»   » ಸ್ಯಾಂಡಲ್ ವುಡ್ ನಟರ ಪೈಕಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ನಂ 1'

ಸ್ಯಾಂಡಲ್ ವುಡ್ ನಟರ ಪೈಕಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ನಂ 1'

Posted By:
Subscribe to Filmibeat Kannada

ನಟ ಕಿಚ್ಚ ಸುದೀಪ್ ಈಗೀಗ ಮುಟ್ಟಿದೆಲ್ಲ ಚಿನ್ನವಾಗುತ್ತಿದೆ. ಸ್ಯಾಂಡಲ್ ವುಡ್ ನಿಂದ ಹಿಡಿದು ಹಾಲಿವುಡ್ ವರೆಗೂ ಈಗ ಕಿಚ್ಚನ ಬಗ್ಗೆ ಮಾತನಾಡುವ ಹಾಗೆ ಆಗಿದೆ. ಇದರ ಜೊತೆಗೆ ಸುದೀಪ್ ಜನಪ್ರಿಯತೆ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎನ್ನುವುದಕ್ಕೆ ಅವರ ಟ್ವಿಟ್ಟರ್ ಖಾತೆಯೇ ಸಾಕ್ಷಿ.

ಟ್ವಿಟ್ಟರ್ ನಲ್ಲಿ ಕಿಚ್ಚ ಸುದೀಪ್ ಗೆ 8 ಲಕ್ಷ ಫಾಲೋವರ್ಸ್ .!

ಸುದೀಪ್ ಎತ್ತರಕ್ಕೆ ಬೆಳೆಯುತ್ತಿರುವ ಹಾಗೆ ಅವರ ಟ್ವಿಟ್ಟರ್ ಹಿಂಬಾಲಕರ ಸಂಖ್ಯೆ ಕೂಡ ಬೆಳೆಯುತ್ತಿದೆ. ದಿನದಿಂದ ದಿನಕ್ಕೆ ಅವರ ಫಾಲೋವರ್ಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಟ್ವಿಟ್ಟರ್ ನಲ್ಲಿ ಒಂದು ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಸುದೀಪ್ ಸಾಮಾಜಿಕ ಜಾಲತಾಣದ ಅಧಿಪತಿ ಆಗಿದ್ದಾರೆ. ಮುಂದೆ ಓದಿ...

1 ಮಿಲಿಯನ್ ಫಾಲೋವರ್ಸ್

ನಟ ಕಿಚ್ಚ ಸುದೀಪ್ ಅಫೀಶಿಯಲ್ ಟ್ವಿಟ್ಟರ್ ಅಕೌಂಟ್ ನ ಫಾಲೋವರ್ಸ್ ಸಂಖ್ಯೆ ಈಗ 1 ಮಿಲಿಯನ್ ಗಡಿದಾಡಿದೆ. ಈ ಮೂಲಕ ಸುದೀಪ್ ಅತಿ ಹೆಚ್ಚು ಟ್ವಿಟ್ಟರ್ ಫಾಲೋವರ್ಸ್ ಹೊಂದಿರುವ ಕನ್ನಡದ ನಟನಾಗಿದ್ದಾರೆ.

ಮಿಂಚಿನ ವೇಗ

ಮಿಂಚಿನ ವೇಗದಲ್ಲಿ ನಟ ಸುದೀಪ್ ಟ್ವಿಟ್ಟರ್ ಫಾಲೋವರ್ಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿಂದೆ ಜುಲೈ 16ಕ್ಕೆ ಸರಿಯಾಗಿ ಸುದೀಪ್ ಟ್ವಿಟ್ಟರ್ ನಲ್ಲಿ 8 ಲಕ್ಷ ಫಾಲೋವರ್ಸ್ ಇದ್ದರು. ನಂತರ ಕೇವಲ 16 ದಿನಗಳಲ್ಲಿ 9 ಲಕ್ಷ ಜನ ಹಾಗೂ ಈಗ 1 ಮಿಲಿಯನ್ ಫಾಲೋವರ್ಸ್ ಗಳನ್ನು ಕಿಚ್ಚ ಸಂಪಾದಿಸಿದ್ದಾರೆ.

ಮಿಂಚಿನ ವೇಗದಲ್ಲಿ ಬೆಳೆಯುತ್ತಿದೆ ಕಿಚ್ಚ ಸುದೀಪ್ ಫಾಲೋವರ್ಸ್ ಸಂಖ್ಯೆ!

ಫ್ಯಾನ್ಸ್ ಕ್ಲಬ್

ಸುದೀಪ್ ಅವರ ಆಫೀಶಿಯಲ್ ಟ್ವಿಟ್ಟರ್ ಖಾತೆ ಮಾತ್ರವಲ್ಲದೆ ಅವರ ಫ್ಯಾನ್ಸ್ ಕ್ಲಬ್ ಗಳ ಅನೇಕ ಟ್ವಿಟ್ಟರ್ ಖಾತೆಗಳು ಚಾಲ್ತಿಯಲ್ಲಿದೆ. ಅವುಗಳಲ್ಲಿ ಸಾಕಷ್ಟು ಖಾತೆಗಳು ಸಾವಿರಾರು ಫಾಲೋವರ್ಸ್ ಗಳನ್ನು ಹೊಂದಿವೆ.

ಅಭಿಮಾನಿಗಳೊಂದಿಗೆ ಸಾದಾ ಸಂಪರ್ಕ

ಟ್ವಿಟ್ಟರ್ ನಲ್ಲಿ ಕಿಚ್ಚ ಈ ಮಟ್ಟಿನ ಫಾಲೋವರ್ಸ್ ಗಳನ್ನು ಹೊಂದಿರುವುದಕ್ಕೆ ಕಾರಣ ಒಂದು ಕಡೆ ಅವರ ಜನಪ್ರಿಯತೆ ಆದರೆ, ಇನ್ನೊಂದು ಕಡೆ ಟ್ವಿಟ್ಟರ್ ನಲ್ಲಿ ಅವರು ಸದಾ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುವುದು ಅಂತ ಹೇಳಬಹುದು.

ದರ್ಶನ್ ಮತ್ತು ಸುದೀಪ್ ಜೊತೆಗಿನ ಜಗಳದ ಬಗ್ಗೆ ಬುಲೆಟ್ ಹೀಗೆ ಹೇಳಿದರು!

ಅಭಿಮಾನಿಗಳ ಶುಭಾಶಯ

1 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಸುದೀಪ್ ಗೆ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

ಟ್ವಿಟ್ಟರ್ ನಲ್ಲಿ ಕನ್ನಡ ನಟರು

ಟ್ವಿಟ್ಟರ್ ನಲ್ಲಿ ಕನ್ನಡ ನಟರಾದ ಗಣೇಶ್ 6,88,000 , ಯಶ್ 5,85,000 , ಪುನೀತ್ ರಾಜ್ ಕುಮಾರ್ 4,48,000 , ಉಪೇಂದ್ರ 3,21,000 , ದರ್ಶನ್ 2,56,000 ಮತ್ತು ಜಗ್ಗೇಶ್ 1,50,000 ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.

ವಿಷ್ಣು ಅಭಿಮಾನಿಗಳಿಗೆ ಬ್ಯಾಂಕಾಕ್'ನಿಂದ ಬಂತು ಕಿಚ್ಚನ ವಿಡಿಯೋ ಸಂದೇಶ

English summary
Kannada actor Kiccha Sudeep have 1 million followers in his twitter account.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada