'ಕಬ್ಜ' ಮಾಡಲು ಚಂದ್ರುಗೆ ಸ್ಫೂರ್ತಿ ನೀಡಿದ್ದು ಈ ಸಿನಿಮಾ

ನಿರ್ದೇಶಕ ಆರ್ ಚಂದ್ರು ಮತ್ತು ನಟ ಉಪೇಂದ್ರ ಮತ್ತೆ ಒಂದಾಗಿದ್ದಾರೆ. ಅವರ ಕಾಂಬಿನೇಶನ್ ಹ್ಯಾಟ್ರಿಕ್ ಸಿನಿಮಾ 'ಕಬ್ಜ' ಇಂದು ಮುಹೂರ್ತ ಆಗಿದೆ.

'ಕಬ್ಜ' ದೊಡ್ಡ ಮಟ್ಟದಲ್ಲಿ ನಿರ್ಮಾಣ ಆಗುತ್ತಿದ್ದು, ಪ್ಯಾನ್ ಇಂಡಿಯಾದಲ್ಲಿ ಬಿಡುಗಡೆ ಆಗಲಿದೆ. ಈ ರೀತಿ ದೊಡ್ಡ ಮಟ್ಟದ ಯೋಚನೆ ಮಾಡಲು ಚಂದ್ರುಗೆ ಸಹಾಯ ಮಾಡಿದ್ದು, 'ಕೆಜಿಎಫ್' ಸಿನಿಮಾವಂತೆ. ''ಕೆಜಿಎಫ್' ಚಿತ್ರ ನಾವು ಕೂಡ ನೂರು ಕೋಟಿ ಸಿನಿಮಾ ಮಾಡಬಹುದು ಎಂದು ತೋರಿಸಿಕೊಟ್ಟಿದೆ. ಆ ಸಿನಿಮಾವೇ ನನಗೆ ಸ್ಫೂರ್ತಿ'' ಎಂದು ಆರ್ ಚಂದ್ರು ಹೇಳಿಕೊಂಡಿದ್ದಾರೆ.

ಆರ್ ಚಂದ್ರು ಈ ಹಿಂದೆ ಎಲ್ಲ ಸಿನಿಮಾಗಳಲ್ಲಿ ಒಳ್ಳೆಯ ಬ್ಯುಸಿನೆಸ್ ಮಾಡಿದ್ದಾರೆ. 'ಕಬ್ಜ' ಸಿನಿಮಾದಲ್ಲಿಯೂ ಆ ದೃಷ್ಟಿಯಿಂದ ಯೋಚನೆ ಮಾಡಲಾಗಿದೆಯಂತೆ. ತೆಲುಗು, ತಮಿಳು, ಹಿಂದಿ ನಿರ್ಮಾಣ ಸಂಸ್ಥೆ ಜೊತೆಗೆ ಮಾತುಕತೆ ನಡೆಸಿದ್ದಾರಂತೆ.

Kgf is my inspiration says R Chandru

ಅಂದಹಾಗೆ, ಇಂದು 'ಕಬ್ಜ' ಸಿನಿಮಾ ಲಾಂಚ್ ಆಗಿದೆ. ಶಿವರಾಜ್ ಕುಮಾರ್ ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಶುಭಾರಂಭ ಮಾಡಿದ್ದಾರೆ. ಆರ್ ಚಂದ್ರು ಕುಟುಂಬ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ.

Kgf is my inspiration says R Chandru

ಈ ಸಿನಿಮಾಗಾಗಿ ತೆಲುಗು ನಟಿ ಕಾಜಲ್ ಅಗರ್ವಾಲ್ ಕನ್ನಡಕ್ಕೆ ಬರುತ್ತಾರೆ ಎನ್ನುವ ಸುದ್ದಿ ಇದೆ. 'ಕಬ್ಜ' ಒಂದು ಅಂಡರ್ ವರ್ಲ್ಡ್ ಸಿನಿಮಾವಾಗಿದ್ದು, 80ರ ದಶಕದ ನೈಜ ಘಟನೆ ಆಧಾರಿತವಾಗಿದೆ.

English summary
Kgf is my inspiration says 'Kabzaa' director R Chandru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X