»   » ಅಭಿಮಾನಿಗಳೇ... ನಿಮ್ಮಿಂದ ಇದನ್ನೆಲ್ಲ 'ನಲ್ಲ' ಸುದೀಪ್ ನಿರೀಕ್ಷಿಸುವುದಿಲ್ಲ.!

ಅಭಿಮಾನಿಗಳೇ... ನಿಮ್ಮಿಂದ ಇದನ್ನೆಲ್ಲ 'ನಲ್ಲ' ಸುದೀಪ್ ನಿರೀಕ್ಷಿಸುವುದಿಲ್ಲ.!

Posted By:
Subscribe to Filmibeat Kannada

ಅಭಿನಯ ಚಕ್ರವರ್ತಿ... ಕೆಚ್ಚೆದೆಯ ಕಿಚ್ಚ... ಸುದೀಪ್ ರವರನ್ನ ಕಂಡರೆ ಅಭಿಮಾನಿಗಳಲ್ಲಿ ಅಪಾರ ಅಭಿಮಾನ. ಸುದೀಪ್ ರವರ ಪ್ರತಿಯೊಂದು ಸ್ಟೈಲ್ ನೂ ಅನುಕರಿಸುವ... ಸುದೀಪ್ ರವರ ಬಗ್ಗೆ ಮನದಾಳದಿಂದ ಕವಿತೆ ಬರೆಯುವ... ಸುದೀಪ್ ರವರ ಪೋಸ್ಟರ್ ಗಳನ್ನು ಸ್ಕೆಚ್ ಮಾಡುವ ಅಸಂಖ್ಯಾತ ಅಭಿಮಾನಿಗಳು ಎಲ್ಲೆಲ್ಲೂ ಇದ್ದಾರೆ.

ತಮ್ಮಂತೆಯೇ ಯಾರಾದರೂ ಸ್ಟೈಲ್ ಮಾಡಿಕೊಂಡಾಗ... ಪ್ರೀತಿಯಿಂದ ಕವನ ಕಳುಹಿಸಿದಾಗ... ತಮ್ಮ ಭಾವಚಿತ್ರಗಳನ್ನ ಸ್ಕೆಚ್ ಮಾಡಿದಾಗ ಕಿಚ್ಚ ಸುದೀಪ್ ಕೂಡ ಖುಷಿ ಪಡುತ್ತಾರೆ.

ಆದರೆ.. ಇದಕ್ಕಿಂತ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ ಅತಿರೇಕದ ಅಭಿಮಾನ ಪ್ರದರ್ಶಿಸಿದರೆ ಸುದೀಪ್ ಸಹಿಸುವುದಿಲ್ಲ. ಬೇಕಾದರೆ, ಇತ್ತೀಚೆಗಷ್ಟೇ ಸುದೀಪ್ ಮಾಡಿರುವ ಟ್ವೀಟ್ ಗಳತ್ತ ಒಮ್ಮೆ ಕಣ್ಣಾಡಿಸಿ....

ರಕ್ತದಲ್ಲಿ 'ಐ ಲವ್ ಯು' ಬರೆದಿದ್ದಕ್ಕೆ....

ಸುದೀಪ್ ರವರ ಅಪ್ಪಟ 'ಭಕ್ತ'ನೊಬ್ಬ ಇತ್ತೀಚೆಗೆ ತಾನೆ ತನ್ನ ಕೈ ಕೂಯ್ದುಕೊಂಡು ರಕ್ತದಿಂದ 'ಐ ಲವ್ ಯು ಕಿಚ್ಚ' ಎಂದು ಬರೆದಿರುವ ಫೋಟೋವನ್ನ ಸುದೀಪ್ ಗೆ ಟ್ವೀಟ್ ಮಾಡಿದ್ದ. ಅದನ್ನ ನೋಡಿದ ಸುದೀಪ್ ಪ್ರತಿಕ್ರಿಯೆ ಕೊಟ್ಟಿರುವುದು ಹೀಗೆ...

ಪ್ರೀತಿಯನ್ನ ವ್ಯಕ್ತಪಡಿಸುವ ರೀತಿ ಇದಲ್ಲ.!

''ನಿಮ್ಮ ಪ್ರೀತಿಗೆ ನಾನು ಚಿರಋಣಿ. ಆದರೆ, ಇದನ್ನ ನಾನು ಯಾರಿಂದಲೂ ನಿರೀಕ್ಷಿಸುವುದಿಲ್ಲ. ಪ್ರೀತಿಯನ್ನ ಹಲವು ರೀತಿಯಲ್ಲಿ ವ್ಯಕ್ತಪಡಿಸಬಹುದು. ಆದ್ರೆ, ಇದು ಸೂಕ್ತ ಆಯ್ಕೆ ಅಲ್ಲ'' ಎಂದು ಸುದೀಪ್ ಟ್ವೀಟಿಸಿದ್ದಾರೆ.

ಕ್ಲಾಸ್ ನಲ್ಲಿ ಕೂತ್ಕೊಂಡ್ ಟ್ವೀಟ್ ಮಾಡಿದ್ರೆ...

ಸುದೀಪ್ ರವರ ಮತ್ತೋರ್ವ ಅಭಿಮಾನಿ, ''ಅಣ್ಣ.. ಒಂದು ರಿಪ್ಲೈ ಮಾಡಿ ಪ್ಲೀಸ್.. ಕ್ಲಾಸ್ ನಲ್ಲಿ ಕೂತುಕೊಂಡು ಮೆಸೇಜ್ ಮಾಡ್ತಿದ್ದೀನಿ'' ಅಂತ ಸುದೀಪ್ ಗೆ ಟ್ವೀಟ್ ಮಾಡಿದ್ದ.

ಇದು ತಪ್ಪು

ಆ ಟ್ವೀಟ್ ಗೆ, ''ಮತ್ತೆ ಕ್ಲಾಸ್ ನಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಗಮನ ಹರಿಸಿ. ಟ್ವೀಟ್ ಮೇಲೆ ಅಲ್ಲ. ಇದು ತಪ್ಪು'' ಎಂದು ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

ಅಭಿಮಾನದ ಹೆಸರಿನಲ್ಲಿ ಇದೆಲ್ಲ ಬೇಡ...

ಅಭಿಮಾನದ ಹೆಸರಿನಲ್ಲಿ ಓದಿನ ಕಡೆ ಗಮನ ಕೊಡದೆ, ವಿದ್ಯಾಭ್ಯಾಸವನ್ನ ಹಾಳು ಮಾಡಿಕೊಳ್ಳಬಾರದು ಎಂಬುದು ಸುದೀಪ್ ರವರ ಕಾಳಜಿ.

English summary
Kiccha Sudeep doesn't expect all these from his fans

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada