twitter
    For Quick Alerts
    ALLOW NOTIFICATIONS  
    For Daily Alerts

    ವಿಷ್ಣು ದಾದಾ ಪಾಲಿನ ವಿಶೇಷ ದಿನ: ಸಾಹಸಸಿಂಹನನ್ನು ಸ್ಮರಿಸಿದ ಕಿಚ್ಚ ಸುದೀಪ್

    |

    ಸಾಹಸಸಿಂಹ ವಿಷ್ಣುವರ್ಧನ್ ಮೊದಲು ಬಣ್ಣ ಹಚ್ಚಿದ್ದು 'ವಂಶವೃಕ್ಷ' ಚಿತ್ರಕ್ಕೆ. ಆ ಚಿತ್ರದಲ್ಲಿ ಅವರದು ಪೋಷಕ ಪಾತ್ರ. ಅದೇ ವರ್ಷ, ಅಂದರೆ 1972ರಲ್ಲಿ ಅವರು ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರದ ಮೂಲಕ ನಾಯಕರಾಗಿದ್ದು ಇತಿಹಾಸ.

    Recommended Video

    ಸಂಪತ್ ಕುಮಾರ್ - ವಿಷ್ಣುವರ್ಧನ್ ಆದದ್ದು ಇದೇ ದಿನ | Sampath kumar | Vishnuvardhan

    ಸಂಪತ್ ಕುಮಾರ್ ಎಂಬ ಹೆಸರಿನ ವ್ಯಕ್ತಿ ವಿಷ್ಣುವರ್ಧನ್ ಹೆಸರಲ್ಲಿ ಪರಿಚಯವಾದರು. ಜನರ ಪಾಲಿಗೆ ರಾಮಾಚಾರಿಯೇ ಆದರು. 'ಆಂಗ್ರಿ ಯಂಗ್ ಮ್ಯಾನ್' ಎಂಬ ವಿಶೇಷಣ ದೊರಕಿತು. ನಂತರ ವಿಷ್ಣುವರ್ಧನ್ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ನಟಿಸಿದರು. ವಿವಿಧ ಬಗೆಯ ಪಾತ್ರಗಳನ್ನು ಪೋಷಿಸಿದರು. 59 ಸಾಯುವ ವಯಸ್ಸು ಆಗಿರಲಿಲ್ಲ. ಅವರ ಅಗಲಿ ಹನ್ನೊಂದು ವರ್ಷಗಳಾಗುತ್ತಾ ಬಂದರೂ ಅವರ ನೆನಪು ಹಸಿರಾಗಿದೆ. ಸುಮಾರು 220 ಚಿತ್ರಗಳಲ್ಲಿ ನಟಿಸಿದ್ದರೂ ಅವರು ನಾಯಕರಾದ ಮೊದಲ ಚಿತ್ರ, 'ನಾಗರಹಾವು' ಕನ್ನಡಕ್ಕೆ ದೊರಕಿದ ಅಮೂಲ್ಯ ಕೃತಿ. ಮುಂದೆ ಓದಿ...

    ಸಾಹಸ ಸಿಂಹ ವಿಷ್ಣುವರ್ಧನ್ ಜತೆ ಹೋಲಿಸಿದ್ದಕ್ಕೆ ಕಿಚ್ಚ ಸುದೀಪ್ ಹೇಳಿದ್ದೇನು?ಸಾಹಸ ಸಿಂಹ ವಿಷ್ಣುವರ್ಧನ್ ಜತೆ ಹೋಲಿಸಿದ್ದಕ್ಕೆ ಕಿಚ್ಚ ಸುದೀಪ್ ಹೇಳಿದ್ದೇನು?

    ನಾಗರಹಾವು ರಾಮಾಚಾರಿಗೆ 48 ವರ್ಷ

    ನಾಗರಹಾವು ರಾಮಾಚಾರಿಗೆ 48 ವರ್ಷ

    ವಿಷ್ಣುವರ್ಧನ್ ಜನರಿಗೆ ಪರಿಚಯವಾಗಿದ್ದು ನಾಗರಹಾವು ಚಿತ್ರದ ರಾಮಾಚಾರಿ ಪಾತ್ರದ ಮೂಲಕ. ಈ ಚಿತ್ರದ ಪಾತ್ರಕ್ಕೆ ಅವರು ಮೊದಲು ಬಣ್ಣ ಹಚ್ಚಿದ್ದು 1972ರ ಮೇ 23ರಂದು. ಅಂದರೆ ಕಳೆದ ಶನಿವಾರಕ್ಕೆ ಸರಿಯಾಗಿ 48 ವರ್ಷ.

    ರಾಮಾಚಾರಿ ಹುಟ್ಟಿದ ದಿನ

    ರಾಮಾಚಾರಿ ಹುಟ್ಟಿದ ದಿನ

    'ಅಭಿನಯ ಭಾರ್ಗವ' ಕನ್ನಡ ಚಿತ್ರರಂಗದಲ್ಲಿ ಉದಯವಾಗಲು ಕಾರಣವಾದ ಈ ದಿನವನ್ನು ವಿಷ್ಣುದಾದಾ ಅಭಿಮಾನಿಗಳು ಸ್ಮರಿಸಿದ್ದಾರೆ. 'ಚಿತ್ರದುರ್ಗದ ಬಂಡೆಗಳು ಸೀಳಿ ಹೋದ ದಿನ. ಹಕ್ಕಿಗಳು, ಪ್ರಾಣಿಗಳು ಸಂಭ್ರಮಿಸಿದ ದಿನ. ಯುವಕಿಶೋರ ರಾಮಾಚಾರಿ ಹುಟ್ಟಿದ ದಿನ' ಎಂದು ಈ ದಿನವನ್ನು ವಿಷ್ಣುವರ್ಧನ್ ಅಭಿಮಾನಿಗಳು ಬಣ್ಣಿಸಿದ್ದಾರೆ.

    ಚಿತ್ರರಂಗ ಬಿಡಲು ನಿರ್ಧರಿಸಿದ್ದ ವಿಷ್ಣು ಬಾಳಿಗೆ 'ಹೊಂಬಿಸಿಲು' ಬೆಳಕಾಗಿದ್ದು ಹೇಗೆ?ಚಿತ್ರರಂಗ ಬಿಡಲು ನಿರ್ಧರಿಸಿದ್ದ ವಿಷ್ಣು ಬಾಳಿಗೆ 'ಹೊಂಬಿಸಿಲು' ಬೆಳಕಾಗಿದ್ದು ಹೇಗೆ?

    ಜನ್ಮ ಜನ್ಮಕ್ಕೆ ಸಾಲುವಷ್ಟು ಕೀರ್ತಿ

    ಜನ್ಮ ಜನ್ಮಕ್ಕೆ ಸಾಲುವಷ್ಟು ಕೀರ್ತಿ

    'ನಾಗರಹಾವು' ಚಿತ್ರದಲ್ಲಿ ನಟಿಸಲು ನಮ್ಮ ಯುವಕಿಶೋರ ಡಾ. ವಿಷ್ಣುವರ್ಧನ್ ಅಣ್ಣನವರು ಮೊದಲು ಬಣ್ಣ ಹಚ್ಚಿದ ದಿನ ಮೇ 23, 1972. 48 ವಸಂತಗಳು ವೃತ್ತಿಗೆ... ಜನ್ಮ ಜನ್ಮಕ್ಕೆ ಸಾಕಾಗುವಷ್ಟು ಕೀರ್ತಿ ವ್ಯಕ್ತಿಗೆ... ಎಂದು ಅಭಿಮಾನಿಗಳು ಅಗಲಿದ 'ಯಜಮಾನ'ರನ್ನು ನೆನಪಿಸಿಕೊಂಡಿದ್ದಾರೆ.

    ಪುಣ್ಯವಂತ ಕ್ಯಾಮೆರಾಗಳು

    ಪುಣ್ಯವಂತ ಕ್ಯಾಮೆರಾಗಳು

    ಅಭಿಮಾನಿಗಳ ಖುಷಿಯಲ್ಲಿ ನಟ ಕಿಚ್ಚ ಸುದೀಪ್ ಕೂಡ ಭಾಗಿಯಾಗಿದ್ದಾರೆ. 'ಈ ಗಳಿಗೆಗಳನ್ನು ಸೆರೆಹಿಡಿದ ಆ ಕ್ಯಾಮೆರಾಗಳು ಪುಣ್ಯವಂತರು. ಚೌಕಟ್ಟಿನಲ್ಲಿ ನಿಂತಿದ್ದ ವ್ಯಕ್ತಿ ಒಂದು ದಿನ ಲೆಜೆಂಡ್ ಆಗುತ್ತಾರೆ ಎಂಬ ಕಲ್ಪನೆಗೂ ಆಗ ಇರಲಿಲ್ಲ' ಎಂದು ಸುದೀಪ್ ಹೇಳಿದ್ದಾರೆ.

    ಜೀವಂತವಾಗಿ ಇರುತ್ತಾರೆ

    ಜೀವಂತವಾಗಿ ಇರುತ್ತಾರೆ

    'ಕನ್ನಡ ಸಿನಿಮಾ ಅಸ್ತಿತ್ವದಲ್ಲಿ ಇರುವವರೆಗೂ ನಾಗರಹಾವು, ಪುಟ್ಟಣ್ಣ ಕಣಗಾಲ್ ಸರ್, ವಿಷ್ಣು ಸರ್ ಎಂದಿಗೂ ಜೀವಂತವಾಗಿಯೇ ಇರುತ್ತಾರೆ' ಎಂದು ಸುದೀಪ್, ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮತ್ತು ವಿಷ್ಣುವರ್ಧನ್ ಅವರನ್ನು ಸ್ಮರಿಸಿಕೊಂಡಿದ್ದಾರೆ.

    English summary
    Kiccha Sudeep and fans of Dr Vishnuvardhan has remembered the legendary actor on the day of Vishnuvardhan started acting as Ramachari in Nagarahaavu.
    Monday, May 25, 2020, 13:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X