»   » ಇನ್ಸ್ಟಾಗ್ರಾಮ್ ನಲ್ಲಿ 'ಹೆಬ್ಬುಲಿ' ಆರ್ಭಟ : 2 ಲಕ್ಷ ಫಾಲೋವರ್ಸ್ ಪಡೆದ ಕಿಚ್ಚ

ಇನ್ಸ್ಟಾಗ್ರಾಮ್ ನಲ್ಲಿ 'ಹೆಬ್ಬುಲಿ' ಆರ್ಭಟ : 2 ಲಕ್ಷ ಫಾಲೋವರ್ಸ್ ಪಡೆದ ಕಿಚ್ಚ

Posted By:
Subscribe to Filmibeat Kannada

ಕನ್ನಡದ ನಟರ ಪೈಕಿ ಸಾಮಾಜಿಕ ಜಾಲತಾಣವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿರುವ ನಟ ಕಿಚ್ಚ ಸುದೀಪ್. ಸುದೀಪ್ ಸೋಷಿಯಲ್ ಮೀಡಿಯಾದ ಮೂಲಕ ತಮ್ಮ ಅಭಿಮಾನಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿ ಇರುತ್ತಾರೆ. ಸದ್ಯ ಇನ್ಸ್ಟಾಗ್ರಾಮ್ ನಲ್ಲಿ ಹೆಬ್ಬುಲಿ ಸುದೀಪ್ ಆರ್ಭಟ ಜೋರಾಗಿದೆ.

ಕಿಚ್ಚ ಸುದೀಪ್ ಈಗ ಇನ್ಸ್ಟಾಗ್ರಾಮ್ ನಲ್ಲಿ 2 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಕೆಲವೇ ತಿಂಗಳುಗಳ ಹಿಂದೆ ಇನ್ಸ್ಟಾಗ್ರಾಮ್ ಖಾತೆ ತೆರೆದಿದ್ದ ಸುದೀಪ್ ಕಡಿಮೆ ಸಮಯದಲ್ಲಿಯೇ ಇಷ್ಟೊಂದು ಹಿಂಬಾಲಕರನ್ನು ಹೊಂದಿದ್ದಾರೆ.

ಮಿಂಚಿನ ವೇಗದಲ್ಲಿ ಬೆಳೆಯುತ್ತಿದೆ ಕಿಚ್ಚ ಸುದೀಪ್ ಫಾಲೋವರ್ಸ್ ಸಂಖ್ಯೆ!ಇನ್ಸ್ಟಾಗ್ರಾಮ್

ಸುದೀಪ್ ಟ್ವಿಟ್ಟರ್ ನಷ್ಟು ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಸಕ್ರೀಯರಾಗಿಲ್ಲ. ಪ್ರತಿ ದಿನ ಇನ್ಸ್ಟಾಗ್ರಾಮ್ ಅಪ್ ಡೇಟ್ ಮಾಡುವುದಿಲ್ಲ. ಇನ್ನು ಬಿಗ್ ಬಾಸ್ ಕಾರ್ಯಕ್ರಮ, ದಿ ವಿಲನ್ ಸೇರಿದಂತೆ ತಮ್ಮ ಸಿನಿಮಾಗಳ ಮಾಹಿತಿಯನ್ನು ತಮ್ಮ ಖಾತೆಯಲ್ಲಿ ಸುದೀಪ್ ಹಂಚಿಕೊಂಡಿದ್ದಾರೆ. ಅಂದಹಾಗೆ, ಸುದೀಪ್ ಟ್ವಿಟ್ಟರ್ ನಲ್ಲಿ ಕೂಡ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕನ್ನಡದ ನಟರಾಗಿದ್ದಾರೆ. ಸದ್ಯ ಸುದೀಪ್ ರನ್ನು ಟ್ವಿಟ್ಟರ್ ನಲ್ಲಿ 1.97 ಮಿಲಿಯನ್ ಜನರು ಹಿಂಬಾಲಿಸುತ್ತಿದ್ದಾರೆ.

Kiccha Sudeep have 2 million followers in his instagram account

ಸುದೀಪ್ ಸದ್ಯ 'ದಿ ವಿಲನ್', 'ಕೋಟಿಗೊಬ್ಬ 3' ಮತ್ತು 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದಲ್ಲಿ ಬಿಜಿ ಇದ್ದಾರೆ. ಇಂದು ಕೆ ಸಿ ಸಿ (ಕನ್ನಡ ಚಲನಚಿತ್ರ ಕಪ್) ನಲ್ಲಿ ಸುದೀಪ್ ಭಾಗಿಯಾಗಿದ್ದಾರೆ. ಈ ಪಂದ್ಯಾವಳಿಯನ್ನು ಸಿಎಂ ಸಿದ್ಧರಾಮಯ್ಯ ಉದ್ಘಾಟನೆ ಮಾಡಿದ್ದಾರೆ.

English summary
Kannada actor Kiccha Sudeep have 2 million followers in his instagram account.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X