For Quick Alerts
  ALLOW NOTIFICATIONS  
  For Daily Alerts

  ನಾಲ್ಕು ವರ್ಷದ ಬಳಿಕ ಕಿಚ್ಚ ಕೊಂಡ ಹೊಸ ಕಾರ್ ಯಾವ್ದು?

  By Pavithra
  |
  ಸುದೀಪ್ ಮನೆಗೆ ಬಂದ ಆ ವಿಶೇಷ ಅತಿಥಿ ಯಾರು ? | FIlmibeat Kannada

  ಕಿಚ್ಚ ಸುದೀಪ್ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಸುಮಾರು ನಾಲ್ಕು ವರ್ಷದಿಂದ ಯಾವುದೇ ಹೊಸ ವಾಹನವನ್ನು ಖರೀದಿ ಮಾಡದ ಸುದೀಪ್ ಈಗ ಹೊಸ ಕಾರ್ ಖರೀದಿ ಮಾಡಿದ್ದಾರೆ.

  ನಾಲ್ಕು ವರ್ಷದ ನಂತರ ಕಿಚ್ಚ ಕೊಂಡುಕೊಂಡಿರುವ ಆ ಕಾರ್ ಹೇಗಿದೆ? ಇಷ್ಟು ದಿನಗಳು ಸುದೀಪ್ ನಿಜಕ್ಕೂ ಕಾರ್ ಗಳನ್ನೇ ಖರೀದಿ ಮಾಡಿಲ್ವಾ? ಇಂತಹ ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುತ್ತದೆ. ಆದರೆ ನಿಜಕ್ಕೂ ಸುದೀಪ್ ನಾಲ್ಕು ವರ್ಷದ ನಂತರ ಹೊಸ ಕಾರ್ ಅನ್ನು ಮನೆಗೆ ತಂದಿದ್ದಾರೆ. ಅಷ್ಟಕ್ಕೂ ಈಗ ಕಾರ್ ಖರೀದಿ ಮಾಡಲು ಸುದೀಪ್ ಮನಸ್ಸು ಮಾಡಿದ್ದು ಯಾಕೆ ಎಂಬ ಕುತೂಹಲಕ್ಕೆ ಉತ್ತರವೂ ಇದೆ.

  'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ತಂಡ ಸೇರಿಕೊಂಡ ಹರ್ಷ'ಬ್ರಿಂಗ್ ಔಟ್ ದಿ ಪೈಲ್ವಾನ್ ಇನ್ ಯು' ತಂಡ ಸೇರಿಕೊಂಡ ಹರ್ಷ

  ಹಾಗಾದರೆ ,ಸದ್ಯ ಸುದೀಪ್ ಬಳಿ ಎಷ್ಟು ಕಾರ್ ಗಳಿವೆ. ಈಗ ತಂದಿರುವ ಹೊಸ ಕಾರ್ ನ ವಿಶೇಷತೆಗಳೇನು? ಈ ಎಲ್ಲಾ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...

  ಹೊಸ ಕಾರ್ ಖರೀದಿಸಿದ ಕಿಚ್ಚ

  ಹೊಸ ಕಾರ್ ಖರೀದಿಸಿದ ಕಿಚ್ಚ

  ಕಿಚ್ಚ ಸುದೀಪ್ ಹೊಸ ಕಾರ್ ಖರೀದಿಸಿದ್ದಾರೆ. ಕೆಂಪು ಬಣ್ಣದ ವೋಲ್ವೊ ಕಂಪನಿಯ ಕಾರ್ ನಿನ್ನೆ ಅಭಿನಯ ಚಕ್ರವರ್ತಿ ಮನೆಗೆ ಬಂದಿದೆ. ಸದ್ಯ ಸುದೀಪ್ ಕಾರಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  4 ವರ್ಷದ ನಂತರ ಖರೀದಿ

  4 ವರ್ಷದ ನಂತರ ಖರೀದಿ

  ಸುದೀಪ್ ನಾಲ್ಕು ವರ್ಷದಿಂದ ಹೊಸ ಕಾರ್ ಖರೀದಿಯೇ ಮಾಡಿಲ್ಲ. ಕಳೆದ ಮೂರು ತಿಂಗಳ ಹಿಂದೆ ತಮ್ಮ ಅಕ್ಕನ ಮಗಳಿಗಾಗಿ ಜೀಪ್ ಗಿಫ್ಟ್ ಕೊಟ್ಟಿದ್ದರು. ಅದನ್ನು ಬಿಟ್ಟರೆ ತಮ್ಮ ಸ್ವಂತಕ್ಕಾಗಿ ಇತ್ತೀಚಿಗೆ ಕಾರ್ ಕೊಂಡುಕೊಂಡಿಲ್ಲ.

  ಕಿಚ್ಚನ ಬಳಿ ಇವೆ ವಿಶೇಷವಾದ ಕಾರ್ ಗಳು

  ಕಿಚ್ಚನ ಬಳಿ ಇವೆ ವಿಶೇಷವಾದ ಕಾರ್ ಗಳು

  ಸುದೀಪ್ ಕೂಡ ಒಬ್ಬ ಕಾರ್ ಪ್ರೇಮಿ. ಹಾಗಂತ ಮಾರುಕಟ್ಟೆಗೆ ಬಂದ ಕಾರ್ ಗಳನ್ನೆಲ್ಲಾ ಖರೀದಿ ಮಾಡುವುದಿಲ್ಲ. ಇಷ್ಟವಾದ ಹಾಗೂ ವಿಶೇಷ ಎನಿಸುವಂತಹ ಕಾರ್ ಗಳನ್ನ ಮಾತ್ರ ಮನೆಗೆ ತರುತ್ತಾರೆ. ಸದ್ಯ ಸುದೀಪ್ ಬಳಿ ರೇಂಜ್ ರೋವರ್, BMW, ಜಾಗ್ವಾರ್, ಫೋರ್ಡ್ ಕಂಪನಿಯ ಕಾರುಗಳಿವೆ.

  ಕಾರ್ ಮಾರಾಟ ಮಾಡಿದ್ದ ಹಣ ರೈತರಿಗೆ ನೀಡಿದ್ದರು

  ಕಾರ್ ಮಾರಾಟ ಮಾಡಿದ್ದ ಹಣ ರೈತರಿಗೆ ನೀಡಿದ್ದರು

  ತಮ್ಮ ಬಳಿ ಇರುವ ಕಾರುಗಳ ಪೈಕಿ ಒಂದು ಕಾರನ್ನು ಸುದೀಪ್ ಮಾರಾಟ ಮಾಡಿ ಅದರಿಂದ ಬರುವ ಹಣವನ್ನು ಸಂಕಷ್ಟದಲ್ಲಿರುವ ರೈತರಿಗೆ ನೆರವು ನೀಡಿದ್ದರು. 'ವಿ ರೆಸ್ಪೆಕ್ಟ್ ಫಾರ್ಮರ್ಸ್' ಟ್ರಸ್ಟ್'ಗೆ ಕಿಚ್ಚ ಸುದೀಪ್ ಈ ಹಿಂದೆಯೇ ಹಣ ನೀಡಿ ಸಾಕಷ್ಟು ಜನರಿಗೆ ಮಾದರಿ ಆಗಿದ್ದರು.

  English summary
  Kannada actor Kiccha Sudeep has bought a new car after four years . Sudeep bought a Volvo company's car.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X