For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್' ವಿತರಕ ರಿಂದ 'ದೇವಕಿ' ಬಿಡುಗಡೆ: ಪವರ್ ತೋರಿಸಿದ ಪ್ರಿಯಾಂಕಾ

  |
  ಪವರ್ ತೋರಿಸಿದ ಪ್ರಿಯಾಂಕಾ ಉಪೇಂದ್ರ | FILMIBEAT KANNADA

  ನಟಿ ಪ್ರಿಯಾಂಕಾ ಉಪೇಂದ್ರ ನಟನೆಯ 'ದೇವಕಿ' ಸಿನಿಮಾ‌ ಬಿಡುಗಡೆಗೆ ಮೊದಲೇ ಎಲ್ಲರ ಹುಬ್ಬೇರುವಂತೆ ಮಾಡಿದೆ. ಚಿತ್ರದ ವಿತರಣೆಯನ್ನು 'ಕೆಜಿಎಫ್' ವಿತರಕ ಮತ್ತು ನಿರ್ಮಾಪಕ ಕಾರ್ತಿಕ್ ಗೌಡ ಮಾಡುತ್ತಿದ್ದಾರೆ.

  ಅಚ್ಚರಿಯ ವಿಷಯ ಏನೆಂದರೆ, ಕಾರ್ತಿಕ್ ಗೌಡ ಎನ್ ಆರ್ ಐ (Non Refundable Amount) ನೀಡಿ ಚಿತ್ರದ ವಿತರಣೆ ಹಕ್ಕನ್ನು ಪಡೆದುಕೊಂಡಿದ್ದಾರೆ. ಕನ್ನಡದಲ್ಲಿ ಒಂದು ಮಹಿಳಾ ಪ್ರಧಾನ ಸಿನಿಮಾಗೆ ಈ ರೀತಿ ಎನ್ ಆರ್ ಐ ನೀಡಿ ವಿತರಣೆ ಹಕ್ಕನ್ನು ಪಡೆದಿರುವುದು ಇದೇ ಮೊದಲು.

  'ಕೆಜಿಎಫ್-2' ಹಾಡುಗಳ‌ ತಯಾರಿ ಆರಂಭ

  ಅಂದಹಾಗೆ, ಈ ಎನ್ ಆರ್ ಐ ವಿತರಕಣೆ ಅಂದರೆ ಏನು ಎನ್ನುವ ಪ್ರಶ್ನೆ ನಿಮಗೂ ಮೂಡ ಬಹುದು. ಅದರ ವಿವರ ಇಲ್ಲಿದೆ.

  ಸಾಮಾನ್ಯವಾಗಿ ಒಂದು ಸಿನಿಮಾದ ವಿತರಣೆಯನ್ನು ಮೂರು ರೀತಿ ಮಾಡಬಹುದು. ಮೊದಲನೆಯದು, ತಮ್ಮ ಸಿನಿಮಾ‌ ರಿಲೀಸ್ ಆಗಬೇಕು ಅಂದರೆ ಚಿತ್ರತಂಡ ವಿತರಕರಿಗೆ ಒಂದಷ್ಟು ಹಣ ನೀಡಬೇಕಾಗುತ್ತದೆ. ಎರಡನೇಯದು, ವಿತರಕರೇ ಚಿತ್ರತಂಡಕ್ಕೆ ಹಣ ನೀಡಿ ಸಿನಿಮಾದ ವಿತರಣೆ‌ ಹಕ್ಕನ್ನು ಪಡೆದುಕೊಳ್ಳುತ್ತಾರೆ.

  ಆದರೆ, ಎನ್ ಆರ್ ಐ ಡಿಸ್ಟ್ರೂಬ್ಯೂಶನ್ ಎಂದರೆ ವಿತರಕರು ನೀಡಿದ ಹಣವನ್ನು ಚಿತ್ರತಂಡ ಹಿಂತಿರುಗಿಸಿ ನೀಡುವಂತಿಲ್ಲ. ಒಂದು ಸಿನಿಮಾದ ಮೇಲೆ ದೊಡ್ಡ ನಂಬಿಕೆ ಇದ್ದು, ಆ ಸಿನಿಮಾ‌ ಸೂಪರ್ ಹಿಟ್ ಆಗುತ್ತದೆ ಎನ್ನುವ ಸೂಚನೆ ಇದ್ದರೆ ಮಾತ್ರ ವಿತರಕರು ಈ ನಿರ್ಧಾರ ತಗೆದುಕೊಳ್ಳುತ್ತಾರೆ.

  'ದೇವಕಿ' ಟೀಸರ್ ಹಿಟ್ : ಉಪ್ಪಿ ಮಗಳನ್ನು ಸ್ವಾಗತಿಸಿದ ಸ್ಟಾರ್ ಗಳು

  ಕಾರ್ತಿಕ್ ಗೌಡ ಈ ರೀತಿ ಎನ್ ಆರ್ ಐ ಮೂಲಕ ವಿರತಣೆ ಪಡೆದುಕೊಂಡಿದ್ದು, ದೇವಕಿ ಚಿತ್ರತಂಡಕ್ಕೆ ಮೊದಲ ಗೆಲುವು ಸಿಕ್ಕಂತ್ತಾಗಿದೆ. ಚಿತ್ರದ ಟೀಸರ್ ನೋಡಿ ಖುಷಿಯಾದ ಕಾರ್ತಿಕ್ ಸಿನಿಮಾವನ್ನು ತಮ್ಮ ಸಂಸ್ಥೆ ಮೂಲಕ ಕನ್ನಡಿಗರಿಗೆ ತಲುಪಿಸುತ್ತಿದ್ದಾರೆ.

  ಪ್ರಿಯಾಂಕಾ ಉಪೇಂದ್ರ ಅವರ 'ಮಮ್ಮಿ' ಚಿತ್ರವನ್ನು ಕೂಡ ವಿತರಕರು ಒಳ್ಳೆಯ ಮೊತ್ತಕ್ಕೆ ತೆಗೆದುಕೊಂಡಿದ್ದರು. ಈಗ 'ದೇವಕಿ' ಕೂಡ ಅದೇ ರೀತಿ ಆಗಿದೆ. 'ಮಮ್ಮಿ' ಹಾಗೂ 'ದೇವಕಿ' ಎರಡು ಚಿತ್ರದ ನಿರ್ದೇಶಕ ಲೋಹಿತ್ ಆಗಿದ್ದಾರೆ. ಅವರ ಶ್ರಮ, ಸಿನಿಮಾ ಮೇಲಿನ ಪ್ಯಾಶನ್ ಗೆ ಸಿಕ್ಕ ಫಲ ಇದಾಗಿದೆ.

  ಸಿನಿಮಾಗೆ ಸಿಕ್ಕ ಈ ಮೊದಲ ಗೆಲುವುನಿಂದ ನಿರ್ಮಾಪಕ ರವೀಶ್ ಹಾಗೂ ಅಕ್ಷಯ್ ಅವರಿಗೆ ಸಂತಸ ಮೂಡಿಸಿದೆ. ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಪ್ಲಾನ್ ಮಾಡಲಾಗಿದ್ದು, ಮೇ ತಿಂಗಳಿನಲ್ಲಿ ಚಿತ್ರ ರಿಲೀಸ್ ಆಗುವ ಸಾಧ್ಯತೆ ಇದೆ. ಉಪೇಂದ್ರ ಪುತ್ರಿ ಐಶ್ವರ್ಯ ಈ ಚಿತ್ರದ ಮೂಲಕ ಲಾಂಚ್ ಆಗುತ್ತಿದ್ದಾರೆ.

  English summary
  Super hit Kannada KGF movie's distributor Karthik Gowda release Priyanka starrer 'Devaki' film. This movie is directed by Lohith.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X