For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್‌ ಸಿನಿಮಾಕ್ಕೆ ಪೈಪೋಟಿಯೇ ಇಲ್ಲ: ಟಿಕ್‌ ಟಾಕ್‌ ನಲ್ಲಿ ಹೊಸ ದಾಖಲೆ

  |

  ಕನ್ನಡದ ಕೆಜಿಎಫ್ ಸಿನಿಮಾ ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ. ಕೆಜಿಎಫ್‌ ನ ಕ್ರೇಜ್ ಯಾವ ಮಟ್ಟದಲ್ಲಿದೆ ಎಂಬುದು ಸುಲಭಕ್ಕೆ ಅಂದಾಜಿಗೆ ಸಿಗುವಂತದಲ್ಲ.

  ಬಾಲಿವುಡ್‌ ಸಿನಿಮಾಗಳಿಗೂ ವ್ಯಕ್ತವಾಗದ ಕುತೂಹಲ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್‌ ಸಿನಿಮಾದ ಬಗ್ಗೆ ಮೂಡಿದೆ. ಕೆಜಿಎಫ್ ನ ಕ್ರೇಜ್ ಬಾಲಿವುಡ್ ಅನ್ನೂ ಬೆರಗಾಗಿಸಿದೆ.

  ಕನ್ನಡ ಸಿನಿಮಾಕ್ಕಾಗಿ ದೇಶವೇ ಕಾಯುತ್ತಿದೆ: ಕುತೂಹಲ ಪ್ರಕಟಿಸಿರುವ ರಾಜ್ಯಗಳ ಪಟ್ಟಿಕನ್ನಡ ಸಿನಿಮಾಕ್ಕಾಗಿ ದೇಶವೇ ಕಾಯುತ್ತಿದೆ: ಕುತೂಹಲ ಪ್ರಕಟಿಸಿರುವ ರಾಜ್ಯಗಳ ಪಟ್ಟಿ

  ಗಳಿಕೆಯಲ್ಲಿ ದಾಖಲೆ ಬರೆದ ಕೆಜಿಎಫ್ ಸಿನಿಮಾ ಇನ್ನೂ ಇತರ ದಾಖಲೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಿದೆ. ಟಿಕ್‌ ಟಾಕ್‌ ನಲ್ಲಿ ಹೊಸದೊಂದು ದಾಖಲೆಯೊಂದನ್ನು ಕೆಜಿಎಫ್ ಬರೆದಿದೆ.

  ಟಿಕ್‌ಟಾಕ್‌ನಲ್ಲಿ ಹೊಸ ದಾಖಲೆ ಕೆಜಿಎಫ್ ಹೆಸರಿಗೆ

  ಟಿಕ್‌ಟಾಕ್‌ನಲ್ಲಿ ಹೊಸ ದಾಖಲೆ ಕೆಜಿಎಫ್ ಹೆಸರಿಗೆ

  ಕೆಲವು ದಿನಗಳ ಹಿಂದಷ್ಟೆ ಗೂಗಲ್‌ ನಲ್ಲಿ ಹೆಚ್ಚು ಹುಡುಕಾಟವಾದ ಭಾರತೀಯ ಸಿನಿಮಾ ಎನಿಸಿಕೊಂಡಿದ್ದ ಕೆಜಿಎಫ್ ಈಗ ಟಿಕ್‌ ಟಾಕ್‌ನಲ್ಲಿಯೂ ದಾಖಲೆ ನಿರ್ಮಿಸಿದ್ದು, ಬೇರೆ ಸಿನಿಮಾಗಳನ್ನು ಹಿಂದಕ್ಕಿಕ್ಕಿದೆ.

  ಕೆಜಿಎಫ್ ಹ್ಯಾಷ್‌ ಟ್ಯಾಗ್ ಅತಿ ಹೆಚ್ಚಾಗಿ ಬಳಸಿದ್ದಾರೆ

  ಕೆಜಿಎಫ್ ಹ್ಯಾಷ್‌ ಟ್ಯಾಗ್ ಅತಿ ಹೆಚ್ಚಾಗಿ ಬಳಸಿದ್ದಾರೆ

  ಟಿಕ್‌ಟಾಕ್‌ ನಲ್ಲಿ ಕೆಜಿಎಫ್ ಹ್ಯಾಷ್‌ಟ್ಯಾಗ್ ಅಡಿಯಲ್ಲಿ ಅತಿ ಹೆಚ್ಚು ಮಂದಿ ಪೋಸ್ಟ್ ಮಾಡಿದ್ದಾರಂತೆ. ಬರೋಬ್ಬರಿ 350 ಕೋಟಿ ಬಾರಿ ಕೆಜಿಎಫ್ ಹ್ಯಾಷ್‌ಟ್ಯಾಗ್ ಬಳಸಿ ಪೋಸ್ಟ್ ಮಾಡಿದ್ದಾರೆ. ಕೆಜಿಎಫ್‌ ಗೆ ಸನಿಹವಾಗಿ ಯಾವ ಸಿನಿಮಾದ ಹ್ಯಾಷ್‌ಟ್ಯಾಗ್ ಸಹ ಇಲ್ಲ.

  ಲೋಕಲ್ ಚಾನಲ್ ವಿರುದ್ಧ ಸಿಡಿದೆದ್ದ KGF ತಂಡ: ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆಲೋಕಲ್ ಚಾನಲ್ ವಿರುದ್ಧ ಸಿಡಿದೆದ್ದ KGF ತಂಡ: ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ

  ಬಿಗಿಲ್, ಬಾಹುಬಲಿ ಸಿನಿಮಾಗಳು ಯಾವ ಸ್ಥಾನ

  ಬಿಗಿಲ್, ಬಾಹುಬಲಿ ಸಿನಿಮಾಗಳು ಯಾವ ಸ್ಥಾನ

  ಬಾಹುಬಲಿ ಹ್ಯಾಷ್‌ಟ್ಯಾಗ್ ನಲ್ಲಿ 140 ಕೋಟಿ ಬಾರಿ ಟಿಕ್‌-ಟಾಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಬಿಗಿಲ್ ಹ್ಯಾಷ್‌ಟ್ಯಾಗ್ 160 ಬಾರಿ ಬಳಕೆದಾರರು ಬಳಸಿದ್ದಾರೆ. ಬಾಲಿವುಡ್ ಸಿನಿಮಾಗಳಿಗೆ ಇಷ್ಟೊಂದು ಹ್ಯಾಷ್‌ಟ್ಯಾಗ್ ಬಳಕೆ ಆಗಿಲ್ಲ.

  'KGF 2' ಅಪ್ ಡೇಟ್: ಈ ಎರಡು ದೃಶ್ಯ ಸೇರಿದಂತೆ 25 ದಿನಗಳ ಶೂಟಿಂಗ್ ಬಾಕಿ?'KGF 2' ಅಪ್ ಡೇಟ್: ಈ ಎರಡು ದೃಶ್ಯ ಸೇರಿದಂತೆ 25 ದಿನಗಳ ಶೂಟಿಂಗ್ ಬಾಕಿ?

  ಹೆಚ್ಚು ಹುಡುಕಾಟ ನಡೆಸಿದ ರಾಜ್ಯ ಯಾವುದು?

  ಹೆಚ್ಚು ಹುಡುಕಾಟ ನಡೆಸಿದ ರಾಜ್ಯ ಯಾವುದು?

  ಗೂಗಲ್‌ನಲ್ಲಿ ಯಾವ ರಾಜ್ಯದ ಮಂದಿ ಹೆಚ್ಚಾಗಿ ಕೆಜಿಎಫ್‌ ಸಿನಿಮಾ ಬಗ್ಗೆ ಹುಡುಕಾಟ ನಡೆಸಿದ್ದಾರೆ ಎಂಬ ಅಂಕಿ-ಅಂಶ ಇತ್ತೀಚೆಗೆ ಹೊರಬಿದ್ದಿತ್ತು. ಕೇರಳ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ 11 ಸ್ಥಾನದಲ್ಲಿದೆ. ಹಿಂದಿ ಪ್ರಮುಖ ಭಾಷೆಯಾಗಿರುವ ರಾಜ್ಯಗಳೂ ಸಹ ಕರ್ನಾಟಕಕ್ಕಿಂತ ಹೆಚ್ಚಿನ ಬಾರಿ ಕೆಜಿಎಫ್‌ ಬಗ್ಗೆ ಹುಡುಕಾಟ ನಡೆಸಿದ್ದಾರೆ.

  ನೇರವಾಗಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿವೆ ಏಳು ಸಿನಿಮಾಗಳು: ಇಲ್ಲಿದೆ ಮಾಹಿತಿನೇರವಾಗಿ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿವೆ ಏಳು ಸಿನಿಮಾಗಳು: ಇಲ್ಲಿದೆ ಮಾಹಿತಿ

  English summary
  Kannada KGF movie creates new record on Tik Tok. 3.5 billion people used KGF hashtag on Tik Tok.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X