For Quick Alerts
  ALLOW NOTIFICATIONS  
  For Daily Alerts

  ಕಬಾಲಿ, ರೋಬೋ ದಾಖಲೆ ಅಳಿಸಿ ಹೊಸ ದಾಖಲೆ ಬರೆದ ಕೆಜಿಎಫ್

  |
  KGF Movie : ಹೊಸ ದಾಖಲೆ ನಿರ್ಮಿಸಿದ ಯಶ್ ಕೆಜಿಎಫ್ ಸಿನಿಮಾ | FILMIBEAT KANNADA

  ಕೆಜಿಎಫ್ ಚಿತ್ರದ ಯಶಸ್ಸಿನ ಓಟಕ್ಕೆ ರಜನಿಕಾಂತ್ ಚಿತ್ರಗಳು ಉಡೀಸ್ ಆಗಿದೆ. ಹಿಂದಿ ಬಾಕ್ಸ್ ಆಫೀಸ್ ನಲ್ಲಿ ತಲೈವಾ ಸಿನಿಮಾಗಳ ಹೆಸರಿನಲ್ಲಿದ್ದ ದಾಖಲೆಯನ್ನ ಅಳಿಸಿ ಹಾಕಿ ರಾಕಿಂಗ್ ಸ್ಟಾರ್ ಯಶ್ ಹೊಸ ರೆಕಾರ್ಡ್ ಬರೆದಿದ್ದಾರೆ.

  ಶಾರೂಖ್ ಖಾನ್ ಅಭಿನಯದ 'ಜೀರೋ' ಚಿತ್ರದ ಎದುರು ಕೆಜಿಎಫ್ ಮಕಾಡೆ ಮಲಗುತ್ತೆ ಎಂದು ಹೇಳಿಕೊಂಡು ಕಾಲೆಳೆದವರೆಲ್ಲಾ ಇಂದು ಮುಖಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಯಾಕಂದ್ರೆ, ಜೀರೋ ಚಿತ್ರವನ್ನ ಹಿಂದಿಕ್ಕಿ ಕೆಜಿಎಫ್ ಅಬ್ಬರಿಸುತ್ತಿದೆ.

  ಕಬಾಲಿ, ರೋಬೋ ದಾಖಲೆ ಬ್ರೇಕ್ ಮಾಡುವತ್ತಾ ಕೆಜಿಎಫ್ ಹೆಜ್ಜೆ.!

  ಸದ್ಯ, ಹಿಂದಿ ಭಾಷೆಯಲ್ಲಿ ಡಬ್ ಆದ ಚಿತ್ರಗಳ ಪೈಕಿ ಕೆಜಿಎಫ್ ಸಿನಿಮಾ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಹಾಗಿದ್ರೆ, ಎರಡು ವಾರದ ಅಂತ್ಯಕ್ಕೆ ಕೆಜಿಎಫ್ ಕಲೆಕ್ಷನ್ ಎಷ್ಟು? ಕಬಾಲಿ ಮತ್ತು ಎಂಥಿರನ್ ದಾಖಲೆ ಬ್ರೇಕ್ ಮಾಡಿದ್ದು ಹೇಗೆ? ಮುಂದೆ ಓದಿ.....

  30 ಕೋಟಿ ಬಾಚಿದ ಕೆಜಿಎಫ್

  30 ಕೋಟಿ ಬಾಚಿದ ಕೆಜಿಎಫ್

  ಹಿಂದಿಯಲ್ಲಿ ಕೆಜಿಎಫ್ ಒಳ್ಳೆಯ ಕಲೆಕ್ಷನ್ ಮಾಡ್ತಿದೆ. 12 ದಿನಗಳಲ್ಲಿ ಕೆಜಿಎಫ್ ಹಿಂದಿ ಸಿನಿಮಾ ಒಟ್ಟು 30.45 ಕೋಟಿ ಗಳಿಸಿ ಇತಿಹಾಸ ನಿರ್ಮಿಸಿದೆ. ಈ ಮೂಲಕ ಹಿಂದಿಯಲ್ಲಿ ಡಬ್ ಆದ ಚಿತ್ರಗಳ ಪೈಕಿ ಕೆಜಿಎಫ್ ನಾಲ್ಕನೇ ಸ್ಥಾನದಲ್ಲಿದೆ.

  ಕೆಜಿಎಫ್ ಹಿಂದಿ 7ನೇ ದಿನ ಕಲೆಕ್ಷನ್ ಎಷ್ಟು?

  'ಕಬಾಲಿ' ಗಳಿಸಿದ್ದು ಎಷ್ಟು ಕೋಟಿ?

  'ಕಬಾಲಿ' ಗಳಿಸಿದ್ದು ಎಷ್ಟು ಕೋಟಿ?

  ರಜನಿಕಾಂತ್ ಅಭಿನಯದ ಕಬಾಲಿ ಸಿನಿಮಾ ಹಿಂದಿ ವರ್ಷನ್ ನಲ್ಲಿ 24 ಕೋಟಿ ಗಳಿಸಿತ್ತು. ಅದಕ್ಕೂ ಮುಂಚೆ ತೆರೆಕಂಡಿದ್ದ ಎಂಥಿರನ್ 22 ಕೋಟಿ ಬಾಚಿಕೊಂಡಿತ್ತು. ಇದೀಗ, ಈ ಎರಡು ಚಿತ್ರಗಳ ಕಲೆಕ್ಷನ್ ದಾಖಲೆಯನ್ನ ಕೆಜಿಎಫ್ ಸಿನಿಮಾ ಅಳಿಸಿಹಾಕಿದೆ.

  ಮೊದಲ ದಿನಕ್ಕಿಂತ 6ನೇ ದಿನ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಕೆಜಿಎಫ್

  ದಿನದ ಲೆಕ್ಕಾಚಾರದಲ್ಲಿ ಕೆಜಿಎಫ್ ಗಳಿಸಿದ್ದು?

  ದಿನದ ಲೆಕ್ಕಾಚಾರದಲ್ಲಿ ಕೆಜಿಎಫ್ ಗಳಿಸಿದ್ದು?

  ಮೊದಲ ದಿನ 2.10 ಕೋಟಿ, ಎರಡನೇ ದಿನ 3 ಕೋಟಿ, ಮೂರನೇ ದಿನ 4.10 ಕೋಟಿ, ನಾಲ್ಕನೇ ದಿನ 2.90 ಕೋಟಿ, ಐದನೇ ದಿನ 4.35 ಕೋಟಿ, ಆರನೇ ದಿನ 2.6 ಕೋಟಿ, ಏಳನೇ ದಿನ 2.40 ಕೋಟಿ, ಏಂಟನೇ ದಿನ 1.25 ಕೋಟಿ, ಒಂಭತ್ತನೇ ದಿನ 1.75 ಕೋಟಿ, ಹತ್ತನೇ ದಿನ 2.25 ಕೋಟಿ, ಹನ್ನೊಂದನೇ ದಿನ 1.50 ಕೋಟಿ, ಹನ್ನೆರಡನೇ ದಿನ 2.25 ಕೋಟಿ ಗಳಿಸಿದೆ.

  'ಕ್ರಿಸ್ ಮಸ್' ಹಬ್ಬಕ್ಕೆ 'ಕೆಜಿಎಫ್' ದಾಖಲೆ: ಹಿಂದಿ ಬಾಕ್ಸ್ ಆಫೀಸ್ ಉಡೀಸ್.!

  ಕೆಜಿಎಫ್ ಒಟ್ಟಾರೆ ಕಲೆಕ್ಷನ್ ಎಷ್ಟು?

  ಕೆಜಿಎಫ್ ಒಟ್ಟಾರೆ ಕಲೆಕ್ಷನ್ ಎಷ್ಟು?

  ಸದ್ಯ ಕೆಜಿಎಫ್ ಸಿನಿಮಾ ರಿಲೀಸ್ ಆಗಿ 12 ಆಗಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಇಲ್ಲಿಯವರೆಗೂ ಕೆಜಿಎಫ್ ಒಟ್ಟಾರೆ 150 ಗಳಿಕೆ ಕಂಡು ಮುನ್ನುಗ್ಗುತ್ತಿದೆ ಎಂದು ಹೇಳಲಾಗ್ತಿದೆ. ಈ ಯಶಸ್ಸು ಹೀಗೆ ಮುಂದುವರೆದರೇ 200 ಕೋಟಿ ಗಡಿದಾಟುವ ಎಲ್ಲ ಸಾಧ್ಯತೆಗಳಿವೆ.

  ನೂರು ಕೋಟಿ ಕ್ಲಬ್ ಗೆ 'ಕೆಜಿಎಫ್': ಎಲ್ಲಿಂದ ಎಷ್ಟು ಹಣ ಬಂತು.?

  English summary
  Hindi version of KGF: Chapter 1 went past the Rs 30 crore-mark. After a 12-day run, its total collection stands at Rs 30.45 crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X