»   » ಬಿಗ್ ಬಾಸ್ ದಿವಾಕರ್ ಕನಸಿಗೆ ಆಸರೆಯಾದ ಅಭಿನಯ ಚಕ್ರವರ್ತಿ

ಬಿಗ್ ಬಾಸ್ ದಿವಾಕರ್ ಕನಸಿಗೆ ಆಸರೆಯಾದ ಅಭಿನಯ ಚಕ್ರವರ್ತಿ

Posted By:
Subscribe to Filmibeat Kannada

ಕನ್ನಡದ ಬಿಗ್ ಬಾಸ್ ಮುಗಿದು ಸುಮಾರು ಎರಡು ತಿಂಗಳು ಆಗುತ್ತಾ ಬರುತ್ತಿದೆ. ಬಿಗ್ ಬಾಸ್ ಮನೆಯಲ್ಲಿದ್ದ ಸ್ಪರ್ಧಿಗಳು ಎಲ್ಲರೂ ತಮ್ಮ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಕಾಮನ್ ಮ್ಯಾನ್ ಎಂಟ್ರಿಯಲ್ಲಿ ಮನೆ ಒಳಗೆ ಹೋಗಿದ್ದ ದಿವಾಕರ್ ಈಗ ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ಎಲ್ಲರಿಗೂ ಕಾಡುತ್ತಿದೆ.

ವೇದಿಕೆ ಮೇಲೆ ಸ್ಪರ್ಧಿಗಳನ್ನ ಸ್ನೇಹಿತರಂತೆ ಕಾಣುತ್ತಿದ್ದ ಕಿಚ್ಚ ಸುದೀಪ್ ಇಂದಿಗೂ ಕೂಡ ದಿವಾಕರ್ ಅವರ ಸಂಪರ್ಕದಲ್ಲಿ ಇದ್ದಾರಾ? ಅಥವಾ ದಿವಾಕರ್ ಮತ್ತೆ ಅದೇ ಸೇಲ್ಸ್ ಮ್ಯಾನ್ ಕೆಲಸ ಮಾಡುತ್ತಾ ಜೀವನ ಕಳೆಯುತ್ತಿದ್ದಾರಾ?

ಕೋಟಿಗೊಬ್ಬ3 ಚಿತ್ರಕ್ಕೆ ಮಹೂರ್ತ ಫಿಕ್ಸ್ ಮತ್ತೆ ಲೇಖನಿ ಹಿಡಿದ ಕಿಚ್ಚ

ಇಂತಹ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಬಿಗ್ ಬಾಸ್ ನಂತರವೂ ಕಿಚ್ಚ, ದಿವಾಕರ್ ಆಸೆ, ಕನಸುಗಳಿಗೆ ಆಸರೆ ಆಗಿದ್ದಾರೆ. ಇದಕ್ಕೆ ಕಿಚ್ಚನ ಪತ್ನಿ ಪ್ರಿಯಾ ಕೂಡ ಕೈ ಜೋಡಿಸಿದ್ದಾರೆ. ಹಾಗಾದರೆ ದಿವಾಕರ್ ಅವರಿಗೆ ಕಿಚ್ಚನಿಂದಾದ ಸಹಾಯವೇನು? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ.

ಕಿಚ್ಚನಿಂದ ದಿವಾಕರ್ ಗೆ ಸಹಾಯ

ಕಿಚ್ಚ ಸುದೀಪ್ ಬಿಗ್ ಬಾಸ್ ರಿಯಾಲಿಟಿ ಶೋ ಮುಗಿದ ಮೇಲೆಯೂ ಅಲ್ಲಿದ್ದ ಸ್ಪರ್ಧಿಗಳ ಜೊತೆಯಲ್ಲಿ ಸಂಪರ್ಕದಲ್ಲಿ ಇದ್ದಾರೆ. ಜೀವನದಲ್ಲಿ ಕಷ್ಟ ಪಡುತ್ತಿರುವವರಿಗೆ ಸಹಾಯ ಮಾಡುತ್ತಿದ್ದಾರೆ.

ಆರ್ಥಿಕ ನೆರವು ನೀಡಿದ ಸುದೀಪ್ ಹಾಗೂ ಪ್ರಿಯಾ

ದಿವಾಕರ್ ಸೇಲ್ಸ್ ಮ್ಯಾನ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದವರು. ಬಿಗ್ ಬಾಸ್ ಮನೆಯಿಂದ ಬಂದ ನಂತರ್ ಬದುಕು ಕಟ್ಟಿಕೊಳ್ಳಲು ಕಷ್ವಾಗುತ್ತೆ ಎಂದು ತಿಳಿದುಕೊಂಡ ಕಿಚ್ಚ ಹಾಗೂ ಪ್ರಿಯಾ ದಿವಾಕರ್ ಕುಟುಂಬಕ್ಕೆ ಸಹಾಯವಾಗಲಿ ಎಂದು ಆರ್ಥಿಕ ನೆರವು ನೀಡಿದ್ದಾರೆ.

ಮುಂದೆಯೂ ಜೊತೆಯಲ್ಲಿರುವ ಭರವಸೆ

ಆರ್ಥಿಕ ನೆರವು ನೀಡುವುದರ ಜೊತೆಯಲ್ಲಿ ಮುಂದಿನ ದಿನಗಳಲ್ಲಿ ತಾವು ಅಭಿನಯಿಸುವ ಸಿನಿಮಾಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಿಗೆ ದಿವಾಕರ್ ಅವರಿಗೆ ಅವಕಾಶ ನೀಡುವುದಾಗಿ ತಿಳಿಸಿದ್ದಾರಂತೆ.

ಇಂದಿಗೂ ನಡೆಯುತ್ತಿದೆ ಸೇಲ್ಸ್ ಕೆಲಸ

ಬಿಗ್ ಬಾಸ್ ಮನೆಯಿಂದ ಬಂದ ನಂತರ ಸಾಮಾನ್ಯ ಜನರು ದಿವಾಕರ್ ಅವರನ್ನ ನೋಡುವ ರೀತಿ ಬದಲಾಗಿದೆ. ಏನೇ ಬದಲಾದರೂ ಸೇಲ್ಸ್ ಮ್ಯಾನ್ ಕೆಲಸ ಮಾತ್ರ ಬಿಡುವುದಿಲ್ಲ ಎನ್ನುತ್ತಾರೆ ದಿವಾಕರ್ .

English summary
Kannada actor Kiccha Sudeep has helped financially to Bigg Boss contestant Diwakar, He also said that Divakar would be allowed to play small characters in Sudeep's upcoming films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada