For Quick Alerts
  ALLOW NOTIFICATIONS  
  For Daily Alerts

  ರಾತ್ರೋರಾತ್ರಿ ವಿಜಯ್ ಆಪರೇಷನ್‌ಗೆ ವ್ಯವಸ್ಥೆ ಮಾಡಿಸಿದ ಸುದೀಪ್

  |

  ನಟ ಸಂಚಾರಿ ವಿಜಯ್‌ಗೆ ಅಪಘಾತವಾದ ಕೂಡಲೇ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಬರುವಷ್ಟರಲ್ಲಿ ಸಾಕಷ್ಟು ರಕ್ತಸ್ರಾವ ಆಗಿತ್ತು.

  ತೀವ್ರ ರಕ್ತ ಸ್ರಾವ ದಿಂದ ಬಳಲುತ್ತಿದ್ದ ವಿಜಯ್ ಗೆ ಚಿಕಿತ್ಸೆ ! | Filmibeat Kannada

  ಈ ವೇಳೆ ಬಲ ತೊಡೆ ಹಾಗೂ ಮೆದುಳಿನ ಬಲ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿರುವುದು ತಿಳಿಯುತ್ತದೆ. ಆ ರಾತ್ರಿ ಸಮಯದಲ್ಲೇ ಶಸ್ತ್ರ ಚಿಕಿತ್ಸೆ ಮಾಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಆಗ ನಟ ಟೈಗರ್ ಖ್ಯಾತಿಯ ಪ್ರದೀಪ್ ಮೂಲಕ ಕಿಚ್ಚ ಸುದೀಪ್‌ರನ್ನು ಸಂಪರ್ಕಿಸಲಾಗುತ್ತದೆ.

  ರಾತ್ರೋರಾತ್ರಿ ವಿಷಯ ತಿಳಿದ ಸುದೀಪ್ ಕೂಡಲೇ ಅಪೋಲೋ ಆಸ್ಪತ್ರೆಯ ಮುಖಸ್ಥರಿಗೆ ಕರೆ ಮಾಡಿ, ಬೇಗ ಶಸ್ತ್ರ ಚಿಕಿತ್ಸೆ ಮಾಡಲು ವ್ಯವಸ್ಥೆ ಮಾಡಿದ್ದಾರೆ. ಆ ನಂತರ ನ್ಯೂರೋ ಸರ್ಜನ್ ಡಾ ಅರುಣ್ ನಾಯಕ್‌ ರಾತ್ರಿಯೇ ಸಂಚಾರಿ ವಿಜಯ್‌ಗೆ ಯಶಸ್ವಿಯಾಗಿ ಆಪರೇಷನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

  ಸಂಚಾರಿ ವಿಜಯ್‌ಗೆ ಏನಾಗಿದೆ, ವೈದ್ಯರು ಏನು ಹೇಳಿದ್ರು?ಸಂಚಾರಿ ವಿಜಯ್‌ಗೆ ಏನಾಗಿದೆ, ವೈದ್ಯರು ಏನು ಹೇಳಿದ್ರು?

  ಕಳೆದ ರಾತ್ರಿಯಿಂದಲೂ ನಟ ಪ್ರದೀಪ್, ಸಂಚಾರಿ ವಿಜಯ್ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ಸುದೀಪ್‌ಗೂ ಈ ವಿಷಯ ಮುಟ್ಟಿದೆ.

  ಮತ್ತೊಂದೆಡೆ ಸಂಚಾರಿ ವಿಜಯ್‌ಗೆ ಅಪಘಾತ ನಡೆದ ವಿಚಾರ ತಿಳಿದ ಕೂಡಲೇ ನಟ ಸತೀಶ್ ನೀನಾಸಂ ಆಸ್ಪತ್ರೆ ಬಳಿ ಭೇಟಿ ನೀಡಿದ್ದಾರೆ. ವಿಜಯ್ ಆರೋಗ್ಯದ ಬಗ್ಗೆ ನಿಗಾವಹಿಸಿದ್ದು, ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ.

  ನಂತರ ಮಾಧ್ಯಮದವರ ಜೊತೆ ಮಾಡಿದ ಸತೀಶ್ ನೀನಾಸಂ 'ವಿಜಯ್ ಅವರಿಗೆ ಪ್ರಾಣಾಪಾಯ ಇಲ್ಲ. ಅವರು ಶೀಘ್ರ ಗುಣಮುಖರಾಗುತ್ತಾರೆ' ಎಂದು ಭರವಸೆ ವ್ಯಕ್ತಪಡಿಸಿದರು.

  English summary
  sanchari Vijay Accident: Sudeep has helped to sanchari Vijay for admit apollo hospital at night.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X