»   » ರಾಜ್ಯೋತ್ಸವದ ದಿನ ಕಿಚ್ಚನಿಗೆ ಅಭಿಮಾನಿಗಳಿಂದ ಕಾಗುಣಿತ ಪಾಠ

ರಾಜ್ಯೋತ್ಸವದ ದಿನ ಕಿಚ್ಚನಿಗೆ ಅಭಿಮಾನಿಗಳಿಂದ ಕಾಗುಣಿತ ಪಾಠ

Written By:
Subscribe to Filmibeat Kannada

ಇಂದು ಕನ್ನಡ ರಾಜ್ಯೋತ್ಸವ.. ಈ ವಿಶೇಷವಾಗಿ ಕನ್ನಡದ ಅನೇಕ ಕಲಾವಿದರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯವನ್ನು ಕೋರಿದರು. ಅದೇ ರೀತಿ ನಟ ಸುದೀಪ್ ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಕನ್ನಡ ಹಬ್ಬಕ್ಕೆ ಶುಭ ಕೋರಿದರು.

ಆದರೆ ಕನ್ನಡ ರಾಜ್ಯೋತ್ಸವದ ದಿನ ಸುದೀಪ್ ಸಣ್ಣ ಎಡವಟ್ಟು ಮಾಡಿಕೊಂಡಿದ್ದಾರೆ. ಯಾಕಾಂದ್ರೆ ಸುದೀಪ್ ತಮ್ಮ ಒಂದು ಪೋಸ್ಟ್ ನಲ್ಲಿ ತಪ್ಪು ಬರೆದಿದ್ದರು. ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದ ಕಿಚ್ಚ ಕೆಲ ಕಾಗುಣಿತ ತಪ್ಪು ಬರೆದಿದ್ದರು. 'ಕನ್ನಡವಿಲ್ಲದೆ ನಾವಿಲ್ಲ' ಮತ್ತು 'ನಿಮ್ಮ ಕಿಚ್ಚ' ಸೇರಿದಂತೆ ಕೆಲ ಪದಗಳು ತಪ್ಪಾಗಿತ್ತು.

Kiccha Sudeep did spelling mistake in his tweet

ಸುದೀಪ್ ಮಾಡಿದ ಈ ಪೋಸ್ಟ ನೋಡಿದ ಅನೇಕ ಅಭಿಮಾನಿಗಳು ಕಮೆಂಟ್ ಮಾಡಿದರು. ಅಭಿಮಾನಿಗಳ ಕಮೆಂಟ್ ನೋಡಿದ ಮೇಲೆ ಸುದೀಪ್ ಅದನ್ನು ಬದಲಾಯಿಸಿದರು. ಜೊತೆಗೆ ''ಟೈಪಿಂಗ್ ಎರರ್ ನಿಂದ ಈ ರೀತಿ ಆಗಿದೆ ಕ್ಷಮಿಸಿ'' ಎಂದು ಟ್ವೀಟ್ ಮಾಡಿದರು.

English summary
Kiccha Sudeep did spelling mistake in his tweet.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada