿನ ತಂತ್ರಜ್ಞರು ಮತ್ತು ಕಲಾವಿದರನ್ನು ಬಳಸಿಕೊಳ್ಳಲೇಬೇಕಾಗಿದೆ. ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ಸಿನಿಮಾ ಮಾಡುವಂತಾದರೆ ಚಿತ್ರಕಥೆಯನ್ನೇ ಬದಲಿಸಬೇಕಾಗುತ್ತದೆ. ಈ ಎಲ್ಲ ಸಂಕಟಗಳ ನಡುವೆ ಕೆಜಿಎಫ್ ಚಾಪ್ಟರ್ 2 ವಿಶೇಷ ಸಾಧನೆಯೊಂದನ್ನು ಮಾಡಿದೆ. ಮುಂದೆ ಓದಿ...

  ಕೆಜಿಎಫ್ 2 ಗಾಗಿ ಕಾದಿರುವ ಪ್ರೇಕ್ಷಕರು

  ಕೆಜಿಎಫ್ 2 ಗಾಗಿ ಕಾದಿರುವ ಪ್ರೇಕ್ಷಕರು

  ಕೆಜಿಎಫ್ ಚಾಪ್ಟರ್ 2 ಇದೇ ಅಕ್ಟೋಬರ್ 23ರಂದು ತೆರೆಗೆ ಬರಲಿದೆ ಎಂದು ಮಾರ್ಚ್ 13ರಂದು ಅಧಿಕೃತವಾಗಿ ಘೋಷಿಸಲಾಗಿತ್ತು. ಇದು ಅಭಿಮಾನಿಗಳಲ್ಲಿ ಕಾತರವನ್ನು ಹೆಚ್ಚಿಸಿದೆ. ಬಾಲಿವುಡ್‌ನಲ್ಲಿಯೂ ಅನೇಕ ಸ್ಟಾರ್ ನಟರ ದೊಡ್ಡ ದೊಡ್ಡ ಸಿನಿಮಾಗಳು ತೆರೆಕಾಣಲು ಸಜ್ಜಾಗಿವೆ. ಇನ್ನು ಕೆಲವು ಅರ್ಧ ಚಿತ್ರೀಕರಣ ಮುಗಿಸಿ ಉಳಿದರ್ಧ ಉಳಿಸಿಕೊಂಡಿವೆ. ಆದರೆ ಹಿಂದಿ ಸಿನಿಮಾ ಪ್ರೇಕ್ಷಕರು ಕೂಡ ಕಾದಿರುವುದು ಕನ್ನಡಿಗರ ಕೆಜಿಎಫ್ ಚಿತ್ರಕ್ಕಾಗಿ.

  ಮೊದಲ ಬಾರಿ ತೆಲುಗು ಕಿರುತೆರೆಯಲ್ಲಿ ಕೆಜಿಎಫ್ ಪ್ರಸಾರ: ಟಿಆರ್‌ಪಿ ಬಂದಿದ್ದೆಷ್ಟು?ಮೊದಲ ಬಾರಿ ತೆಲುಗು ಕಿರುತೆರೆಯಲ್ಲಿ ಕೆಜಿಎಫ್ ಪ್ರಸಾರ: ಟಿಆರ್‌ಪಿ ಬಂದಿದ್ದೆಷ್ಟು?

  ಅತಿ ಹೆಚ್ಚು ಕಾದಿರುವ ಚಿತ್ರ

  ಅತಿ ಹೆಚ್ಚು ಕಾದಿರುವ ಚಿತ್ರ

  ಓರ್ಮ್ಯಾಕ್ಸ್ ಮೀಡಿಯಾ ಸಂಸ್ಥೆಯು ಪ್ರತಿ ತಿಂಗಳೂ ಒಂದು ಸಮೀಕ್ಷೆ ನಡೆಸುತ್ತದೆ. ಅದು ಹಿಂದಿ ಚಿತ್ರರಂಗದ ಸಿನಿಮಾಗಳಲ್ಲಿ ಯಾವ ಚಿತ್ರಕ್ಕೆ ನೀವು ಹೆಚ್ಚು ಕಾತರದಿಂದ ಕಾದಿದ್ದೀರಿ ಎಂದು. ವಿಶೇಷವೆಂದರೆ ಕಳೆದ ಫೆಬ್ರವರಿಯಿಂದಲೂ ಈ ಪಟ್ಟಿಯಲ್ಲಿ ಕೆಜಿಎಫ್ ಚಾಪ್ಟರ್ 2 ಮೊದಲ ಸ್ಥಾನದಲ್ಲಿದೆ.

  ಆರು ತಿಂಗಳಿಂದ ಮೊದಲ ಸ್ಥಾನ

  ಆರು ತಿಂಗಳಿಂದ ಮೊದಲ ಸ್ಥಾನ

  ಅಂದರೆ ಹಿಂದಿ ಪ್ರೇಕ್ಷಕರು ಅತಿ ಕಾತರದಿಂದ ಕಾದಿರುವ ಸಿನಿಮಾ ಎಂದರೆ ಕೆಜಿಎಫ್ 2 ಚಿತ್ರದ ಹಿಂದಿ ಆವೃತ್ತಿ. ಟಾಪ್ ಫೈವ್ ಸಿನಿಮಾಗಳ ಪಟ್ಟಿಯಲ್ಲಿ ಫೆಬ್ರವರಿಯಿಂದ ಜುಲೈವರೆಗೂ ಕೆಜಿಎಫ್ ಮೊದಲ ಸ್ಥಾನವನ್ನು ಕಾಪಾಡಿಕೊಂಡು ಬಂದಿದೆ. ಮುಖ್ಯ ಟ್ರೇಲರ್ ಬಿಡುಗಡೆಯಾಗದ ಚಿತ್ರಗಳನ್ನು ಇದರಲ್ಲಿ ಪರಿಗಣಿಸಲಾಗಿದೆ.

  'KGF-2'ನಲ್ಲಿ ಸುದೀಪ್ ಮಾಡಬೇಕಿದ್ದ ಪಾತ್ರ ಸಂಜಯ್ ದತ್ ಪಾಲಾಯಿತಾ? ಕಿಚ್ಚ ಹೇಳಿದ್ದೇನು?'KGF-2'ನಲ್ಲಿ ಸುದೀಪ್ ಮಾಡಬೇಕಿದ್ದ ಪಾತ್ರ ಸಂಜಯ್ ದತ್ ಪಾಲಾಯಿತಾ? ಕಿಚ್ಚ ಹೇಳಿದ್ದೇನು?

  ಸ್ಥಾನ ಬದಲಿಸಿಕೊಂಡ ಚಿತ್ರಗಳು

  ಸ್ಥಾನ ಬದಲಿಸಿಕೊಂಡ ಚಿತ್ರಗಳು

  ಅತಿ ಹೆಚ್ಚು ಕಾದಿರುವ ಹಿಂದಿ ಸಿನಿಮಾಗಳ ಪಟ್ಟಿಯಲ್ಲಿ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಕೂಡ ಫೆಬ್ರವರಿಯಲ್ಲಿ ಐದನೆಯ ಸ್ಥಾನ ಪಡೆದಿತ್ತು. ಆದರೆ ನಂತರ ಅದು ಸ್ಥಾನ ಕಳೆದುಕೊಂಡಿದೆ. ಗೋಲ್‌ ಮಾಲ್ 5, ಬ್ರಹ್ಮಾಸ್ತ್ರ, 83, ಲಾಲ್ ಸಿಂಗ್ ಛಡ್ಡಾ, ಸತ್ಯಮೇವ ಜಯತೇ 2 ಹಾಗೂ ಸೂರ್ಯವಂಶಿ ಚಿತ್ರಗಳು ಈ ಆರು ತಿಂಗಳಲ್ಲಿ ತಮ್ಮ ಸ್ಥಾನವನ್ನು ಬದಲಿಸಿಕೊಂಡಿವೆ. ಆದರೆ ಈ ಯಾವ ಚಿತ್ರವೂ ಕೆಜಿಎಫ್ 2ಅನ್ನು ಮೀರಿಸಿಲ್ಲ. ಸೂರ್ಯವಂಶಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿರುವುದರಿಂದ ಅದನ್ನು ಪಟ್ಟಿಯಿಂದ ಹೊರಗಿಡಲಾಗಿದೆ.

  'ಅದು ನಮ್ಮ ಸಿನಿಮಾ ವೃತ್ತಿಯ ಆರಂಭವಷ್ಟೇ ಆಗಿರಲಿಲ್ಲ': ಮೊದಲ ಸಿನಿಮಾ ಸ್ಮರಿಸಿದ ಯಶ್'ಅದು ನಮ್ಮ ಸಿನಿಮಾ ವೃತ್ತಿಯ ಆರಂಭವಷ್ಟೇ ಆಗಿರಲಿಲ್ಲ': ಮೊದಲ ಸಿನಿಮಾ ಸ್ಮರಿಸಿದ ಯಶ್

  ಸಂಜಯ್ ದತ್ ಜನ್ಮದಿನಕ್ಕೆ ಉಡುಗೊರೆ?

  ಸಂಜಯ್ ದತ್ ಜನ್ಮದಿನಕ್ಕೆ ಉಡುಗೊರೆ?

  ಈ ನಡುವೆ ಕೆಜಿಎಫ್ ಚಿತ್ರತಂಡ 'ಅಧೀರ'ನ ಜನ್ಮದಿನಕ್ಕೆ ವಿಶೇಷ ಉಡುಗೊರೆ ನೀಡಲು ಮುಂದಾಗಿದೆ. ಜುಲೈ 29ರಂದು ಸಂಜಯ್ ದತ್ ಅವರ 61ನೇ ಜನ್ಮದಿನದಂದು ಕೆಜಿಎಫ್‌ನ ಅಧೀರನ ಲುಕ್ ಬಿಡುಗಡೆ ಮಾಡಲು ಚಿತ್ರತಂಡ ಉದ್ದೇಶಿಸಿದೆ ಎನ್ನಲಾಗಿದೆ. ಆದರೆ ಇದು ಪೋಸ್ಟರ್, ಟೀಸರ್ ಅಥವಾ ಟ್ರೇಲರ್ ರೂಪದಲ್ಲಿ ಇರಲಿದೆಯೇ ಎನ್ನುವುದು ಖಚಿತವಾಗಿಲ್ಲ.

  English summary
  KGF Chapter is in the top position of the Ormax Media's monthly charts of most awaited Hindi films since February.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X